‘ಚಂದ್ರಮುಖಿ 2’ ಫ್ಲಾಪ್​: ಚಿತ್ರಮಂದಿರದಿಂದ ಎತ್ತಂಗಡಿ ಆದ್ರೂ ಸೂಪರ್​ ಹಿಟ್​ ಎಂದ ಕಂಗನಾ

|

Updated on: Oct 02, 2023 | 3:26 PM

Chandramukhi 2 Box Office Collection: ‘ಚಂದ್ರಮುಖಿ 2’ ಸಿನಿಮಾದಲ್ಲಿ ರಾಘವ ಲಾರೆನ್ಸ್​ ಮತ್ತು ಕಂಗನಾ ರಣಾವತ್​ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲಿ ಮೂಡಿಬಂದ ಈ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗಿದೆ. ಎಲ್ಲ ಭಾಷೆಗಳಲ್ಲೂ ಸೇರಿ 4 ದಿನಕ್ಕೆ ಈ ಚಿತ್ರ ಗಳಿಸಿರುವುದು ಕೇವಲ 24 ಕೋಟಿ ರೂಪಾಯಿ.

‘ಚಂದ್ರಮುಖಿ 2’ ಫ್ಲಾಪ್​: ಚಿತ್ರಮಂದಿರದಿಂದ ಎತ್ತಂಗಡಿ ಆದ್ರೂ ಸೂಪರ್​ ಹಿಟ್​ ಎಂದ ಕಂಗನಾ
ರಾಘವ ಲಾರೆನ್ಸ್​, ಕಂಗನಾ ರಣಾವತ್​
Follow us on

ನಟಿ ಕಂಗನಾ ರಣಾವತ್​ (Kangana Ranaut) ಅವರು ಒಂದು ಗೆಲುವಿಗಾಗಿ ಕಾದಿದ್ದಾರೆ. ‘ಚಂದ್ರಮುಖಿ 2’ ಸಿನಿಮಾದಿಂದ ಆ ಗೆಲುವು ಸಿಗಬಹುದು ಎಂದೇ ಅವರ ಅಭಿಮಾನಿಗಳು ಭಾವಿಸಿದ್ದರು. ಆದರೆ ಅವರ ಲೆಕ್ಕಾಚಾರ ತಲೆ ಕೆಳಗಾಗಿದೆ. ಬಾಲಿವುಡ್​ನಲ್ಲಿ ಗೆಲುವು ಮರೀಚಿಕೆ ಆಗಿದೆ ಎಂಬುದು ಗೊತ್ತಾದಾಗ ಅವರು ಸೌತ್​ ಫಿಲ್ಮ್​ ಇಂಡಸ್ಟ್ರಿಯವರ ಜೊತೆ ಕೈ ಜೋಡಿಸಿ ‘ಚಂದ್ರಮುಖಿ 2’ (Chandramukhi 2) ಚಿತ್ರದಲ್ಲಿ ನಟಿಸಿದರು. ಆದರೆ ಈ ಸಿನಿಮಾ ಕೂಡ ಕೈ ಹಿಡಿದಿಲ್ಲ. ಸೆಪ್ಟೆಂಬರ್​ 28ರಂದು ಬಿಡುಗಡೆ ಆದ ಈ ಚಿತ್ರ ಹೀನಾಯವಾಗಿ ಸೋತಿದೆ ಎಂದು ಟ್ರೇಡ್​ ವಿಶ್ಲೇಷಕರು ಹೇಳುತ್ತಿದ್ದಾರೆ. ಆದರೆ ಕಂಗನಾ ಮಾತ್ರ ತಮ್ಮ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ.

‘ಚಂದ್ರಮುಖಿ 2’ ಸಿನಿಮಾದಲ್ಲಿ ರಾಘವ ಲಾರೆನ್ಸ್​ ಮತ್ತು ಕಂಗನಾ ರಣಾವತ್​ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲಿ ಮೂಡಿಬಂದ ಈ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗಿದೆ. 5 ದಿನ ಪ್ರದರ್ಶನ ಕಂಡರೂ ಕೂಡ ಈ ಸಿನಿಮಾದ ಗಳಿಕೆ ಸಮಾಧಾನಕರವಾಗಿಲ್ಲ. ಎಲ್ಲ ಭಾಷೆಗಳಲ್ಲೂ ಸೇರಿ 4 ದಿನಕ್ಕೆ ಈ ಚಿತ್ರ ಗಳಿಸಿರುವುದು ಕೇವಲ 24 ಕೋಟಿ ರೂಪಾಯಿ.

ಟ್ರೇಡ್​ ವಿಶ್ಲೇಷಕ ಮನೋಬಲ ವಿಜಯಬಾಲನ್​ ಅವರು ‘ಚಂದ್ರಮುಖಿ 2’ ಸಿನಿಮಾವನ್ನು ಡಿಸಾಸ್ಟರ್​ (ದುರಂತ) ಎಂದು ಕರೆದಿದ್ದಾರೆ. ಅಲ್ಲದೇ ಹಲವು ಚಿತ್ರಮಂದಿರದಿಂದ ಈ ಸಿನಿಮಾವನ್ನು ಕಿತ್ತು ಹಾಕಲಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಜನರು ಬಾರದ ಕಾರಣ ಎತ್ತಂಗಡಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ ಚಿತ್ರತಂಡದವರು ಬೇರೆಯದೇ ವಾದ ಮುಂದಿಡುತ್ತಿದ್ದಾರೆ. ‘ರನ್ನಿಂಗ್​ ಸಕ್ಸಸ್​ಪುಲಿ’ ಎಂದು ಸಾರುವ ಪೋಸ್ಟರ್​ ರಾರಾಜಿಸುತ್ತಿದೆ. 4 ದಿನಕ್ಕೆ 40 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಆಗಿದೆ ಎಂದು ಕೆಲವರು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ ರಣಾವತ್​ ಅವರು, ‘ನಮ್ಮ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಧನ್ಯವಾಗಳು’ ಎಂದು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಗೆದ್ದ ಶ್ರೀಲೀಲಾ, ಕಂಗನಾ ಸಾಧಾರಣ, ಕಳಪೆ ಓಪನಿಂಗ್ ಪಡೆದ ವ್ಯಾಕ್ಸಿನ್ ವಾರ್;

ಸೆಪ್ಟೆಂಬರ್​ 28ರಂದು ‘ಚಂದ್ರಮುಖಿ 2’ ಮಾತ್ರವಲ್ಲದೇ ನಯನತಾರಾ ನಟನೆಯ ‘ಇರೈವಾನ್​’, ಶ್ರೀಲೀಲಾ-ರಾಮ್​ ಪೋತಿನೇನಿ ಅಭಿನಯದ ‘ಸ್ಕಂದ’ ಸಿನಿಮಾ ಕೂಡ ಸೋತಿವೆ ಎಂದು ಟ್ರೇಡ್​ ವಿಶ್ಲೇಷಕ ಮನೋಬಲ ವಿಜಯಬಾಲನ್​ ಅವರು ಟ್ವೀಟ್​ ಮಾಡಿದ್ದಾರೆ. ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್​ ವಾರ್​’ ಚಿತ್ರ ಕೂಡ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಮಾಡುವಲ್ಲಿ ವಿಫಲವಾಗಿದೆ. ಕಂಗನಾ ನಟನೆ ‘ತೇಜಸ್​’ ಸಿನಿಮಾ ಅಕ್ಟೋಬರ್​ 27ರಂದು ಬಿಡುಗಡೆ ಆಗಲಿದೆ. ಅವರೇ ನಿರ್ದೇಶನ ಮಾಡಿರುವ ‘ಎಮರ್ಜೆನ್ಸಿ’ ಚಿತ್ರ ಕೂಡ ರಿಲೀಸ್​ಗೆ ಸಜ್ಜಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.