ನವ ದಂಪತಿ ಕಿಯಾರಾ-ಸಿದ್ದಾರ್ಥ್ ಬಳಿ ಕ್ಷಮೆ ಕೇಳಿದ ರಾಮ್ ಚರಣ್ ಪತ್ನಿ ಉಪಾಸನಾ

ಸಿದ್ದಾರ್ಥ್ ಮಲ್ಹೋತ್ರ ಅವರು  ಕಿಯಾರಾ ಅವರನ್ನು ಪ್ರೀತಿಸುತ್ತಿದ್ದರು. ಈ ಪ್ರೀತಿಗೆ ಹೊಸ ಅರ್ಥ ಸಿಕ್ಕಿದೆ. ಕುಟುಂಬದವರು ಹಾಗೂ ಚಿತ್ರರಂಗದವರ ಎದುರು ಈ ದಂಪತಿ ಹಸೆಮಣೆ ಏರಿದ್ದಾರೆ.

ನವ ದಂಪತಿ ಕಿಯಾರಾ-ಸಿದ್ದಾರ್ಥ್ ಬಳಿ ಕ್ಷಮೆ ಕೇಳಿದ ರಾಮ್ ಚರಣ್ ಪತ್ನಿ ಉಪಾಸನಾ
ಉಪಾಸನಾ-ಕಿಯಾರಾ, ಸಿದ್ದಾರ್ಥ್​

Updated on: Feb 08, 2023 | 12:44 PM

ಸಿದ್ದಾರ್ಥ್ ಮಲ್ಹೋತ್ರ (Siddharth Malhotra) ಹಾಗೂ ಕಿಯಾರಾ ಅಡ್ವಾಣಿ ಅವರು ಅದ್ದೂರಿಯಾಗಿ ಮದುವೆಯಾಗಿದ್ದಾರೆ. ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಸೂರ್ಯಗಢ ಹೋಟೆಲ್​ನಲ್ಲಿ ಈ ದಂಪತಿಯ ಮದುವೆ ನಡೆದಿದೆ. ಈ ಮದುವೆಗೆ ಬಾಲಿವುಡ್​ನಿಂದ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ಎಲ್ಲರಿಗೂ ಅದ್ದೂರಿ ಸ್ವಾಗತ ಕೋರಲಾಯಿತು. ಫೆ.7ರ ರಾತ್ರಿ ವೇಳೆಗೆ ಈ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ರಾಮ್​ ಚರಣ್ (Ram Charan) ಪತ್ನಿ ಉಪಾಸನಾ ಕೊನಿಡೆಲಾ ಅವರು ನವದಂಪತಿ ಬಳಿ ಕ್ಷಮೆ ಕೇಳಿದ್ದಾರೆ.

ಸಿದ್ದಾರ್ಥ್ ಮಲ್ಹೋತ್ರ ಅವರು  ಕಿಯಾರಾ ಅವರನ್ನು ಪ್ರೀತಿಸುತ್ತಿದ್ದರು. ಈ ಪ್ರೀತಿಗೆ ಹೊಸ ಅರ್ಥ ಸಿಕ್ಕಿದೆ. ಕುಟುಂಬದವರು ಹಾಗೂ ಚಿತ್ರರಂಗದವರ ಎದುರು ಈ ದಂಪತಿ ಹಸೆಮಣೆ ಏರಿದ್ದಾರೆ. ಅವರ ಹೊಸ ಬಾಳಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಅದೇ ರೀತಿ ಉಪಾಸನಾ ಕೂಡ ಕಿಯಾರಾಗೆ ವಿಶ್ ಮಾಡಿ, ಕ್ಷಮೆ ಕೇಳಿದ್ದಾರೆ.

‘ಅಭಿನಂದನೆಗಳು. ಸುಂದರವಾಗಿ ಕಾಣುತ್ತಿದ್ದೀರಿ. ಕ್ಷಮಿಸಿ ನಾವು ಮದುವೆಗೆ ಬರೋಕೆ ಸಾಧ್ಯವಾಗಿಲ್ಲ’ ಎಂದು ಉಪಾಸನಾ ಕಮೆಂಟ್ ಮಾಡಿದ್ದಾರೆ. ಆಲಿಯಾ ಭಟ್, ಕತ್ರಿನಾ ಕೈಫ್​, ವಿಕ್ಕಿ ಕೌಶಲ್ ಸೇರಿ ಅನೇಕ ಸೆಲೆಬ್ರಿಟಿಗಳು ದಂಪತಿಗೆ ಶುಭಾಶಯ ಕೋರಿದ್ದಾರೆ.

ಕಿಯಾರಾ ಹಾಗೂ ಸಿದ್ದಾರ್ಥ್ ಮದುವೆಗೆ ತೊಟ್ಟಂತಹ ಉಡುಗೆ ಎಲ್ಲರ ಗಮನ ಸೆಳೆದಿದೆ. ಈ ಫೋಟೋಗಳಿಗೆ ಫ್ಯಾನ್ಸ್ ಬಗೆ ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ಸಿದ್ದಾರ್ಥ್-ಕಿಯಾರಾ ಜೋಡಿಯನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು ಇವರ ಉಡುಗೆ ಬಗ್ಗೆ ಪ್ರಶಂಸೆ ಹೊರಹಾಕಿದ್ದಾರೆ. ಕಿಯಾರಾ ಬಟ್ಟೆಯನ್ನು ಮನೀಶ್ ಮಲ್ಹೋತ್ರ ಡಿಸೈನ್ ಮಾಡಿದ್ದಾರೆ ಎನ್ನಲಾಗಿದೆ.

ರಾಮ್ ಚರಣ್ ಅವರ 15ನೇ ಚಿತ್ರಕ್ಕೆ ಕಿಯಾರಾ ಅಡ್ವಾಣಿ ನಾಯಕಿ. ಈ ಚಿತ್ರದ ಕೆಲಸಗಳು ಭರದಿಂದ ಸಾಗಿವೆ. ಈ ಕಾರಣಕ್ಕೆ ರಾಮ್ ಚರಣ್ ಕುಟುಂಬಕ್ಕೂ ಕಿಯಾರಾ ಆಹ್ವಾನ ನೀಡಿದ್ದರು. ಆದರೆ, ಬೇರೆ ಕೆಲಸಗಳ ಕಾರಣದಿಂದ ಅವರಿಗೆ ಮದುವೆಗೆ ಬರೋಕೆ ಸಾಧ್ಯವಾಗಿಲ್ಲ.

ಸಿದ್ದಾರ್ಥ್​-ಕಿಯಾರಾ ವಯಸ್ಸಿನ ಅಂತರ

2018ರಲ್ಲಿ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರ ಅವರು ಸೆಟ್​ ಒಂದರಲ್ಲಿ ಭೇಟಿ ಆಗಿದ್ದರು. ಮೊದಲ ಭೇಟಿಯಲ್ಲಿ ಇವರ ಮಧ್ಯೆ ಫ್ರೆಂಡ್​ಶಿಪ್​ ಬೆಳೆಯಿತು. ಆ ಫ್ರೆಂಡ್​ಶಿಪ್ ಪ್ರೀತಿಯಾಗಿ ಬದಲಾಯಿತು. ‘ಶೇರ್ಷಾ’ ಸಿನಿಮಾದಲ್ಲಿ ಕಿಯಾರಾ ಹಾಗೂ ಸಿದ್ದಾರ್ಥ್ ಒಟ್ಟಾಗಿ ನಟಿಸಿದರು. ಇವರ ಕೆಮಿಸ್ಟ್ರಿ ಕೆಲಸ ಮಾಡಿತು. ಈ ಜೋಡಿಯನ್ನು ಪ್ರೇಕ್ಷಕರು ಇಷ್ಟಪಟ್ಟರು. ಈಗ ಈ ಜೋಡಿ ಹಸೆಮಣೆ ತುಳಿದಿದ್ದು ಅನೇಕರಿಗೆ ಖುಷಿ ಇದೆ.

ಈ ದಂಪತಿ ಮಧ್ಯೆ ಸುಮಾರು ಏಳು ವರ್ಷಗಳ ವಯಸ್ಸಿನ ಅಂತರ ಇದೆ. ಸಿದ್ದಾರ್ಥ್ ಜನಿಸಿದ್ದು 1985ರ ಜನವರಿ 16ರಂದು. ಕಿಯಾರಾ ಜನಿಸಿದ್ದು ಜುಲೈ 31, 1991ರಲ್ಲಿ. ಇಬ್ಬರ ನಡುವೆ ಏಳುವರೆ ವರ್ಷ ವಯಸ್ಸಿನ ಅಂತರ ಇದೆ. ಇದನ್ನು ತಿಳಿದ ಅನೇಕರು ಅಚ್ಚರಿಗೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ