ನಟಿ ಉರ್ಫಿ ಜಾವೇದ್ (Urfi Javed) ಅವರು ಸದಾ ಸುದ್ದಿಯಾಗುವುದು ವಿಚಿತ್ರ ಬಟ್ಟೆಗಳ ಕಾರಣಕ್ಕೆ. ಆದರೆ ಈಗ ಅವರು ಇನ್ನೊಂದು ಕಾರಣದಿಂದ ಸುದ್ದಿ ಆಗಿದ್ದಾರೆ. ಉರ್ಫಿ ಜಾವೇದ್ ಅವರ ಊದಿಕೊಂಡಿರುವ ಮುಖದ (Urfi Javed swollen face) ಫೋಟೋಗಳು ವೈರಲ್ ಆಗಿವೆ. ಹಾಗಂತ ಇವು ಲೀಕ್ ಆದ ಫೋಟೋಗಳಲ್ಲ. ಸ್ವತಃ ಉರ್ಫಿ ಜಾವೇದ್ ಅವರೇ ಈ ಫೋಟೋಗಳನ್ನು (Urfi Javed Photos) ಹಂಚಿಕೊಂಡಿದ್ದಾರೆ. ತಮ್ಮ ಈ ಸ್ಥಿತಿಗೆ ಕಾರಣ ಏನು ಎಂಬುದನ್ನು ಕೂಡ ಅವರು ಹೇಳಿದ್ದಾರೆ. ಅವರಿಗೆ ಆರೋಗ್ಯ ಸಮಸ್ಯೆ ಇದೆ. ಆ ಕಾರಣದಿಂದಲೇ ಅವರ ಮುಖ ಊದಿಕೊಂಡಿದೆ. ಆ ಬಗ್ಗೆ ಅವರು ವಿವರ ನೀಡಿದ್ದಾರೆ.
‘ನನ್ನ ಮುಖಕ್ಕೆ ಸಂಬಂಧಿಸಿದಂತೆ ಹಾಗೂ ಫಿಲ್ಲರ್ಸ್ ಬಳಕೆಯ ಕುರಿತಂತೆ ಅನೇಕ ಟೀಕೆ ಎದುರಿಸಿದ್ದೇವೆ. ನನಗೆ ಅಲರ್ಜಿ ಸಮಸ್ಯೆ ಇದೆ. ಬಹುತೇಕ ಸಂದರ್ಭಗಳಲ್ಲಿ ನನ್ನ ಮುಖ ದಪ್ಪ ಆಗಿರುತ್ತದೆ. ಬೆಳಗ್ಗೆ ಎದ್ದಾಗ ಪ್ರತಿ ಎರಡು ದಿನಕ್ಕೆ ಒಮ್ಮೆ ಈ ರೀತಿ ಆಗಿರುತ್ತದೆ. ಇದರಿಂದ ನನಗೆ ಯಾವಾಗಲೂ ಕಿರಿಕಿರಿ ಆಗುತ್ತದೆ’ ಎಂದು ಉರ್ಫಿ ಜಾವೇದ್ ಅವರು ಹೇಳಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರು ಫೋಟೋ ಸಹಿತ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಸೀರೆ ಧರಿಸಿದರೂ ತಮ್ಮ ಸ್ಟೈಲ್ ಬಿಡಲಿಲ್ಲ ನಟಿ ಉರ್ಫಿ ಜಾವೇದ್
‘ಫಿಲ್ಲರ್ಸ್ ಸಮಸ್ಯೆ ಅಲ್ಲ. ಅಲರ್ಜಿ ಆಗಿದೆ. ಚಿಕಿತ್ಸೆ ನಡೆಯುತ್ತಿದೆ. ಮುಂದಿನ ಸಾರಿ ನೀವು ನನ್ನ ಊದಿಕೊಂಡ ಮುಖ ನೋಡಿದರೆ ಅದು ನನ್ನ ಅಲರ್ಜಿ ದಿನ ಎಂದು ತಿಳಿಯಿರಿ. ಮಾಮೂಲಿ ಫಿಲ್ಲರ್ಸ್ ಹೊರತುಪಡಿಸಿ ಬೇರೆ ಏನನ್ನೂ ನಾನು ಮಾಡಿಸಿಲ್ಲ. ಊದಿಕೊಂಡಿರುವ ಮುಖ ನೋಡಿದಾಗ ಫಿಲ್ಲರ್ಸ್ ಬಗ್ಗೆ ನನಗೆ ಸಲಹೆ ನೀಡಬೇಡಿ. ಅನುಕಂಪ ತೋರಿಸಿ, ಮುಂದೆ ಸಾಗಿ’ ಎಂದು ಉರ್ಫಿ ಜಾವೇದ್ ಪೋಸ್ಟ್ ಮಾಡಿದ್ದಾರೆ.
ಸಾಮಾನ್ಯವಾಗಿ ನಟಿಯರು ಇಂಥ ಫೋಟೋಗಳನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಉರ್ಫಿ ಜಾವೇದ್ ಅವರು ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅವರ ಪ್ರಾಮಾಣಿಕತೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ‘ಬಿಗ್ ಬಾಸ್ ಒಟಿಟಿ’ ಶೋನಲ್ಲಿ ಸ್ಪರ್ಧಿಯಾಗಿದ್ದ ಉರ್ಫಿ ಜಾವೇದ್ ಅವರು ಜನಪ್ರಿಯತೆ ಹೆಚ್ಚಿಸಿಕೊಂಡರು. ಇತ್ತೀಚೆಗೆ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಕೂಡ ಸಿಕ್ಕಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.