ನಟಿ ಉರ್ಫಿ ಜಾವೇದ್ ಅವರು ಬೋಲ್ಡ್ ವ್ಯಕ್ತಿತ್ವದಿಂದಲೇ ಗುರುತಿಸಿಕೊಂಡಿದ್ದಾರೆ. ಬಟ್ಟೆಗಳ ವಿಚಾರದಲ್ಲಿ ಅವರಿಗೆ ಯಾವುದೇ ಮುಲಾಜು ಇಲ್ಲ. ಆ ಕಾರಣಕ್ಕೆ ಅವರನ್ನು ಅನೇಕರು ಟ್ರೋಲ್ ಮಾಡುತ್ತಾರೆ. ಹಾಗಂತ ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ತೀರಾ ಕೀಳುಮಟ್ಟದ ಕಮೆಂಟ್ ಮಾಡಿದರೆ ಅದನ್ನು ಉರ್ಫಿ ಜಾವೇದ್ ಸಹಿಸುವುದಿಲ್ಲ. ಇತ್ತೀಚೆಗೆ ಅಂಥದ್ದೊಂದು ಘಟನೆ ನಡೆದಿದೆ. ಫ್ಯಾನ್ಸ್ ಮತ್ತು ಫ್ಯಾಮಿಲಿ ಎದುರಿನಲ್ಲೇ ಉರ್ಫಿ ಜಾವೇದ್ಗೆ ಅಶ್ಲೀಲವಾದ ಪ್ರಶ್ನೆ ಕೇಳಿದ್ದಾನೆ. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಉರ್ಫಿ ಜಾವೇದ್ ಅವರು ಅಸಮಾಧಾನ ತೋಡಿಕೊಂಡಿದ್ದಾರೆ.
‘ನಿನ್ನೆ ನನ್ನ ಕುಟುಂಬದವರ ಎದುರಿನಲ್ಲಿ ತುಂಬ ಕಿರಿಕಿರಿ ಆಗುವಂತಹ ಘಟನೆ ನಡೆಯಿತು. ಪಾಪರಾಜಿಗಳು ನನ್ನ ಫೋಟೋ ತೆಗೆಯುತ್ತಿರುವಾಗ ಒಂದು ಹುಡುಗರ ಗುಂಪು ಪಾಸ್ ಆಯಿತು. ಎಲ್ಲರ ಎದುರಿನಲ್ಲೂ ‘ನೀನು ಎಷ್ಟು ಜನರ ಜೊತೆ ಮಲಗಿದ್ದೀಯಾ’ ಅಂತ ಕೂಗಿ ಕೇಳಿದ. ಆ ಹುಡುಗನಿಗೆ ಅಂದಾಜು 15 ವರ್ಷ ಇರಬಹುದು. ನನ್ನ ಕುಟುಂಬ ಮತ್ತು ತಾಯಿ ಎದುರಿನಲ್ಲೇ ಅವನು ಹಾಗೆ ಕೇಳಿದ’ ಎಂದು ಉರ್ಫಿ ಜಾವೇದ್ ಅವರು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಉರ್ಫಿ ಮೂರು ವರ್ಷಗಳಿಂದ ದೈಹಿಕ ಸಂಪರ್ಕ ನಡೆಸಿಲ್ಲ; ಕಾರಣ ಮಾತ್ರ ವಿಚಿತ್ರ
‘ಆ ಪ್ರಶ್ನೆ ಕೇಳಿಸಿಕೊಂಡು ನನಗೆ ಶಾಕ್ ಆಯಿತು. ಪಾಪರಾಜಿಗಳ ಎದುರಿನಲ್ಲೇ ನಾನು ಆ ಹುಡುಗನಿಗೆ ಬಾರಿಸಬೇಕು ಎಂದುಕೊಂಡೆ. ಮಹಿಳೆಯರಿಗೆ ಮತ್ತು ಎಲ್ಲ ಜನರಿಗೆ ಗೌರವ ಕೊಡುವುದನ್ನು ನಿಮ್ಮ ಹುಡುಗರಿಗೆ ಕಲಿಸಿಕೊಡಿ. ಆ ಹುಡುಗನ ತಂದೆ-ತಾಯಿ ಬಗ್ಗೆ ನನಗೆ ಪಾಪ ಎನಿಸಿತು’ ಎಂದು ಉರ್ಫಿ ಜಾವೇದ್ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಉರ್ಫಿ ಜಾವೇದ್ ಅವರ ಪರ್ಸನಲ್ ಲೈಫ್ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತಹ ವೆಬ್ ಶೋ ಬಿಡುಗಡೆ ಆಗಿದೆ. ‘ಫಾಲೋ ಕಲ್ ಲೋ ಯಾರ್’ ಎಂಬ ಶೀರ್ಷಿಕೆಯ ಈ ಶೋ ಒಟಿಟಿಯಲ್ಲಿ (ಅಮೇಜಾನ್ ಪ್ರೈಂ ವಿಡಿಯೋ) ಪ್ರಸಾರ ಆಗುತ್ತಿದೆ. ಇದರ ಪ್ರಚಾರ ಕಾರ್ಯದಲ್ಲಿ ಉರ್ಫಿ ಜಾವೇದ್ ಅವರು ಬ್ಯುಸಿ ಆಗಿದ್ದಾರೆ. ಪ್ರಮೋಷನ್ ವೇಳೆಯೇ ಅವರಿಗೆ ಬಾಲಕನಿಂದ ಅಶ್ಲೀಲ ಪ್ರಶ್ನೆ ಎದುರಾಗಿದೆ. ಉರ್ಫಿ ಪರವಾಗಿ ಅನೇಕರು ಧ್ವನಿ ಎತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.