ಅರೆಬರೆ ಬಟ್ಟೆ ತೊಟ್ಟು ವಿಡಿಯೋ ಪೋಸ್ಟ್​ ಮಾಡಿದ ಉರ್ಫಿ; ನೆಟ್ಟಿಗರಿಂದ ಟೀಕೆ

| Updated By: ರಾಜೇಶ್ ದುಗ್ಗುಮನೆ

Updated on: Apr 08, 2022 | 9:24 PM

‘ಬಿಗ್​ ಬಾಸ್ ಒಟಿಟಿ’ಯಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು ಉರ್ಫಿ ಜಾವೇದ್. ಅಲ್ಲಿ ಕಸದ ಚೀಲದಿಂದ ಅವರು ಉಡುಗೆ ಮಾಡಿ ಗಮನ ಸೆಳೆದಿದ್ದರು. ಇದಾದ ಬಳಿಕ ಅವರು ಸುದ್ದಿಯಾಗಿದ್ದು ಕೇವಲ ಬಟ್ಟೆ ವಿಚಾರಕ್ಕೆ ಮಾತ್ರ.

ಅರೆಬರೆ ಬಟ್ಟೆ ತೊಟ್ಟು ವಿಡಿಯೋ ಪೋಸ್ಟ್​ ಮಾಡಿದ ಉರ್ಫಿ; ನೆಟ್ಟಿಗರಿಂದ ಟೀಕೆ
ಊರ್ಫಿ
Follow us on

‘ಉರ್ಫಿ ಜಾವೇದ್ (Urfi Javed) ಅವರಿಗೆ ಏನೋ ಆಗಿದೆ’- ಹೀಗೊಂದು ಮಾತನ್ನು ಸೋಶಿಯಲ್​ ಮೀಡಿಯಾ ಬಳಕೆದಾರರು ಹೇಳುತ್ತಲೇ ಇದ್ದಾರೆ. ಇದಕ್ಕೆ ಕಾರಣ ಅವರು ನಡೆದುಕೊಳ್ಳುತ್ತಿರುವ ರೀತಿ. ‘ಬಿಗ್ ಬಾಸ್​ ಒಟಿಟಿ’ಯಿಂದ (Bigg Boss OTT) ಖ್ಯಾತಿ ಗಳಿಸಿ ಹೊರ ಬಂದ ಅವರು ನಿತ್ಯ ಒಂದಲ್ಲಾ ಒಂದು ವಿಚಿತ್ರ ಬಟ್ಟೆ ಧರಿಸುತ್ತಾರೆ. ಅವರು ಧರಿಸೋದು ಅರೆಬರೆ ಬಟ್ಟೆಗಳು ಎನ್ನುವ ಕಾರಣಕ್ಕೆ ಸಾಕಷ್ಟು ಚರ್ಚೆ ಆಗುತ್ತಿದ್ದಾರೆ. ಇದರ ಜತೆಗೆ ಸಾಕಷ್ಟು ಟೀಕೆಗಳನ್ನೂ ಅವರು ಎದುರಿಸುತ್ತಿದ್ದಾರೆ. ಆದರೆ, ಇದಕ್ಕೆ ಅವರು ತಲೆಕೆಡಿಸಿಕೊಂಡಿಲ್ಲ. ದಿನ ಕಳೆದಂತೆ ಅವರು ಈ ರೀತಿಯ ಹುಚ್ಚಾಟವನ್ನು ಹೆಚ್ಚು ಮಾಡುತ್ತಲೇ ಇದ್ದಾರೆ. ಈಗ ಅವರು ಹೊಸ ವಿಡಿಯೋದೊಂದಿಗೆ ಮತ್ತೆ ಅಭಿಮಾನಿಗಳ ಎದುರು ಬಂದಿದ್ದಾರೆ.

‘ಬಿಗ್​ ಬಾಸ್ ಒಟಿಟಿ’ಯಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು ಉರ್ಫಿ ಜಾವೇದ್. ಅಲ್ಲಿ ಕಸದ ಚೀಲದಿಂದ ಅವರು ಉಡುಗೆ ಮಾಡಿ ಗಮನ ಸೆಳೆದಿದ್ದರು. ಇದಾದ ಬಳಿಕ ಅವರು ಸುದ್ದಿಯಾಗಿದ್ದು ಕೇವಲ ಬಟ್ಟೆ ವಿಚಾರಕ್ಕೆ ಮಾತ್ರ. ನಿತ್ಯ ಚಿತ್ರವಿಚಿತ್ರ ಬಟ್ಟೆ ಹಾಕಿ ಕಾಣಿಸಿಕೊಳ್ಳುವ ಅವರು, ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ನೀಡುತ್ತಾರೆ. ಈಗ ಅವರು ಹೊಸ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಹೊಸ ರೀಲ್ಸ್​ ಹಂಚಿಕೊಂಡಿದ್ದಾರೆ ಉರ್ಫಿ. ಅವರು ಧರಿಸಿರುವ ಡ್ರೆಸ್ ತುಂಬಾನೇ ವಿಚಿತ್ರವಾಗಿದೆ. ಈ ವಿಡಿಯೋಗೆ ‘ಅಹಿತಕರ’ ಎನ್ನುವ ಕ್ಯಾಪ್ಶನ್ ನೀಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಉರ್ಫಿ ಅವರನ್ನು ಟ್ರೋಲ್ ಮಾಡಲು ಶುರುಹಚ್ಚಿಕೊಂಡಿದ್ದಾರೆ. ‘ಆದಿ ಮಾನವರು ಮತ್ತೆ ಮರಳುತ್ತಿದ್ದಾರೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ‘ಬಡವರಿಗೆ ಬಟ್ಟೆ ನೀಡಿ’ ಎಂದು ಬರೆದುಕೊಂಡಿದ್ದಾರೆ.

ಅಳಲು ತೋಡಿಕೊಂಡಿದ್ದ ನಟಿ:

ಕಿರುತೆರೆಯ ಹಲವು ಶೋಗಳಲ್ಲಿ ಭಾಗವಹಿಸಿದ್ದರೂ ಕೂಡ ಟಿವಿ ಇಂಡಸ್ಟ್ರೀ ಅವರು ತಮಗೆ ಮರ್ಯಾದೆ ಕೊಡಲಿಲ್ಲ ಎಂಬುದು ಉರ್ಫಿ ಜಾವೇದ್​ ತಕರಾರು. ಇಷ್ಟಬಂದ ರೀತಿಯಲ್ಲಿ ಉರ್ಫಿ ಬಟ್ಟೆ ಧರಿಸಿದ್ದಕ್ಕಾಗಿ ಕಿರಿತೆರೆಯ ಸೆಲೆಬ್ರಿಟಿಗಳೇ ಕೆಟ್ಟದಾಗಿ ಕಮೆಂಟ್​ ಮಾಡಿದ್ದಾರೆ. ಅದು ಕೂಡ ಅವರ ಬೇಸರಕ್ಕೆ ಕಾರಣ ಆಗಿದೆ. ‘ನನ್ನ ಫೋಟೋಗಳು ಅಪ್​ಲೋಡ್​ ಆದಾಗ ಅಥವಾ ವೈರಲ್​ ಆದಾಗ ಬ್ಲೂ ಟಿಕ್​ ಇರುವ ಕಿರುತೆರೆಯ ಸೆಲೆಬ್ರಿಟಿಗಳು ಕೆಟ್ಟದಾಗಿ ಕಮೆಂಟ್​ ಮಾಡುತ್ತಾರೆ. ಇವರಿಗೆಲ್ಲ ನಾನೇನು ಅನ್ಯಾಯ ಮಾಡಿದ್ದೇನೆ? ಯಾಕೆ ಈ ರೀತಿಯಾಗಿ ಕೆಟ್ಟ ಕಮೆಂಟ್​ ಮಾಡ್ತಾರೆ’ ಎಂದು ಉರ್ಫಿ ಜಾವೇದ್​ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಗವದ್ಗೀತೆ ಹಿಡಿದು ಬಂದ ಮುಸ್ಲಿಂ ನಟಿ ಉರ್ಫಿ; ‘​ನಾನು ಜಾವೇದ್​ ಅಖ್ತರ್​ ಮೊಮ್ಮಗಳಲ್ಲ’ ಎಂದಿದ್ದೇಕೆ?

‘ಮುಸ್ಲಿಂ ಹುಡುಗನನ್ನು ಮದುವೆ ಆಗಲ್ಲ’: ಬಲವಾದ ಕಾರಣ ನೀಡಿದ ಮುಸ್ಲಿಂ ನಟಿ ಉರ್ಫಿ ಜಾವೇದ್​