Urfi Javed: ಮಾದಕವಾಗಿ ಸೀರೆ ಧರಿಸಿ ಉಯ್ಯಾಲೆಯಿಂದ ಬಿದ್ದ ಉರ್ಫಿ ಜಾವೇದ್​; ಕಾಪಾಡಲು ಬಂದಿದ್ದು 9 ಪುರುಷರು

| Updated By: ಮದನ್​ ಕುಮಾರ್​

Updated on: Oct 18, 2022 | 11:14 AM

Urfi Javed Viral Video: ಉರ್ಫಿ ಜಾವೇದ್​ ಅವರ ಈ ವಿಡಿಯೋ ನೋಡಿ ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಪೋಸ್ಟ್​ ಮಾಡಿದ ಕೆಲವೇ ಗಂಟೆಗಳಲ್ಲಿ ಇದು 12 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

Urfi Javed: ಮಾದಕವಾಗಿ ಸೀರೆ ಧರಿಸಿ ಉಯ್ಯಾಲೆಯಿಂದ ಬಿದ್ದ ಉರ್ಫಿ ಜಾವೇದ್​; ಕಾಪಾಡಲು ಬಂದಿದ್ದು 9 ಪುರುಷರು
ಉರ್ಫಿ ಜಾವೇದ್
Follow us on

ನಟಿ ಉರ್ಫಿ ಜಾವೇದ್ (Urfi Javed)​ ಅವರು ಯಾವಾಗಲೂ ಟ್ರೆಂಡ್​ ಸೃಷ್ಟಿ ಮಾಡುತ್ತಾರೆ. ಅವರ ಪ್ರತಿ ಡ್ರೆಸ್​ ಕೂಡ ನೆಟ್ಟಿಗರ ಕಣ್ಣು ಕುಕ್ಕುತ್ತದೆ. ವಿಚಿತ್ರವಾಗಿ ಬಟ್ಟೆ ಹಾಕುವ ವಿಚಾರದಿಂದ ಅವರು ಅನೇಕ ಬಾರಿ ಟ್ರೋಲ್​ ಆಗಿದ್ದುಂಟು. ಹಾಗಂತ ಅವರು ಟ್ರೋಲ್​ಗಳಿಗೆ ಬಗ್ಗಿಲ್ಲ. ಯಾರು ಏನೇ ಹೇಳಿದರೂ ತಮಗೆ ಬೇಕಾದ ರೀತಿಯಲ್ಲೇ ಬಟ್ಟೆ (Urfi Javed Dress) ಧರಿಸುತ್ತಾರೆ. ತೀರಾ ನಾಜೂಕಿನ ಬಟ್ಟೆ ಧರಿಸಿ ನಡೆದು ಬರುವಾಗ ‘ಹುಷಾರು ಮೇಡಂ.. ಸ್ವಲ್ಪ ಯಾಮಾರಿದರೂ ಅಪಾಯ ಗ್ಯಾರಂಟಿ’ ಅಂಥ ಎಚ್ಚರಿಕೆ ನೀಡಿದವರೂ ಇದ್ದಾರೆ. ಆದರೂ ಉರ್ಫಿ ಜಾವೇದ್​ ತಲೆ ಕೆಡಿಸಿಕೊಳ್ಳುವವರಲ್ಲ. ಇತ್ತೀಚೆಗೆ ಅವರು ಆರೆಂಜ್​ ಬಣ್ಣದ ಸೀರೆ ಧರಿಸಿ ಉಯ್ಯಾಲೆಯಲ್ಲಿ ತೂಗಾಡುತ್ತಿದ್ದರು. ಆಗ ಬ್ಯಾಲೆನ್ಸ್​ ತಪ್ಪಿ ಕೆಳಗೆ ಬಿದ್ದಿದ್ದಾರೆ. ಆ ಸಂದರ್ಭದ ವಿಡಿಯೋ (Urfi Javed Viral Video) ವೈರಲ್​ ಆಗಿದೆ.

ಏನಿದು ಘಟನೆ?

ಇದನ್ನೂ ಓದಿ
ಅಶ್ಲೀಲ​ ವೆಬ್​ಸೈಟ್​ನಲ್ಲಿ ಉರ್ಫಿ ಜಾವೇದ್​ ಫೋಟೋ; ಪ್ರತಿ ದಿನ ರೇಪ್​ ಬೆದರಿಕೆ: ಶಾಕಿಂಗ್​ ವಿಚಾರ ತೆರೆದಿಟ್ಟ ನಟಿ
ಪ್ಯಾಂಟ್​ ಮೇಲೆ ಪ್ಯಾಂಟ್​ ಅಂಟಿಸಿಕೊಂಡು ಬಂದ ಉರ್ಫಿ ಜಾವೇದ್​; ಇಲ್ಲಿದೆ ವಿಚಿತ್ರ ಅವತಾರದ ವಿಡಿಯೋ
‘ನಂಗೆ ಮರ್ಯಾದೆ ಕೊಡಲ್ಲ, ಸೆಲೆಬ್ರಿಟಿಗಳೇ ಕೆಟ್ಟ ಕಮೆಂಟ್​​ ಮಾಡ್ತಾರೆ’: ಎಲ್ಲವನ್ನೂ ಹೇಳಿಕೊಂಡ ಉರ್ಫಿ ಜಾವೇದ್​
‘ಮುಸ್ಲಿಂ ಹುಡುಗನನ್ನು ಮದುವೆ ಆಗಲ್ಲ’: ಬಲವಾದ ಕಾರಣ ನೀಡಿದ ಮುಸ್ಲಿಂ ನಟಿ ಉರ್ಫಿ ಜಾವೇದ್​

ಉರ್ಫಿ ಜಾವೇದ್​ ಅವರು ಅನೇಕ ವಿಡಿಯೋಗಳನ್ನು ಮಾಡುತ್ತಾರೆ. ಬಗೆಬಗೆಯ ರೀಲ್ಸ್​ ಮಾಡಿ ಗಮನ ಸೆಳೆಯುತ್ತಾರೆ. ಅನೇಕ ಬ್ರ್ಯಾಂಡ್​ಗಳಿಗೆ ಅವರು ರಾಯಭಾರಿ ಕೂಡ ಹೌದು. ಇತ್ತೀಚೆಗೆ ಸಾಂಗ್​ ಶೂಟಿಂಗ್​ ಮಾಡುವಾಗ ಅವರು ಉಯ್ಯಾಲೆಯಲ್ಲಿ ತೂಗಾಡುತ್ತಿದ್ದರು. ಅವರ ಸುತ್ತಮುತ್ತ ಪುರುಷ ಡ್ಯಾನ್ಸರ್​ಗಳು ಕುಣಿಯುತ್ತಿದ್ದರು. ಬ್ಯಾಲೆನ್ಸ್​ ತಪ್ಪಿ ಉಯ್ಯಾಲೆಯಿಂದ ಬಿದ್ದ ಉರ್ಫಿಯನ್ನು ಕಾಪಾಡಲು 9 ಗಂಡಸರು ಓಡಿಬಂದಿದ್ದಾರೆ.

ವೈರಲ್​ ಆಗಿದೆ ವಿಡಿಯೋ:

ಈ ವಿಡಿಯೋವನ್ನು ಸ್ವತಃ ಉರ್ಫಿ ಜಾವೇದ್​ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅದನ್ನು ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಪೋಸ್ಟ್​ ಮಾಡಿದ ಕೆಲವೇ ಗಂಟೆಗಳಲ್ಲಿ ಇದು 12 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಸಾವಿರಾರು ಕಮೆಂಟ್​ಗಳು ಬಂದಿವೆ.

ಬಿಗ್​ ಬಾಸ್​ ಒಟಿಟಿಯಿಂದ ಖ್ಯಾತಿ ಪಡೆದ ನಟಿ:

ಉರ್ಫಿ ಜಾವೇದ್​ ಅವರು ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಅವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿದ್ದು ‘ಬಿಗ್​ ಬಾಸ್​ ಒಟಿಟಿ’ ಮೊದಲ ಸೀಸನ್​ನಿಂದ. ಕರಣ್​ ಜೋಹರ್ ನಡೆಸಿಕೊಟ್ಟ ಆ ಶೋನಲ್ಲಿ ಉರ್ಫಿ ಜಾವೇದ್​ ಸ್ಪರ್ಧಿಸಿದ್ದರು. ಆ ಕಾರ್ಯಕ್ರಮದ ಬಳಿಕ ಅವರನ್ನು ಸೋಶಿಯಲ್​ ಮೀಡಿಯಾದಲ್ಲಿ ಹಿಂಬಾಲಿಸುವವರ ಸಂಖ್ಯೆ ಜಾಸ್ತಿ ಆಯ್ತು.

ಸಿಕ್ಕಾಪಟ್ಟೆ ಬೋಲ್ಡ್​ ಆದಂತಹ ಬಟ್ಟೆ ಧರಿಸುವ ಉರ್ಫಿ ಜಾವೇದ್​ ಅವರನ್ನು ಅನೇಕರು ಪ್ರತಿ ದಿನ ಟೀಕಿಸುತ್ತಾರೆ. ಆ ಟೀಕೆಗಳ ನಡುವೆಯೂ ಅವರ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಪ್ರಸ್ತುತ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ 37 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.