Urfi Javed: ಬಟ್ಟೆ ಹಾಕಿಕೊಂಡಿದ್ದಕ್ಕೆ ಮೈತುಂಬ ಅಲರ್ಜಿ; ವಿಡಿಯೋ ಹಂಚಿಕೊಂಡ ಉರ್ಫಿ ಜಾವೇದ್​​

| Updated By: ರಾಜೇಶ್ ದುಗ್ಗುಮನೆ

Updated on: Jan 07, 2023 | 4:55 PM

ಉರ್ಫಿ ಜಾವೇದ್ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ನಂತರ ಅವರು ‘ಹಿಂದಿ ಬಿಗ್ ಬಾಸ್ ಒಟಿಟಿ’ ಸೀಸನ್​ಗೆ ಕಾಲಿಟ್ಟರು. ಅಲ್ಲಿ ಚಿತ್ರವಿಚಿತ್ರ ಬಟ್ಟೆ ಧರಿಸಿ ಫೇಮಸ್ ಆದರು. ಅಲ್ಲಿಂದ ಅವರು ಚಿಕ್ಕ ಬಟ್ಟೆ ತೊಡುವ ಕಾಯಕ ಶುರುವಾಯಿತು.

Urfi Javed: ಬಟ್ಟೆ ಹಾಕಿಕೊಂಡಿದ್ದಕ್ಕೆ ಮೈತುಂಬ ಅಲರ್ಜಿ; ವಿಡಿಯೋ ಹಂಚಿಕೊಂಡ ಉರ್ಫಿ ಜಾವೇದ್​​
urfi javed
Follow us on

ನಟಿ ಉರ್ಫಿ ಜಾವೇದ್ (Urfi Javed) ಅವರು ಬಟ್ಟೆಯಿಂದ ಸದಾ ದೂರ ಇರುತ್ತಾರೆ. ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಅವರು ಹಾಕೋದು ತುಂಡುಡುಗೆ ಮಾತ್ರ. ಇದಕ್ಕೆ ಅವರು ಅನೇಕರಿಂದ ಟೀಕೆ ವ್ಯಕ್ತವಾಗಿದ್ದೂ ಇದೆ. ಅನೇಕರು ಇದು ಪ್ರಚಾರದ ಗಿಮಿಕ್ ಎಂದು ಹೇಳಿದ್ದೂ ಇದೆ. ಆದರೆ, ನಟಿ ಮಾತ್ರ ಇದಕ್ಕೆ ತಲೆಕೆಡಿಸಿಕೊಂಡಿಲ್ಲ. ಈಗ ನಟಿ ಉರ್ಫಿ ಜಾವೇದ್ ಅವರು ಬಟ್ಟೆ ಹಾಕಿಕೊಂಡರೆ ಆಗುವ ಅಲರ್ಜಿಯನ್ನು ವಿಡಿಯೋ ಮೂಲಕ ತೋರಿಸಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ.

ಉರ್ಫಿ ಜಾವೇದ್ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ನಂತರ ಅವರು ‘ಹಿಂದಿ ಬಿಗ್ ಬಾಸ್ ಒಟಿಟಿ’ ಸೀಸನ್​ಗೆ ಕಾಲಿಟ್ಟರು. ಅಲ್ಲಿ ಚಿತ್ರವಿಚಿತ್ರ ಬಟ್ಟೆ ಧರಿಸಿ ಫೇಮಸ್ ಆದರು. ಅಲ್ಲಿಂದ ಅವರು ಚಿಕ್ಕ ಬಟ್ಟೆ ತೊಡುವ ಕಾಯಕ ಶುರುವಾಯಿತು. ನಂತರ ಇದನ್ನು ನಿತ್ಯವೂ ಮುಂದುವರಿಸಿದರು.

ಈಗ ಉರ್ಫಿಗೆ ದೇಹದ ಮೇಲೆ ಅಲರ್ಜಿ ಆಗಿದೆ. ಕಾಲಿನ ಮೇಲೆ ಗುಳ್ಳೆಗಳು ಎದ್ದಿವೆ. ಮುಖ ಊದಿಕೊಂಡಿದೆ. ಇದರಿಂದ ನಟಿಯ ಮುಖಚರ್ಯೆಯೇ ಬದಲಾಗಿದೆ. ಇವರು ನಿಜವಾಗಲು ಉರ್ಫಿಯೇ ಎಂದು ಪ್ರಶ್ನೆ ಮಾಡುವಂತೆ ಅವರ ಮುಖ ಬದಲಾಗಿದೆ. ‘ನೋಡಿ ನನಗೆ ಬಟ್ಟೆ ಹಾಕಿಕೊಂಡರೆ ಆಗುವ ಅಲರ್ಜಿ ಇದು. ನಾನು ಏಕೆ ಬಟ್ಟೆ ಹಾಕುವುದಿಲ್ಲ ಎಂಬುದಕ್ಕೆ ನಿಮಗೆ ಉತ್ತರ ಸಿಕ್ಕಿದೆ ಎಂದುಕೊಳ್ಳುತ್ತೇನೆ. ನನಗೆ ಈ ಸಮಸ್ಯೆ ಇದೆ. ಬಟ್ಟೆ ಹಾಕಿಕೊಂಡರೆ ನನ್ನ ದೇಹ ರಿಯಾಕ್ಟ್ ಮಾಡುತ್ತದೆ. ಇದಕ್ಕೆ ಸಾಕ್ಷಿ ಕೊಟ್ಟಿದ್ದೇನೆ. ಹೀಗಾಗಿ ನಾನು ಅರೆ ಬೆತ್ತಲಾಗಿ ಓಡಾಡುತ್ತೇನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: Urfi Javed: ಟಾಪ್​ಲೆಸ್​ ಆಗಿ ಉಪಹಾರ ಸವಿದ ಉರ್ಫಿ ಜಾವೇದ್​; ತಿಂಡಿ ಪ್ಲೇಟ್​, ಜ್ಯೂಸ್​ ಲೋಟ ಇಲ್ಲದಿದ್ರೆ ದೇವರೇ ಗತಿ

ಉರ್ಫಿ ಹಂಚಿಕೊಂಡ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಉರ್ಫಿ ಬಟ್ಟೆ ಹಾಕಿಕೊಂಡ ಕಾರಣಕ್ಕೇ ಈ ರೀತಿ ಆಗಿದೆಯೇ ಅಥವಾ ಇದು ಪ್ರಚಾರದ ಗಿಮಿಕ್ಕೋ ಎಂಬ ಬಗ್ಗೆ ಕೆಲವರಿಗೆ ಅನುಮಾನ ಮೂಡಿದೆ. ಸದ್ಯ, ಈ ವಿಡಿಯೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ