Pradeep Sarkar Death: ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ನಿರ್ದೇಶಕ ಪ್ರದೀಪ್ ಸರ್ಕಾರ್ ನಿಧನ

|

Updated on: Mar 24, 2023 | 10:21 AM

ಪ್ರದೀಪ್ ಸರ್ಕಾರ್ ಅವರು ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರಿಗೆ ಚಿಕಿತ್ಸೆ ನೀಡುತ್ತಾ ಬಂದರೂ ಯಾವುದೇ ಪ್ರಯೋಜನ ಆಗಿರಲಿಲ್ಲ.

Pradeep Sarkar Death: ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ನಿರ್ದೇಶಕ ಪ್ರದೀಪ್ ಸರ್ಕಾರ್ ನಿಧನ
ಪ್ರದೀಪ್ ಸರ್ಕಾರ್
Follow us on

ಬಾಲಿವುಡ್​​ ನಿರ್ದೇಶಕ ಪ್ರದೀಪ್ ಸರ್ಕಾರ್ (Pradeep Sarkar) ಅವರು ಇಂದು (ಮಾರ್ಚ್ 24) ಮುಂಬೈನಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಪ್ರದೀಪ್ ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಅಜಯ್ ದೇವಗನ್, ಮನೋಜ್​ ಬಾಜ್​ಪಾಯಿ (Manoj Bajpayee) ಸೇರಿ ಅನೇಕ ಗಣ್ಯರು ಪ್ರದೀಪ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಹಲವು ಚಿತ್ರಗಳನ್ನು ನಿರ್ದೇಶಿಸಿ ಅವರು ಖ್ಯಾತಿ ಪಡೆದಿದ್ದರು. ಸಿನಿಮಾ ಮಾತ್ರವಲ್ಲದೆ ವೆಬ್ ಸೀರಿಸ್​ಗಳನ್ನು ನಿರ್ದೇಶಿಸಿ ಫೇಮಸ್ ಆಗಿದ್ದರು. ಅವರನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕೆ ತುಂಬಲಾರದ ನಷ್ಟ.

ಪ್ರದೀಪ್ ಸರ್ಕಾರ್ ಅವರು ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರಿಗೆ ಚಿಕಿತ್ಸೆ ನೀಡುತ್ತಾ ಬಂದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಮಾರ್ಚ್ 23 ರಾತ್ರಿ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮುಂಜಾನೆ 3.30 ಸುಮಾರಿಗೆ ಅವರು ಕೊನೆಯುಸಿರು ಎಳೆದಿದ್ದಾರೆ. ಈ ವಿಚಾರವನ್ನು ಪ್ರದೀಪ್ ಆಪ್ತರು ಖಚಿತಪಡಿಸಿದ್ದಾರೆ.

ಖ್ಯಾತ ನಿರ್ದೇಶಕ ರಾಜ್​ಕುಮಾರ್ ಹಿರಾನಿ ಜೊತೆ ಪ್ರದೀಪ್ ಸರ್ಕಾರ್ ಕೆಲಸ ಮಾಡುವ ಮೂಲಕ ವೃತ್ತಿ ಜೀವನ ಆರಂಭಿಸಿದರು. ‘ಮುನ್ನಾ ಭಾಯ್ ಎಂಬಿಬಿಎಸ್​’ ಚಿತ್ರಕ್ಕೆ ಅವರು ಕೂಡ ಎಡಿಟರ್ ಆಗಿದ್ದರು. ವಿದ್ಯಾ ಬಾಲನ್, ಸೈಫ್ ಅಲಿ ಖಾನ್ ಹಾಗೂ ಸಂಜಯ್ ದತ್ ಅಭಿನಯದ ‘ಪರಿಣೀತಾ’ ಚಿತ್ರವನ್ನು ನಿರ್ದೇಶನ ಮಾಡಿ ಡೈರೆಕ್ಟರ್ ಕ್ಯಾಪ್ ತೊಟ್ಟರು. ‘ಲಾಗ ಚುನರಿ ಮೈ ದಾಗ’ ಚಿತ್ರವನ್ನು ನಿರ್ದೇಶನ ಮಾಡಿದರು. ರಾಣಿ ಮುಖರ್ಜಿ, ಅಭಿಷೇಕ್​ ಬಚ್ಚನ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದರು. ‘ಮರ್ದಾನಿ’, ‘ಹೆಲಿಕಾಪ್ಟರ್ ಇಲಾ’ ಮೊದಲಾದ ಚಿತ್ರಗಳನ್ನು ಪ್ರದೀಪ್ ನಿರ್ದೇಶನ ಮಾಡಿದ್ದರು. ಇತ್ತೀಚೆಗೆ ಜೀ5ನಲ್ಲಿ ಬಂದ ‘ದುರಂಗಾ’ ವೆಬ್ ಸೀರಿಸ್​ಗೆ ಇವರ ನಿರ್ದೇಶನ ಇತ್ತು.

ಇದನ್ನೂ ಓದಿ: Bholaa: ‘ನೀವು ಪದೇಪದೇ ಟಬು ಜತೆ ಸಿನಿಮಾ ಮಾಡೋದು ಯಾಕೆ?’: ನೇರ ಪ್ರಶ್ನೆಗೆ ಅಜಯ್​ ದೇವಗನ್​ ಉತ್ತರ

ಪ್ರದೀಪ್ ಸರ್ಕಾರ್ ಅವರು ಹೊಸ ಸಿನಿಮಾ ನಿರ್ದೇಶನ ಮಾಡಬೇಕಿತ್ತು. ಇದರಲ್ಲಿ ಕಂಗನಾ ರಣಾವತ್ ಅವರು ಮುಖ್ಯಭೂಮಿಕೆ ಮಾಡಬೇಕಿತ್ತು. ಈ ಸಿನಿಮಾ ಕೆಲಸಗಳು ಆರಂಭ ಆಗುವ ಮೊದಲೇ ಪ್ರದೀಪ್ ನಿಧನ ಹೊಂದಿದ್ದು ನಿಜಕ್ಕೂ ದುಃಖದ ವಿಚಾರ.

ಪ್ರದೀಪ್ ಸರ್ಕಾರ್ ಸಾವಿಗೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಅಜಯ್ ದೇವಗನ್ ಸೇರಿ ಅನೇಕರು ಪ್ರದೀಪ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ‘ನಮಗೆಲ್ಲ ದಾದಾ ಆಗಿದ್ದ ಪ್ರದೀಪ್ ಸರ್ಕಾರ ಸಾವಿನ ಸುದ್ದಿ ಅರಗಿಸಿಕೊಳ್ಳೋದು ಕಷ್ಟ. ನಿಮಗೆ ನನ್ನ ಸಂತಾಪ. ಕುಟುಂಬದವರಿಗಾಗಿ ನನ್ನ ಪ್ರಾರ್ಥನೆ’ ಎಂದು ಅಜಯ್ ದೇವಗನ್ ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ