ಕಳಪೆ ವಿಮರ್ಶೆ ಮಧ್ಯೆಯೂ ಒಳ್ಳೆಯ ಗಳಿಕೆ ಮಾಡಿದ ವಿಕ್ಕಿ ಕೌಶಲ್ ಸಿನಿಮಾ
ಆನಂದ್ ತಿವಾರಿ ಅವರು ‘ಬ್ಯಾಡ್ ನ್ಯೂಸ್’ ಚಿತ್ರ ನಿರ್ದೇಶಿಸಿದ್ದಾರೆ. ಕರಣ್ ಜೋಹರ್ ಅವರು ‘ಧರ್ಮ ಪ್ರೊಡಕ್ಷನ್ಸ್’ ಮೂಲಕ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಈ ಚಿತ್ರಕ್ಕೆ ಸಾಧಾರಣ ಗಳಿಕೆ ಆಗುತ್ತಿದೆ.
ವಿಕ್ಕಿ ಕೌಶಲ್ ಅವರು ‘ಬ್ಯಾಡ್ ನ್ಯೂಸ್’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಸಿನಿಮಾ ಅಂದುಕೊಂಡ ಮಟ್ಟದ ವಿಮರ್ಶೆ ಪಡೆದಿಲ್ಲ. ಈ ಚಿತ್ರ ನೋಡಿದ ಅನೇಕರು ಟೀಕೆ ಮಾಡಿದ್ದಾರೆ. ಸಿನಿಮಾಗೆ ಕಳಪೆ ವಿಮರ್ಶೆ ಸಿಕ್ಕಿದೆ. ಆದಾಗ್ಯೂ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಒಂದು ಹಂತಕ್ಕೆ ಗಳಿಕೆ ಮಾಡುತ್ತಿದೆ. ಇದು ಚಿತ್ರ ತಂಡದ ಖುಷಿ ಹೆಚ್ಚಿಸಿದೆ. ವಾರದ ದಿನಗಳಲ್ಲಿ ಸಿನಿಮಾದ ಗಳಿಕೆ ಯಾವ ರೀತಿಯಲ್ಲಿ ಆಗಲಿದೆ ಅನ್ನೋದು ಮುಖ್ಯವಾಗಲಿದೆ.
ವಿಕ್ಕಿ ಕೌಶಲ್ ಅವರು ‘ಬ್ಯಾಡ್ ನ್ಯೂಸ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆನಂದ್ ತಿವಾರಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವಿಕ್ಕಿ ಕೌಶಲ್, ತೃಪ್ತಿ ದಿಮ್ರಿ, ಆ್ಯಮಿ ವಿರ್ಕ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಬುಕ್ ಮೈ ಶೋನಲ್ಲಿ 6.2 ಹಾಗೂ ಐಎಂಡಿಬಿಯಲ್ಲಿ 6.7 ರೇಟಿಂಗ್ ಪಡೆದುಕೊಂಡಿದೆ. ಆದಾಗ್ಯೂ ವೀಕೆಂಡ್ನಲ್ಲಿ ಚಿತ್ರಕ್ಕೆ ಒಳ್ಳೆಯ ಗಳಿಕೆ ಆಗಿದೆ.
ಶುಕ್ರವಾರ (ಜುಲೈ 19) ಈ ಸಿನಿಮಾ 8.3 ಕೋಟಿ ರೂಪಾಯಿ ಗಳಿಕೆ ಮಾಡಿತು. ಶನಿವಾರ 10.25 ಕೋಟಿ ರೂಪಾಯಿ ಹಾಗೂ ಭಾನುವಾರ 11 ಕೋಟಿ ರೂಪಾಯಿ ಅನ್ನು ಈ ಚಿತ್ರ ಗಳಿಕೆ ಮಾಡಿದೆ. ಈ ಮೂಲಕ ಸಿನಿಮಾದ ಒಟ್ಟೂ ಗಳಿಕೆ 29.55 ಕೋಟಿ ರೂಪಾಯಿ ಆಗಿದೆ. ಅಂದರೆ ಸರಿ ಸುಮಾರು 30 ಕೋಟಿ ರೂಪಾಯಿ ಚಿತ್ರ ಗಳಿಕೆ ಮಾಡಿದಂತೆ ಆಗಿದೆ.
ಇದನ್ನೂ ಓದಿ: ‘ಹಸಿಬಿಸಿ ದೃಶ್ಯ ಬೇಡ’; ವಿಕ್ಕಿ ಕೌಶಲ್-ತೃಪ್ತಿ ಬೋಲ್ಡ್ ದೃಶ್ಯಕ್ಕೆ ಸೆನ್ಸಾರ್ ಮಂಡಳಿ ತಕರಾರು
ಇನ್ನೂ ಕೆಲವು ವಾರಗಳ ಕಾಲ ಸಿನಿಮಾ ಪ್ರದರ್ಶನ ಕಾಣಬಹುದು. ಈ ಮೂಲಕ ಸಿನಿಮಾದ ಗಳಿಕೆ 50 ಕೋಟಿ ರೂಪಾಯಿ ಆಗಬಹುದು. ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ ಹೀರೋಗಳ ಚಿತ್ರವೇ 20 ಕೋಟಿ ರೂಪಾಯಿ ಗಳಿಕೆ ಮಾಡಲು ಹರಸಾಹಸ ಪಡುತ್ತಿರುವಾಗ ವಿಕ್ಕಿ ಸಿನಿಮಾ ಮೂರೇ ದಿನಕ್ಕೆ 30 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದರೆ ನಿಜಕ್ಕೂ ಮೆಚ್ಚಲೇಬೇಕು. ಈ ಚಿತ್ರದ ‘ತೋಬಾ ತೋಬಾ..’ ಹಾಡೂ ಸೂಪರ್ ಹಿಟ್ ಆಗಿದೆ. ಇದು ಕೂಡ ಸಿನಿಮಾದ ಮೈಲೇಜ್ ಹೆಚ್ಚಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.