‘ಹಸಿಬಿಸಿ ದೃಶ್ಯ ಬೇಡ’; ವಿಕ್ಕಿ ಕೌಶಲ್-ತೃಪ್ತಿ ಬೋಲ್ಡ್ ದೃಶ್ಯಕ್ಕೆ ಸೆನ್ಸಾರ್ ಮಂಡಳಿ ತಕರಾರು
ಆನಂದ್ ತಿವಾರಿ ಅವರು ‘ಬ್ಯಾಡ್ ನ್ಯೂಸ್’ ಚಿತ್ರ ನಿರ್ದೇಶಿಸಿದ್ದಾರೆ. ಕರಣ್ ಜೋಹರ್ ಅವರು ‘ಧರ್ಮ ಪ್ರೊಡಕ್ಷನ್ಸ್’ ಮೂಲಕ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಬೋಲ್ಡ್ ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯವರು ತಕರಾರು ತೆಗೆದಿದ್ದಾರೆ.
ವಿಕ್ಕಿ ಕೌಶಲ್ ನಟನೆಯ ‘ಬ್ಯಾಡ್ ನ್ಯೂಸ್’ ಚಿತ್ರವನ್ನು ಸೆನ್ಸಾರ್ ಮಂಡಳಿಯವರು ವೀಕ್ಷಿಸಿ U/A ಪ್ರಮಾಣ ಪತ್ರ ನೀಡಿದ್ದಾರೆ. ಈ ವೇಳೆ 27 ಸೆಕೆಂಡ್ಗಳ ವಿಕ್ಕಿ ಹಾಗೂ ತೃಪ್ತಿ ಅವರ ಬೋಲ್ಡ್ ದೃಶ್ಯದಲ್ಲಿ ಬದಲಾವಣೆ ಮಾಡುವಂತೆ ಸೂಚಿಸಿದೆ. ಹಸಿಬಿಸಿ ದೃಶ್ಯವನ್ನು ಬದಲಾಯಿಸಲು ತಂಡದವರು ಒಪ್ಪಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಸಿನಿಮಾಗೆ U/A ಪ್ರಮಾಣ ಪತ್ರ ಸಿಕ್ಕಿದೆ ಎನ್ನಲಾಗಿದೆ.
ವಿಕ್ಕಿ ಕೌಶಲ್ ಹಾಗೂ ತೃಪ್ತಿ ಮಧ್ಯೆ ಮೂರು ಇಂಟಿಮೇಟ್ ದೃಶ್ಯಗಳು ಇದ್ದವು. ಇದನ್ನು ಬದಲಾಯಿಸಿ ಎಂದು ಸೆನ್ಸಾರ್ ಮಂಡಳಿ ಹೇಳಿದೆ. ವಿಶೇಷ ಎಂದರೆ ಯಾವುದೇ ದೃಶ್ಯಕ್ಕೆ ಕತ್ತರಿ ಹಾಕಲು ಸೆನ್ಸಾರ್ ಬೋರ್ಡ್ ಸೂಚಿಸಿಲ್ಲ. ಇದರ ಜೊತೆಗೆ ಕೆಲವು ಬದಲಾವಣೆಗಳನ್ನು ಮಾಡಲು ಹೇಳಿದೆ. ಕೆಲವು ಕಡೆಗಳಲ್ಲಿ ಆಲ್ಕೋಹಾಲ್ ಬಳಕೆ ಆಗಿದೆ. ಇದರ ಬಗ್ಗೆ ಎಚ್ಚರಿಕೆಯ ಸಾಲುಗಳನ್ನು ಬೋಲ್ಡ್ ಮಾಡುವಂತೆ ಸೂಚಿಸಲಾಗಿದೆ.
ಬ್ಯಾಡ್ ನ್ಯೂಸ್ ಸಿನಿಮಾ ಅವಧಿ 142 ನಿಮಿಷ ಇದೆ. ಅಂದರೆ ಎರಡು ಗಂಟೆ 22 ನಿಮಿಷ ಸಿನಿಮಾ ಇರಲಿದೆ. ಈ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಆ್ಯಮಿ ವಿರ್ಕ್ ಮತ್ತು ನೇಹಾ ಧೂಪಿಯಾ ಈ ಸಿನಿಮಾದಲ್ಲಿ ಇದ್ದಾರೆ. ಈ ಚಿತ್ರದಲ್ಲಿ ಮೂಡಿ ಬಂದ ವಿಕ್ಕಿ ಹಾಗೂ ತೃಪ್ತಿ ಹಾಡುಗಳು ಸಖತ್ ಬೋಲ್ಡ್ ಆಗಿದ್ದವು.
ಹಿಂದಿಯಲ್ಲಿ ರಿಲೀಸ್ ಆದ ‘ಸರ್ಫಿರಾ’ ಸದ್ದು ಮಾಡುತ್ತಿಲ್ಲ. ‘ಇಂಡಿಯನ್ 2’ ಸಿನಿಮಾ ಕೂಡ ನೆಲಕಚ್ಚಿದೆ. ಹೀಗಾಗಿ, ‘ಬ್ಯಾಡ್ ನ್ಯೂಸ್’ ಚಿತ್ರಕ್ಕೆ ಹೆಚ್ಚಿನ ಅಡೆತಡೆ ಇಲ್ಲ. ಈ ಮೊದಲು ರಿಲೀಸ್ ಆದ ‘ಕಲ್ಕಿ 2898 ಎಡಿ’ ಸಿನಿಮಾ ಸ್ವಲ್ಪ ಸ್ಪರ್ಧೆ ನೀಡಬಹುದು. ಆದರೆ, ಸಿನಿಮಾ ರಿಲೀಸ್ ಆಗಿ ತಿಂಗಳು ಕಳೆದಿರುವುದರಿಂದ ಕ್ರೇಜ್ ಸ್ವಲ್ಪ ಕಡಿಮೆ ಆಗಿದೆ.
ಇದನ್ನೂ ಓದಿ: ಒಟಿಟಿಯಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ನೋಡಬೇಕು ಎಂದುಕೊಂಡವರಿಗೆ ಬ್ಯಾಡ್ ನ್ಯೂಸ್
ಆನಂದ್ ತಿವಾರಿ ಅವರು ‘ಬ್ಯಾಡ್ ನ್ಯೂಸ್’ ಚಿತ್ರ ನಿರ್ದೇಶಿಸಿದ್ದಾರೆ. ಕರಣ್ ಜೋಹರ್ ಅವರು ‘ಧರ್ಮ ಪ್ರೊಡಕ್ಷನ್ಸ್’ ಮೂಲಕ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಶುಕ್ರವಾರ (ಜುಲೈ 19) ಸಿನಿಮಾ ಥಿಯೇಟರ್ನಲ್ಲಿ ಬಿಡುಗಡೆ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.