ಕೆಲವು ಪಾತ್ರಗಳಲ್ಲಿ ನಟಿಸೋದು ತುಂಬಾನೇ ಕಷ್ಟ. ಈ ರೀತಿಯ ಪಾತ್ರಗಳಿಗಾಗಿ ಕಲಾವಿದರು ಬೇರೆ ಬೇರೆ ಚಟಗಳನ್ನು ಕಲಿಯಬೇಕಾದ ಪರಿಸ್ಥಿತಿ ಬರುತ್ತದೆ. ನಟಿ ವಿದ್ಯಾ ಬಾಲನ್ ಅವರಿಗೂ ಹಾಗೆಯೇ ಆಗಿತ್ತು. ‘ದಿ ಡರ್ಟಿ ಪಿಕ್ಚರ್’ ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ ಪಾತ್ರ ಮಾಡಲು ವಿದ್ಯಾ ಬಾಲನ್ (Vudya Balan) ಅವರು ಸಿಗರೇಟು ಸೇದುವುದನ್ನು ಕಲಿಯಬೇಕಾಯಿತು. ಆ ಬಳಿಕ ಇದು ಅವರಿಗೆ ಚಟವಾಗಿ ಪರಿಣಮಿಸಿತು. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
ಸಿಗರೇಟು ಸೇದುವುದು ಕೆಟ್ಟ ಹವ್ಯಾಸ. ಕೆಲವು ಬಾರಿ ಸೇದಿದರೆ ಅದು ಹವ್ಯಾಸ ಆಗುತ್ತದೆ. ವಿದ್ಯಾ ಬಾಲನ್ಗೂ ಹಾಗೆಯೇ ಆಗಿದೆ. ‘ಆ ಸಿನಿಮಾ ಶೂಟ್ಗೂ ಮೊದಲು ಕೆಲವು ಬಾರಿ ನಾನು ಸಿಗರೇಟ್ ಸೇದಿದ್ದೆ. ಸಿಗರೇಟ್ ಸೇದುವುದು ಹೇಗೆ ಎಂಬುದು ನನಗೆ ಗೊತ್ತಿತ್ತು. ಹುಡುಗಿಯರು ಸಿಗರೇಟ್ ಸೇದುವ ಬಗ್ಗೆ ಜನರು ತಮ್ಮ ಮನಸ್ಸಿನಲ್ಲಿ ಒಂದು ಗ್ರಹಿಕೆಯನ್ನು ಹುಟ್ಟುಹಾಕಿದ್ದರಿಂದ ಮೊದಲಿಗೆ ನನಗೆ ಅಹಿತಕರವಾಗಿತ್ತು. ಆದರೆ, ಈಗ ಜನರು ಮೊದಲಿನಷ್ಟು ಜಡ್ಜ್ ಮಾಡುವುದಿಲ್ಲ’ ಎಂದಿದ್ದಾರೆ ವಿದ್ಯಾ ಬಾಲನ್.
ವಿದ್ಯಾ ಇನ್ನೂ ಸಿಗರೇಟ್ ಸೇದುತ್ತಾರಾ? ಈ ಪ್ರಶ್ನೆಗೆ ಉತ್ತರಿಸಿದ ನಟಿ, ‘ಈ ಬಗ್ಗೆ ಕ್ಯಾಮೆರಾ ಮುಂದೆ ಮಾತನಾಡುವುದು ಸರಿ ಅಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಸಿಗರೇಟ್ ಸೇದುವುದನ್ನು ಆನಂದಿಸುತ್ತೇನೆ. ಸಿಗರೇಟು ಸೇದುವುದರಿಂದ ಏನೂ ತೊಂದರೆ ಇಲ್ಲ ಎಂದಾಗಿದ್ದರೆ ನಾನು ಸ್ಮೋಕರ್ ಆಗುತ್ತಿದ್ದೆ. ಕಾಲೇಜು ದಿನಗಳಲ್ಲಿ ಯಾರಾದರೂ ಅಂಗಡಿಯಲ್ಲಿ ಸಿಗರೇಟ್ ಸೇದುತ್ತಿದ್ದರೆ ಅವರ ಬಳಿ ಹೋಗಿ ಕುಳಿತುಕೊಳ್ಳುತ್ತಿದ್ದೆ’ ಎಂದಿದ್ದಾರೆ ವಿದ್ಯಾ.
‘ದಿ ಡರ್ಟಿ ಪಿಕ್ಚರ್’ ನನ್ನನ್ನು ಸಿಗರೇಟ್ ಸೇದುವುದನ್ನು ಚಟವನ್ನಾಗಿ ಮಾಡಿತು ಎಂದು ವಿದ್ಯಾ ಹೇಳಿದ್ದಾರೆ. ನಾನು ದಿನಕ್ಕೆ 2 ರಿಂದ 3 ಸಿಗರೇಟ್ ಸೇದುತ್ತಿದ್ದೆ ಎಂದೂ ನಟಿ ಹೇಳಿದ್ದಾರೆ. ಸದ್ಯ ಎಲ್ಲೆಲ್ಲೂ ವಿದ್ಯಾ ಬಾಲನ್ ಹೇಳಿಕೆ ಚರ್ಚೆಯಾಗುತ್ತಿದೆ.
ಇದನ್ನೂ ಓದಿ: ವಿದ್ಯಾ ಬಾಲನ್ ಜೊತೆ ನಟಿಸೋಕೆ ಹೀರೋಗಳಿಗೆ ಇಷ್ಟವೇ ಇಲ್ಲ; ಸತ್ಯ ಹೇಳಿದ ನಟಿ
ವಿದ್ಯಾ ಬಾಲನ್ ನಟನೆಯ ‘ದೋ ಔರ್ ದೋ ಪ್ಯಾರ್’ ಸಿನಿಮಾ ಥಿಯೇಟರ್ನಲ್ಲಿ ಓಡುತ್ತಿದೆ. ಈ ಸಿನಿಮಾದಲ್ಲಿ ಪ್ರತಿಕ್ ಗಾಂಧಿ ಕೂಡ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಏಳು ದಿನಗಳಲ್ಲಿ ಈ ಚಿತ್ರ ಕೇವಲ 3 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:08 pm, Fri, 26 April 24