ಕಮಲದ ಸಿಹ್ನೆಯ ಕಿವಿಯೋಲೆ ಧರಿಸಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ ನೇಹಾ ಶರ್ಮಾ
ಹಿಂದಿ, ತೆಲುಗು, ತಮಿಳು, ಮಲಯಾಳಂ, ಪಂಜಾಬಿ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ನೇಹಾ ಶರ್ಮಾ ಅವರು ಈಗ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಅವರು ಪ್ರಚಾರ ಮಾಡಿದ್ದಾರೆ. ನೇಹಾ ಶರ್ಮಾ ಅವರ ತಂದೆ ಅಜಿತ್ ಶರ್ಮಾ ಬಿಹಾರದ ಭಾಗಲ್ಪುರ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ನೇಹಾ ಶರ್ಮಾ ಕ್ಯಾಂಪೇನ್ ಮಾಡಿದ ವಿಡಿಯೋಗಳು ವೈರಲ್ ಆಗಿವೆ.
ಈಗ ಎಲ್ಲೆಲ್ಲೂ ರಾಜಕೀಯದ ರಂಗು ತುಂಬಿದೆ. ಕೆಲವು ಸೆಲೆಬ್ರಿಟಿಗಳು ನೇರವಾಗಿ ಲೋಕಸಭಾ ಚುನಾವಣೆ (Lok Sabha Election) ಕಣದಲ್ಲಿ ಸ್ಪರ್ಧಿಸುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಬಾಲಿವುಡ್ನ ಹಲವರು ಕ್ಯಾಂಪೇನ್ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಹಿಂದಿ ಚಿತ್ರರಂಗದ ಖ್ಯಾತ ನಟಿ ನೇಹಾ ಶರ್ಮಾ ಕೂಡ ಕಾಂಗ್ರೆಸ್ (Congress) ಪಕ್ಷದ ಪರವಾಗಿ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ವಿಶೇಷ ಏನೆಂದರೆ, ನೇಹಾ ಶರ್ಮಾ (Neha Sharma) ಅವರು ಕಮಲದ ಸಿಹ್ನೆ ಇರುವ ಕಿವಿಯೋಲೆ ಧರಿಸಿದ್ದು ಎಲ್ಲರ ಕಣ್ಣು ಕುಕ್ಕುತ್ತಿದೆ.
ನೇಹಾ ಶರ್ಮಾ ಅವರು ನೇರವಾಗಿ ಚುನಾವಣೆಯ ಕಣಕ್ಕೆ ಇಳಿದಿಲ್ಲ. ಅವರ ತಂದೆ ಅಜಿತ್ ಶರ್ಮಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಭಾಗಲ್ಪುರ್ ಲೋಕಸಭಾ ಕ್ಷೇತ್ರದಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ತಂದೆಯ ಪರವಾಗಿ ನೇಹಾ ಶರ್ಮಾ ಬೃಹತ್ ರೋಡ್ ಶೋ ನಡೆಸಿದ್ದಾರೆ. ನೆಚ್ಚಿನ ನಟಿಯನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಇದನ್ನೂ ಓದಿ: ಹಾಸನ: ಪರಸ್ಪರ ಬಡಿದಾಡಿಕೊಂಡ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು; ಓರ್ವನ ಸ್ಥಿತಿ ಗಂಭೀರ
ಭಾಗಲ್ಪುರ್ ಲೋಕಸಭಾ ಕ್ಷೇತ್ರದ ಹಲವು ಊರುಗಳಲ್ಲಿ ನೇಹಾ ಶರ್ಮಾ ಅವರು ಕಾಂಗ್ರೆಸ್ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದಾರೆ. ಈ ವೇಳೆ ನೆಟ್ಟಿಗರಿಗೆ ಅವರ ಕಿವಿಯೋಲೆ ಮೇಲೆ ಕಣ್ಣು ಬಿದ್ದಿದೆ. ಯಾಕೆಂದರೆ, ನೇಹಾ ಶರ್ಮಾ ಧರಿಸಿದ್ದ ಕಿವಿಯೋಲೆಯು ಕಮಲದ ಆಕಾರದಲ್ಲಿದೆ. ಕಮಲ ಬಿಜೆಪಿ ಸಿಹ್ನೆ. ಆದರೆ ನೇಹಾ ಶರ್ಮಾ ಪ್ರಚಾರ ಮಾಡಿದ್ದು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.
VIDEO OF THE DAY –
Bollywood actress Neha Sharma campaigns for Congress, but she is wearing lotus shaped earrings 😂🪷pic.twitter.com/Lw4fF1fFNh
— Times Algebra (@TimesAlgebraIND) April 26, 2024
ತಾವು ರೋಡ್ ಶೋ ಮಾಡಿದ ವಿಡಿಯೋಗಳನ್ನು ನೇಹಾ ಶರ್ಮಾ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಬಿಹಾರದ ಹಲವು ಜಿಲ್ಲೆಗಳಿಗೆ ತೆರಳಿ ಅವರು ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಜನರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ. ನೇಹಾ ಶರ್ಮಾ ಹೋದಲ್ಲೆಲ್ಲ ಜನರು ಭರ್ಜರಿ ಸ್ವಾಗತ ಕೋರಿದ್ದಾರೆ. ಅದಕ್ಕಾಗಿ ಅವರು ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇಂದು (ಏಪ್ರಿಲ್ 26) ಭಾಗಲ್ಪುರ್ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆದಿದೆ. ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.