ಸಲ್ಮಾನ್ ಖಾನ್ ಮನೆ ಎದುರು ಗುಂಡಿನ ದಾಳಿ ಪ್ರಕರಣ, ಶೂಟರ್‌ಗಳಿಗೆ ಬಂದೂಕು ನೀಡಿದ್ದ ಇಬ್ಬರ ಬಂಧನ
ಸಲ್ಮಾನ್ ಖಾನ್ ಮನೆ ಎದುರು ನಡೆದ ಗುಂಡಿನ ದಾಳಿಯ ಆರೋಪಿಗಳಿಗೆ ಬಂದೂಕು ನೀಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪಂಜಾಬ್ ಮೂಲದವರಾದ ಅವರು ಏಪ್ರಿಲ್ 13ರಂದು ಆರೋಪಿಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದರು ಎನ್ನಲಾಗಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ಮನೆ ಎದುರು ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಆರೋಪಿಗಳಿಗೆ ಬಂದೂಕು ನೀಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈ ಅಪರಾಧ ವಿಭಾಗದ ಪೊಲೀಸರು ಪಂಜಾಬ್ ಮೂಲದ ಸೋನು ಸುಭಾಷ್ ಚಂದರ್ (37) ಮತ್ತು ಅನುಜ್ ಥಾಪನ್ (32) ಅವರನ್ನು ಬಂಧಿಸಿದ್ದಾರೆ. ಇವರಿಬ್ಬರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ಆರೋಪಿಗಳಿಗೆ ಪಿಸ್ತೂಲ್‌ಗಳನ್ನು ಸರಬರಾಜು ಮಾಡಿದ್ದರು ಎನ್ನಲಾಗಿದೆ.
ಸೋಮವಾರ, ಗುಜರಾತ್‌ನ ಸೂರತ್ ನಗರದ ತಾಪಿ ನದಿಯಿಂದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಗೆ ಬಳಸಲಾದ ಗನ್ ಮತ್ತು ಕೆಲವು ಲೈವ್ ಕಾರ್ಟ್ರಿಡ್ಜ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಮತ್ತೊಂದು ಗನ್‌ಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 14ರಂದು ಆರೋಪಿಗಳು ಗುಂಡಿನ ದಾಳಿ ನಡೆಸಿದ್ದರು. ವಿಚಾರಣೆಯ ಸಮಯದಲ್ಲಿ, ಇಬ್ಬರು ಬಂಧಿತ ವ್ಯಕ್ತಿಗಳನ್ನು – ವಿಕ್ಕಿ ಗುಪ್ತಾ (24) ಮತ್ತು ಸಾಗರ್ ಪಾಲ್ (21) ಎಂದು ಗುರುತಿಸಲಾಗಿದೆ. ತಾವು ರೈಲಿನಲ್ಲಿ ಭುಜ್‌ಗೆ ಪರಾರಿಯಾಗುತ್ತಿದ್ದಾಗ ರೈಲ್ವೇ ಸೇತುವೆಯಿಂದ ತಾಪಿ ನದಿಗೆ ಶಸ್ತ್ರಾಸ್ತ್ರವನ್ನು ಎಸೆದಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಸಲ್ಮಾನ್ ಮನೆ ಹೊರಗೆ ಗುಂಡಿನ ದಾಳಿ ಪ್ರಕರಣ: ನದಿಯಲ್ಲಿ ಪಿಸ್ತೂಲು, ಗುಂಡುಗಳು ಪತ್ತೆ
ಭಾನುವಾರ ಬೆಳಗ್ಗೆ ಘಟನೆ ನಡೆಯುವ ಕೆಲವೇ ಗಂಟೆಗಳ ಮೊದಲು ಸಲ್ಮಾನ್ ಖಾನ್ ಅವರ ಮುಂಬೈ ಮನೆಗೆ ಗುಂಡು ಹಾರಿಸಲು ಬಳಸಿದ ಬಂದೂಕನ್ನು ಶೂಟರ್‌ಗಳಿಗೆ ಸರಬರಾಜು ಮಾಡಲಾಗಿತ್ತು.
ಮೂಲಗಳ ಪ್ರಕಾರ, ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಏಪ್ರಿಲ್ 13 (ಶನಿವಾರ) ರಾತ್ರಿ ಶೂಟರ್‌ಗಳಿಗೆ ಬಂದೂಕನ್ನು ಹಸ್ತಾಂತರಿಸಲಾಗಿತ್ತು. ಏಪ್ರಿಲ್ 14 ರಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಬಜರಂಗಿ ಭಾಯಿಜಾನ್ ನಟನ ಮನೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಮೋಟಾರ್‌ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿ ಆ ಸ್ಥಳದಿಂದ ಪರಾರಿಯಾಗಿದ್ದರು.
ಮುಂಬೈ ಮತ್ತು ಕಚ್ ಪೊಲೀಸರ ಜಂಟಿ ತಂಡಗಳು ಏಪ್ರಿಲ್ 16 ರಂದು ಭುಜ್ ಬಳಿಯ ಮಾತಾ ನೋ ಮಧ್‌ನಲ್ಲಿರುವ ದೇವಾಲಯದ ಆವರಣದಲ್ಲಿ ಆರೋಪಿಗಳನ್ನು ಬಂಧಿಸಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ