
ಬಾಲಿವುಡ್‌ನಲ್ಲಿ ಶೂಟಿಂಗ್ ಸಮಯದಲ್ಲಿ ನಟರು ಅನಾನುಕೂಲ ಅನುಭವಿಸುವ ಅನೇಕ ನಿದರ್ಶನಗಳಿವೆ. ಅಥವಾ ಅವರು ತಮ್ಮ ಸಹನಟರೊಂದಿಗೆ ಕೆಲಸ ಮಾಡುವಾಗ ಸಂಕಷ್ಟ ಅನುಭವಿಸಿದ್ದೂ ಇರುತ್ತದೆ. ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರಿಗೂ ಇದೇ ರೀತಿಯ ಘಟನೆ ಸಂಭವಿಸಿತ್ತು. ಅವರೇ ಸಂದರ್ಶನವೊಂದರಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ. ನಟಿ ವಿದ್ಯಾ ಬಾಲನ್ (Vidya Balan) ಉದ್ಯಮದಲ್ಲಿ 20 ವರ್ಷಗಳನ್ನು ಪೂರೈಸಿದ್ದಾರೆ. ಅವರು ‘ಪರಿಣೀತಾ’ ಚಿತ್ರದ ಮೂಲಕ ತಮ್ಮ ಸಿನಿ ಬದುಕು ಆರಂಭಿಸಿದರು. ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದರು. ಅವರು ತಮ್ಮ ಅನುಭವದ ಬುತ್ತಿ ತೆಗೆದಿಟ್ಟಿದ್ದಾರೆ.
ವಿದ್ಯಾ ಬಾಲನ್ ಚಿತ್ರರಂಗದಲ್ಲಿ ಅನೇಕ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಆದರೆ ಅವರ ಅತ್ಯಂತ ಪ್ರಸಿದ್ಧ ಚಿತ್ರ ‘ದಿ ಡರ್ಟಿ ಪಿಕ್ಚರ್’. ಈ ಚಿತ್ರದಲ್ಲಿ ಅವರ ದಿಟ್ಟ ಅಭಿನಯ ಎಲ್ಲರನ್ನೂ ಅಚ್ಚರಿಗೊಳಿಸಿತು. ಅವರ ಅಭಿನಯ ಎಲ್ಲರನ್ನೂ ಮೆಚ್ಚಿಸಿತು. ಇತ್ತೀಚೆಗೆ, ಒಂದು ಸಂದರ್ಶನದಲ್ಲಿ, ವಿದ್ಯಾ ಬಾಲನ್ ಒಂದು ಚಿತ್ರದಲ್ಲಿನ ಬೋಲ್ಡ್ ದೃಶ್ಯಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ಚಿತ್ರೀಕರಿಸಲಾಯಿತು ಎಂಬುದರ ಕುರಿತು ಮಾತನಾಡಿದ್ದರು. ಇದು ಮಾತ್ರವಲ್ಲದೆ, ಒಂದು ಇಂಟಿಮೇಟ್ ದೃಶ್ಯದ ಸಮಯದಲ್ಲಿ ಅವರು ಅನುಭವಿಸಿದ ವಿಚಿತ್ರ ಅನುಭವದ ಬಗ್ಗೆಯೂ ಅವರು ಹೇಳಿದರು.
‘ಒಂದು ಚಿತ್ರದಲ್ಲಿ ಒಂದು ಇಂಟಿಮೇಟ್ ದೃಶ್ಯವಿತ್ತು. ಆ ಸಮಯದಲ್ಲಿ, ನಟ ಚೈನೀಸ್ ಫುಡ್ ತಿಂದು ಬಂದಿದ್ದ ಮತ್ತು ಅವರು ದೃಶ್ಯಕ್ಕೆ ಮೊದಲು ಹಲ್ಲುಜ್ಜಿರಲಿಲ್ಲ. ಬಾಯಿಂದ ಬೆಳ್ಳುಳ್ಳು ವಾಸನೆ ಬರುತ್ತಿತ್ತು. ಆದರೂ, ನಾನು ಅವರೊಂದಿಗೆ ಇಂಟಿಮೇಟ್ ದೃಶ್ಯವನ್ನು ಮಾಡಿದ್ದೇನೆ’ ಎಂದು ಹೇಳಿದ್ದರು.
‘ನನಗೆ ನನ್ನ ಮೇಲೆ ಸಾಕಷ್ಟು ನಂಬಿಕೆ ಇದೆ. ನಾನು ನನ್ನ ಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಿದ್ದೇನೆ. ನಾನು ತೂಕ ಇಳಿಸಿಕೊಳ್ಳಬೇಕು ಎಂದು ಅನೇಕರು ಹೇಳಿದ್ದರು. ಆದರೆ ನಾನು ನನ್ನ ಮೇಲೆ ನಂಬಿಕೆ ಇಟ್ಟಿದ್ದೇನೆ ಮತ್ತು ನನ್ನಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದೆ. ಅದು ನನ್ನ ಒಳ್ಳೆಯ ಮನೋಭಾವ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ವಿದ್ಯಾ ಬಾಲನ್ ಬೋಲ್ಡ್ ಅವತಾರ; 46ನೇ ವಯಸ್ಸಿನಲ್ಲಿ ಕಣ್ಣು ಕುಕ್ಕಿದ ನಟಿ
ವಿದ್ಯಾ ಬಾಲನ್ ತಮ್ಮ ಪ್ರಯಾಣ ಆರಂಭಿಸಿದ್ದು ಕಿರುತೆರೆಯಿಂದ. ಅವರು ಏಕ್ತಾ ಕಪೂರ್ ಅವರ ‘ಹಮ್ ಪಾಂಚ್’ ಶೋನಲ್ಲಿ ಕಾಣಿಸಿಕೊಂಡರು. ಅದರ ನಂತರ ಅವರು ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. ಅವರು ‘ಭೂಲ್ ಭುಲೈಯಾ’, ‘ಕಹಾನಿ’, ‘ಹಮಾರಿ ಅಧುರಿ ಕಹಾನಿ’, ‘ದೋ ಔರ್ ದೋ ಪ್ಯಾರ್’, ‘ದಿ ಡರ್ಟಿ ಪಿಕ್ಚರ್’ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದರು. ಮತ್ತು ಇಂದು ಅವರು ಯಶಸ್ವಿ ನಟಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:33 am, Thu, 24 July 25