ಕತ್ರಿನಾ ಕೈಫ್​ ಹಾಗೂ ವಿಜಯ್​ ಸೇತುಪತಿಗೆ ವಿಶೇಷ ಕ್ಲಾಸ್​; ಇದು ಹೊಸ ಸಿನಿಮಾ ಅಪ್​ಡೇಟ್​

| Updated By: ರಾಜೇಶ್ ದುಗ್ಗುಮನೆ

Updated on: Jan 13, 2022 | 2:50 PM

ಆಯುಷ್ಮಾನ್​ ಖುರಾನಾ ಅಭಿನಯದ ‘ಅಂಧಾಧೂನ್​’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಚಿತ್ರ ನಿರ್ದೇಶನ ಮಾಡಿದ್ದ ಶ್ರೀರಾಮ್​ ರಾಘವನ್​ ಅವರು ಈಗ ‘ಮೇರಿ ಕ್ರಿಸ್​ಮಸ್’​ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಕತ್ರಿನಾ ಕೈಫ್​ ಹಾಗೂ ವಿಜಯ್​ ಸೇತುಪತಿಗೆ ವಿಶೇಷ ಕ್ಲಾಸ್​; ಇದು ಹೊಸ ಸಿನಿಮಾ ಅಪ್​ಡೇಟ್​
ವಿಜಯ್​-ಕತ್ರಿನಾ
Follow us on

ನಟ ವಿಜಯ್​ ಸೇತುಪತಿ (Vijay Sethupathi) ದಕ್ಷಿಣ ಭಾರತದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಅವರ ನಟನೆ ಎಲ್ಲರ ಗಮನ ಸೆಳೆದಿದೆ. ‘96’, ‘ವಿಕ್ರಮ್​ ವೇದ’ ಚಿತ್ರಗಳಲ್ಲಿ ಅವರ ಅದ್ಭುತ ನಟನೆಗೆ ಪ್ರೇಕ್ಷಕರು ಮಾರು ಹೋಗಿದ್ದಾರೆ. ಕತ್ರಿನಾ ಕೈಫ್ (Katrina Kaif)​ ಕೂಡ ಅಷ್ಟೇ, ಬಾಲಿವುಡ್​ನಲ್ಲಿ ಅವರಿಗೆ ಸಾಕಷ್ಟು ಬೇಡಿಕೆ ಇದೆ. ಈಗ ಇಬ್ಬರೂ ಹೊಸ ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ. ‘ಮೇರಿ ಕ್ರಿಸ್​ಮಸ್​’ ಚಿತ್ರದಲ್ಲಿ ಇಬ್ಬರೂ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್​ ಆರಂಭವಾಗೋಕೆ ಇನ್ನೂ ಸಮಯವಿದೆ. ಆದರೆ, ಅದಕ್ಕೂ ಮೊದಲು ಈ ಜೋಡಿ ವರ್ಕ್​​ಶಾಪ್​ ಒಂದರಲ್ಲಿ ಪಾಲ್ಗೊಳ್ಳಲಿದೆ.

ಆಯುಷ್ಮಾನ್​ ಖುರಾನಾ ಅಭಿನಯದ ‘ಅಂಧಾಧೂನ್​’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಚಿತ್ರ ನಿರ್ದೇಶನ ಮಾಡಿದ್ದ ಶ್ರೀರಾಮ್​ ರಾಘವನ್​ ಅವರು ಈಗ ‘ಮೇರಿ ಕ್ರಿಸ್​ಮಸ್’​ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದ ಸ್ಕ್ರಿಪ್ಟ್​ ಕೆಲಸಗಳು ಸದ್ಯ ಪ್ರಗತಿಯಲ್ಲಿವೆ. ಈಗ ಕತ್ರಿನಾ ಹಾಗೂ ವಿಜಯ್​ ಸೇತುಪತಿಗೆ ವಿಶೇಷ ವರ್ಕ್​ಶಾಪ್​ ನಡೆಸಲು ನಿರ್ದೇಶಕರು ನಿರ್ಧರಿಸಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ ಎನ್ನಲಾಗಿದೆ.

ಕತ್ರಿನಾ ಕೈಫ್​ ಹಾಗೂ ವಿಜಯ್​ ಸೇತುಪತಿ ಈವರೆಗೆ ಒಬ್ಬರನ್ನೊಬ್ಬರು ಭೇಟಿ ಮಾಡಿಲ್ಲ. ಇದೇ ಮೊದಲ ಬಾರಿಗೆ ಇಬ್ಬರೂ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇವರ ನಡುವೆ ಒಳ್ಳೆಯ ಕೆಮಿಸ್ಟ್ರಿ ಬೆಳೆಯಲಿ ಎಂಬುದು ನಿರ್ದೇಶಕರ ಉದ್ದೇಶ. ಇನ್ನು ಇಬ್ಬರ ಪಾತ್ರ ತುಂಬಾನೇ ಭಿನ್ನವಾಗಿದ್ದು, ಅದಕ್ಕೆ ಕೊಂಚ ಸಿದ್ಧತೆಯ ಅಗತ್ಯವಿದೆ. ಹೀಗಾಗಿ, ಈ ಜೋಡಿಗೆ ವಿಶೇಷ ಕ್ಲಾಸ್​ ತೆಗೆದುಕೊಳ್ಳಲಾಗುತ್ತಿದೆ.

‘ಕತ್ರಿನಾ ಕೈಫ್ ಅವರನ್ನು ನಾನು ಭೇಟಿಯಾಗಿಲ್ಲ. ಆದರೆ, ಅದು ನನಗೆ ಸಮಸ್ಯೆಯಲ್ಲ. ಈ ಮೊದಲು ಕೂಡ ಹಿಂದೆಂದೂ ಭೇಟಿಯಾಗದ ಅನೇಕ ಸಹ ನಟರೊಂದಿಗೆ ನಾನು ಅಭಿನಯಿಸಿದ್ದೇನೆ. ನಾನು ಚಿತ್ರದ ಸ್ಕ್ರಿಪ್ಟ್ ಇಷ್ಟಪಟ್ಟೆ. ಹೀಗಾಗಿ ಸಿನಿಮಾ ಒಪ್ಪಿಕೊಂಡಿದ್ದೇನೆ’ ಎಂದಿದ್ದಾರೆ ವಿಜಯ್​ ಸೇತುಪತಿ.

ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಇತ್ತೀಚೆಗೆ ಮದುವೆ ಆಗಿದ್ದರು. ಅದ್ದೂರಿಯಾಗಿ ಇವರ ವಿವಾಹ ನೆರವೇರಿತ್ತು. ಮದುವೆ ಫೋಟೋಗಳನ್ನು ಮಾತ್ರ ಈ ದಂಪತಿ ಹಂಚಿಕೊಂಡಿತ್ತು. ಯಾವುದೇ ವಿಡಿಯೋವನ್ನು ಇವರು ಹಂಚಿಕೊಂಡಿಲ್ಲ. ಅಮೇಜಾನ್​ ಪ್ರೈಮ್​ ವಿಡಿಯೋಗೆ ಮದುವೆ ವಿಡಿಯೋ ಪ್ರಸಾರದ ಹಕ್ಕನ್ನು ಇವರು ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ವಿಶೇಷ ಫೋಟೊ ಹಂಚಿಕೊಂಡ ಕತ್ರಿನಾ ಕೈಫ್​; ಅಭಿಮಾನಿಗಳು ಪತ್ತೆ ಹಚ್ಚಲು ಹೋಗಿದ್ದು ಏನು?

Year Ender 2021: ಈ ವರ್ಷ ಭಾರೀ ಸುದ್ದಿ ಮಾಡಿದ ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ಮದುವೆ