Vamika: ಕ್ರಿಕೆಟರ್ ಆಗ್ತಾಳಾ ವಮಿಕಾ? ಬಿಗ್ ಹಿಂಟ್ ಕೊಟ್ಟ ವಿರಾಟ್ ಕೊಹ್ಲಿ

|

Updated on: May 17, 2024 | 11:41 AM

ವಿರಾಟ್ ಕೊಹ್ಲಿ ಅವರು ಟೀಂ ಇಂಡಿಯಾ ಹಾಗೂ ಐಪಿಎಲ್​ನಲ್ಲಿ ಆರ್​ಸಿಬಿ ಕ್ಯಾಪ್ಟನ್ ಆಗಿ ಮಿಂಚಿದರು. ಈಗ ಅವರು ಕ್ಯಾಪ್ಟನ್ಸಿಯಿಂದ ಕೆಳಕ್ಕೆ ಇಳಿದಿದ್ದಾರೆ. ತಂಡದಲ್ಲಿ ಒಬ್ಬರಾಗಿ ಪಂದ್ಯಗಳನ್ನು ಆಡುತ್ತಿದ್ದಾರೆ. ಈಗ ಅವರು ನಟ ಹಾಗೂ ಆರ್​​ಸಿಬಿ ಇನ್​ಸೈಡರ್​ ದ್ಯಾನಿಶ್ ಸೇಟ್ ಜೊತೆ ಮಾತನಾಡಿದ್ದಾರೆ.

Vamika: ಕ್ರಿಕೆಟರ್ ಆಗ್ತಾಳಾ ವಮಿಕಾ? ಬಿಗ್ ಹಿಂಟ್ ಕೊಟ್ಟ ವಿರಾಟ್ ಕೊಹ್ಲಿ
ವಿರಾಟ್
Follow us on

ಸ್ಟಾರ್ ಹೀರೋ/ಹೀರೋಯಿನ್​ಗಳ ಮಕ್ಕಳು ಸಾಮಾನ್ಯವಾಗಿ ಚಿತ್ರರಂಗದಲ್ಲೇ ಮುಂದುವರಿಯೋಕೆ ಇಷ್ಟಪಡುತ್ತಾರೆ. ಕ್ರಿಕೆಟರ್​ಗಳ ಮಕ್ಕಳು ಕೂಡ ಬ್ಯಾಟ್​ ಅಥವಾ ಬಾಲ್ ಹಿಡಿದು ಮೈದಾನಕ್ಕೆ ಇಳಿಯೋಕೆ ಇಷ್ಟಪಡುತ್ತಾರೆ. ಕ್ರಿಕೆಟರ್ ವಿರಾಟ್​ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ (Anushka Sharma) ಮಗಳು ವಮಿಕಾ ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಈ ಬಗ್ಗೆ ವಿರಾಟ್ ಕೊಹ್ಲಿ ಅವರು ದೊಡ್ಡ ಸೂಚನೆ ಕೊಟ್ಟಿದ್ದಾರೆ. ಜೊತೆಗೆ ಅಂತಿಮ ಆಯ್ಕೆ ಕೂಡ ಅವರದ್ದೇ ಎಂದಿದ್ದಾರೆ.

ವಿರಾಟ್ ಕೊಹ್ಲಿ ಅವರು ಟೀಂ ಇಂಡಿಯಾ ಹಾಗೂ ಐಪಿಎಲ್​ನಲ್ಲಿ ಆರ್​ಸಿಬಿ ಕ್ಯಾಪ್ಟನ್ ಆಗಿ ಮಿಂಚಿದರು. ಈಗ ಅವರು ಕ್ಯಾಪ್ಟನ್ಸಿಯಿಂದ ಕೆಳಕ್ಕೆ ಇಳಿದಿದ್ದಾರೆ. ತಂಡದಲ್ಲಿ ಒಬ್ಬರಾಗಿ ಪಂದ್ಯಗಳನ್ನು ಆಡುತ್ತಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ ಅವರು ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್​ನ ಉಳಿಸಿಕೊಂಡಿದ್ದಾರೆ. ಈಗ ಅವರು ನಟ ಹಾಗೂ ಆರ್​​ಸಿಬಿ ಇನ್​ಸೈಡರ್​ ದ್ಯಾನಿಶ್ ಸೇಟ್ ಜೊತೆ ಮಾತನಾಡಿದ್ದಾರೆ. ಈ ವೇಳೆ ಅವರು ದೊಡ್ಡ ಸೂಚನೆ ಒಂದನ್ನು ಕೊಟ್ಟಿದ್ದಾರೆ.
ಇದನ್ನೂ ಓದಿ:  ಗನ್ ಸೆಲೆಬ್ರೇಷನ್ ಮಾಡಿದ ಪಂಜಾಬ್ ಬ್ಯಾಟರ್​ನ ಮೈಚಳಿ ಬಿಡಿಸಿದ ವಿರಾಟ್ ಕೊಹ್ಲಿ: ವಿಡಿಯೋ

‘ಮಗ ಹೇಗಿದ್ದಾನೆ’ ಎಂದು ದ್ಯಾನಿಶ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ವಿರಾಟ್, ‘ಮಗ ಆರೋಗ್ಯವಾಗಿದ್ದಾನೆ’ ಎಂದಿದ್ದಾರೆ. ಆ ಬಳಿಕ ಮಗಳ ಬಗ್ಗೆ ಅವರು ಹೇಳಿದ್ದಾರೆ. ‘ಮಗಳು ಬ್ಯಾಟ್ ತೆಗೆದುಕೊಂಡು ಸ್ವಿಂಗ್ ಮಾಡುತ್ತಾಳೆ. ಅವಳಿಗೆ ಅದು ಇಷ್ಟ. ಅಂತಿಮವಾಗಿ ಅವಳ ಆಯ್ಕೆ’ ಎಂದಿದ್ದಾರೆ  ವಿರಾಟ್ ಕೊಹ್ಲಿ.

ವಿರಾಟ್ ಕೊಹ್ಲಿ ನೀಡಿರೋ ಈ ಹೇಳಿಕೆ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಭರ್ಜರಿ ಚರ್ಚೆ ಆಗುತ್ತಿದೆ. ವಿರಾಟ್ ಕೊಹ್ಲಿ ಅವರ ಮಗಳನ್ನು ಸಿನಿಮಾ ರಂಗಕ್ಕೆ ಪರಿಚಯಿಸುತ್ತಾರೋ ಅಥವಾ ಕ್ರಿಕೆಟ್ ಲೋಕಕ್ಕೆ ಪರಿಚಯಿಸುತ್ತಾರೋ ಎನ್ನುವ ಕುತೂಹಲ ಮೂಡಿದೆ. ಅನುಷ್ಕಾ ಶರ್ಮಾ ಅವರು ಸದ್ಯ ನಟನೆಯಿಂದ ದೂರವೇ ಇದ್ದಾರೆ. ಈ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.