ಬರ್ತ್​ಡೇ ಗರ್ಲ್​ ನುಸ್ರತ್ ಭರುಚಾ ಬಗ್ಗೆ ಇಲ್ಲಿದೆ ಅಪರೂಪದ ಮಾಹಿತಿ

Nushrratt Bharuccha Birthday: ನುಸ್ರತ್ ಭರುಚಾ ಅವರನ್ನು ಇಷ್ಟಪಡುವ ಅಭಿಮಾನಿಗಳು ಅವರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಬಯಸುತ್ತಾರೆ. ಅವರ ಕುಟುಂಬ, ವೈಯಕ್ತಿಕ ಜೀವನದ ಬಗ್ಗೆ ಫ್ಯಾನ್ಸ್​ಗೆ ಬಹಳ ಕಡಿಮೆ ತಿಳಿದಿದೆ. ನುಸ್ರತ್ ಭರುಚಾ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಬಯಸಿದರೆ, ಈ ಸ್ಟೋರಿಯಲ್ಲಿ ಬಾಲಿವುಡ್ ನಟಿ ನುಸ್ರತ್ ಭರುಚಾ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಹೇಳುತ್ತಿದ್ದೇವೆ.

ಬರ್ತ್​ಡೇ ಗರ್ಲ್​ ನುಸ್ರತ್ ಭರುಚಾ ಬಗ್ಗೆ ಇಲ್ಲಿದೆ ಅಪರೂಪದ ಮಾಹಿತಿ
ನುಸ್ರತ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: May 17, 2024 | 7:46 AM

ಬಾಲಿವುಡ್ ನಟಿ ನುಸ್ರತ್ ಭರುಚಾ (Nushrratt Bharuccha) ಅವರು ಚಿತ್ರರಂಗದಲ್ಲಿ ಅನೇಕ ಸೂಪರ್​​ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಸೋನು ಕೆ ಟಿಟು ಕಿ ಸ್ವೀಟಿ’ ಚಿತ್ರದಲ್ಲಿ ನುಸ್ರತ್ ಅಭಿನಯವು ಬಹಳವಾಗಿ ಮೆಚ್ಚುಗೆ ಪಡೆಯಿತು. ಇದಲ್ಲದೆ, ಆಯುಷ್ಮಾನ್ ಖುರಾನಾ ಅವರೊಂದಿಗೆ ನಟಿಸಿದ ‘ಡ್ರೀಮ್ ಗರ್ಲ್’ ಮತ್ತು ‘ಪ್ಯಾರ್ ಕಾ ಪಂಚ್​ನಾಮಾ’ದಂತಹ ಚಿತ್ರಗಳು ಮೆಚ್ಚುಗೆ ಪಡೆದಿದೆ. ಇದರ ಜೊತೆಗೆ ನುಸ್ರತ್ ಕೆಲವು ಮ್ಯೂಸಿಕ್ ವೀಡಿಯೊಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇಂದು (ಮೇ 17) ಅವರಿಗೆ ಜನ್ಮದಿನ. ಪ್ರೇಕ್ಷಕರ ಹೃದಯದಲ್ಲಿ ತಮ್ಮದೇ ಆದ ವಿಭಿನ್ನ ಸ್ಥಾನವನ್ನು ಪಡೆದಿರುವ ಅವರಿಗೆ ಎಲ್ಲರೂ ಬರ್ತ್​ಡೇ ಶುಭಾಶಯ ಕೋರುತ್ತಿದ್ದಾರೆ.

ನುಸ್ರತ್ ಭರುಚಾ ಅವರನ್ನು ಇಷ್ಟಪಡುವ ಅಭಿಮಾನಿಗಳು ಅವರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಬಯಸುತ್ತಾರೆ. ಅವರ ಕುಟುಂಬ, ವೈಯಕ್ತಿಕ ಜೀವನದ ಬಗ್ಗೆ ಫ್ಯಾನ್ಸ್​ಗೆ ಬಹಳ ಕಡಿಮೆ ತಿಳಿದಿದೆ. ನುಸ್ರತ್ ಭರುಚಾ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಬಯಸಿದರೆ, ಈ ಸ್ಟೋರಿಯಲ್ಲಿ ಬಾಲಿವುಡ್ ನಟಿ ನುಸ್ರತ್ ಭರುಚಾ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಹೇಳುತ್ತಿದ್ದೇವೆ.

2006ರಲ್ಲಿ ರಿಲೀಸ್ ಆದ ‘ಜೈ ಸಂತೋಷಿ ಮಾ’ ಸಿನಿಮಾ ಅವರ ನಟನೆಯ ಮೊದಲ ಚಿತ್ರ. 2011ರಲ್ಲಿ ಬಿಡುಗಡೆಯಾದ ‘ಪ್ಯಾರ್ ಕಾ ಪಂಚ್​​ನಾಮಾ’ ಚಿತ್ರದಲ್ಲಿ ನುಸ್ರತ್ ಭರುಚಾ ಅವರ ನಟನೆಯು ಹೆಚ್ಚು ಮೆಚ್ಚುಗೆ ಪಡೆಯಿತು. ಇದರಿಂದ ಅವರ ವೃತ್ತಿ ಬದುಕು ಬದಲಾಯಿತು. ಸಿನಿಮಾ ಜಗತ್ತಿಗೆ ಬರುವ ಮೊದಲು ನುಸ್ರತ್ ತಮ್ಮ ನಟನಾ ವೃತ್ತಿಯನ್ನು ಸಣ್ಣ ಪರದೆಯಿಂದ ಪ್ರಾರಂಭಿಸಿದರು. ಅವರು 2002ರಲ್ಲಿ Zee TVಯ ಧಾರಾವಾಹಿ ‘ಕಿಟ್ಟಿ ಪಾರ್ಟಿ’ಯಲ್ಲಿ ಕೆಲಸ ಮಾಡಿದರು. ಈ ಧಾರಾವಾಹಿಯಲ್ಲಿ ಬಾಲಿವುಡ್ ನಟಿ ಪೂನಂ ಧಿಲ್ಲೋನ್ ಕೂಡ ಇದ್ದರು. ನುಸ್ರತ್ ಒಂದು ವರ್ಷದೊಳಗೆ ಕಾರ್ಯಕ್ರಮವನ್ನು ತೊರೆದರು.

ನುಸ್ರತ್ ಅವರ ಕುಟುಂಬವು ಅವರಿಗೆ ನಟಿಸಲು ಅನುಮತಿಸರಿಲಿಲ್ಲ. ಆದರೆ ನಂತರ ಅವರು ತಮ್ಮ ಕುಟುಂಬದವರಿಗೆ ಎಲ್ಲವನ್ನೂ ಮನವರಿಕೆ ಮಾಡಿದರು. ಅವರು ಮಾಡೆಲ್ ಆದರು. ಜಾಹೀರಾತುಗಳಲ್ಲಿ ಅವರು ಕೆಲಸ ಮಾಡಿದರು. ಅವರು ಬಾಲಿವುಡ್‌ನಲ್ಲಿ ವೃತ್ತಿಜೀವನವನ್ನು ಮಾಡಲು ಪ್ರಯತ್ನಿಸುತ್ತಿರುವಾಗ , ಅವರು ಬ್ಯಾಕ್ ಡ್ಯಾನ್ಸರ್ ಮತ್ತು ರಂಗಭೂಮಿಯಲ್ಲಿ ಕೆಲಸ ಮಾಡಿದರು.

2008ರ ‘ಸ್ಲಮ್‌ಡಾಗ್ ಮಿಲಿಯನೇರ್‌’ ಚಿತ್ರದಲ್ಲಿ ನಟಿಸಲು ಆಯ್ಕೆ ಆಗಿದ್ದರು. ಆದರೆ ಕೆಲವು ಕಾರಣಗಳಿಂದ ನುಸ್ರತ್ ಈ ಚಿತ್ರದ ಭಾಗವಾಗಲು ಸಾಧ್ಯವಾಗಲಿಲ್ಲ. ಈ ಚಿತ್ರವು 10 ಆಸ್ಕರ್ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತು ಮತ್ತು ಅನೇಕ ಪ್ರಶಸ್ತಿಗಳನ್ನು ಸಹ ಗಳಿಸಿತು.

ಇದನ್ನೂ ಓದಿ: ಬಿಕಿನಿ ಧರಿಸಿ ಒದ್ದೆ ಮೈಯಲ್ಲಿ ಈಜುಕೊಳದಿಂದ ಎದ್ದುಬರುತ್ತಿರೋ ವಿಡಿಯೋ ಪೋಸ್ಟ್ ಮಾಡಿದ ಸಂಸದೆ ನುಸ್ರತ್ ಜಹಾನ್ ಗೆ ನೆಟ್ಟಿಗರಿಂದ ತರಾಟೆ!

ನುಸ್ರತ್ ಅನೇಕ ಸೂಪರ್‌ಹಿಟ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರೂ, ನುಸ್ರತ್ ಅವರ ಕನಸಿನ ಯೋಜನೆ ಯಾವುದು ಎಂದು ನಿಮಗೆ ತಿಳಿದಿದೆಯೇ? ಈ ಹಿಂದೆ ಸಂದರ್ಶನವೊಂದರಲ್ಲಿ ನುಸ್ರತ್ ತಮ್ಮ ಕನಸಿನ ಯೋಜನೆಯ ಬಗ್ಗೆ ಮಾತನಾಡಿದ್ದರು. ಮಧುಬಾಲಾ ಅವರ ಬಯೋಪಿಕ್ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು. ಮಧುಬಾಲಾ ಅವರ ಜೀವನವು ದುರಂತ ಅಂತ್ಯ ಕಂಡಿತ್ತು. ಇದರ ಜೊತೆಗೆ ಅವರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಗಮನ ಸೆಳೆದಿದ್ದರು. ನುಸ್ರತ್ ಭರುಚಾ ಯಾವಾಗಲೂ ಮಾಂಸಾಹಾರ ಸೇವನೆ ಮಾಡುತ್ತಿದ್ದರು. ನಂತರ ಆಹಾರ ತಜ್ಞರ ಸಲಹೆಯನ್ನು ಅನುಸರಿಸಿ, ಅವರು ಸಸ್ಯಾಹಾರಿಯಾದರು. ಈಗ ಸಸ್ಯಾಹಾರವನ್ನೇ ಸೇವಿಸುತ್ತಾರೆ. ಸದ್ಯ ಅವರು ‘ಚೋರಿ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್