Vamika: ಕ್ರಿಕೆಟರ್ ಆಗ್ತಾಳಾ ವಮಿಕಾ? ಬಿಗ್ ಹಿಂಟ್ ಕೊಟ್ಟ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಅವರು ಟೀಂ ಇಂಡಿಯಾ ಹಾಗೂ ಐಪಿಎಲ್ನಲ್ಲಿ ಆರ್ಸಿಬಿ ಕ್ಯಾಪ್ಟನ್ ಆಗಿ ಮಿಂಚಿದರು. ಈಗ ಅವರು ಕ್ಯಾಪ್ಟನ್ಸಿಯಿಂದ ಕೆಳಕ್ಕೆ ಇಳಿದಿದ್ದಾರೆ. ತಂಡದಲ್ಲಿ ಒಬ್ಬರಾಗಿ ಪಂದ್ಯಗಳನ್ನು ಆಡುತ್ತಿದ್ದಾರೆ. ಈಗ ಅವರು ನಟ ಹಾಗೂ ಆರ್ಸಿಬಿ ಇನ್ಸೈಡರ್ ದ್ಯಾನಿಶ್ ಸೇಟ್ ಜೊತೆ ಮಾತನಾಡಿದ್ದಾರೆ.
ಸ್ಟಾರ್ ಹೀರೋ/ಹೀರೋಯಿನ್ಗಳ ಮಕ್ಕಳು ಸಾಮಾನ್ಯವಾಗಿ ಚಿತ್ರರಂಗದಲ್ಲೇ ಮುಂದುವರಿಯೋಕೆ ಇಷ್ಟಪಡುತ್ತಾರೆ. ಕ್ರಿಕೆಟರ್ಗಳ ಮಕ್ಕಳು ಕೂಡ ಬ್ಯಾಟ್ ಅಥವಾ ಬಾಲ್ ಹಿಡಿದು ಮೈದಾನಕ್ಕೆ ಇಳಿಯೋಕೆ ಇಷ್ಟಪಡುತ್ತಾರೆ. ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ (Anushka Sharma) ಮಗಳು ವಮಿಕಾ ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಈ ಬಗ್ಗೆ ವಿರಾಟ್ ಕೊಹ್ಲಿ ಅವರು ದೊಡ್ಡ ಸೂಚನೆ ಕೊಟ್ಟಿದ್ದಾರೆ. ಜೊತೆಗೆ ಅಂತಿಮ ಆಯ್ಕೆ ಕೂಡ ಅವರದ್ದೇ ಎಂದಿದ್ದಾರೆ.
ವಿರಾಟ್ ಕೊಹ್ಲಿ ಅವರು ಟೀಂ ಇಂಡಿಯಾ ಹಾಗೂ ಐಪಿಎಲ್ನಲ್ಲಿ ಆರ್ಸಿಬಿ ಕ್ಯಾಪ್ಟನ್ ಆಗಿ ಮಿಂಚಿದರು. ಈಗ ಅವರು ಕ್ಯಾಪ್ಟನ್ಸಿಯಿಂದ ಕೆಳಕ್ಕೆ ಇಳಿದಿದ್ದಾರೆ. ತಂಡದಲ್ಲಿ ಒಬ್ಬರಾಗಿ ಪಂದ್ಯಗಳನ್ನು ಆಡುತ್ತಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಅವರು ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ನ ಉಳಿಸಿಕೊಂಡಿದ್ದಾರೆ. ಈಗ ಅವರು ನಟ ಹಾಗೂ ಆರ್ಸಿಬಿ ಇನ್ಸೈಡರ್ ದ್ಯಾನಿಶ್ ಸೇಟ್ ಜೊತೆ ಮಾತನಾಡಿದ್ದಾರೆ. ಈ ವೇಳೆ ಅವರು ದೊಡ್ಡ ಸೂಚನೆ ಒಂದನ್ನು ಕೊಟ್ಟಿದ್ದಾರೆ. ಇದನ್ನೂ ಓದಿ: ಗನ್ ಸೆಲೆಬ್ರೇಷನ್ ಮಾಡಿದ ಪಂಜಾಬ್ ಬ್ಯಾಟರ್ನ ಮೈಚಳಿ ಬಿಡಿಸಿದ ವಿರಾಟ್ ಕೊಹ್ಲಿ: ವಿಡಿಯೋ
‘ಮಗ ಹೇಗಿದ್ದಾನೆ’ ಎಂದು ದ್ಯಾನಿಶ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ವಿರಾಟ್, ‘ಮಗ ಆರೋಗ್ಯವಾಗಿದ್ದಾನೆ’ ಎಂದಿದ್ದಾರೆ. ಆ ಬಳಿಕ ಮಗಳ ಬಗ್ಗೆ ಅವರು ಹೇಳಿದ್ದಾರೆ. ‘ಮಗಳು ಬ್ಯಾಟ್ ತೆಗೆದುಕೊಂಡು ಸ್ವಿಂಗ್ ಮಾಡುತ್ತಾಳೆ. ಅವಳಿಗೆ ಅದು ಇಷ್ಟ. ಅಂತಿಮವಾಗಿ ಅವಳ ಆಯ್ಕೆ’ ಎಂದಿದ್ದಾರೆ ವಿರಾಟ್ ಕೊಹ್ಲಿ.
Nags said about Vamika and Akaay, one for WPL and one for IPL😂😭❤️#viratkohli pic.twitter.com/paIO9xme7s
— 𝙒𝙧𝙤𝙜𝙣🥂 (@wrognxvirat) May 17, 2024
ವಿರಾಟ್ ಕೊಹ್ಲಿ ನೀಡಿರೋ ಈ ಹೇಳಿಕೆ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಭರ್ಜರಿ ಚರ್ಚೆ ಆಗುತ್ತಿದೆ. ವಿರಾಟ್ ಕೊಹ್ಲಿ ಅವರ ಮಗಳನ್ನು ಸಿನಿಮಾ ರಂಗಕ್ಕೆ ಪರಿಚಯಿಸುತ್ತಾರೋ ಅಥವಾ ಕ್ರಿಕೆಟ್ ಲೋಕಕ್ಕೆ ಪರಿಚಯಿಸುತ್ತಾರೋ ಎನ್ನುವ ಕುತೂಹಲ ಮೂಡಿದೆ. ಅನುಷ್ಕಾ ಶರ್ಮಾ ಅವರು ಸದ್ಯ ನಟನೆಯಿಂದ ದೂರವೇ ಇದ್ದಾರೆ. ಈ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.