‘ಜೈಲು ವಾಸ ತಪ್ಪಿಸಿಕೊಳ್ಳಲು ರಾಖಿ ಅನಾರೋಗ್ಯ ನಾಟಕ’: ಮಾಜಿ ಗಂಡನ ಆರೋಪ
ವರದಿಗಳ ಪ್ರಕಾರ, ರಾಖಿ ಸಾವಂತ್ ಮೇಲೆ ಹಲವು ದೂರುಗಳು ದಾಖಲಾಗಿವೆ. ಆ ಕೇಸ್ನಲ್ಲಿ ಪೊಲೀಸರು ವಿಚಾರಣೆ ಆರಂಭಿಸಲಿದ್ದಾರೆ. ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ರಾಖಿ ಸಾವಂತ್ ಈಗ ಅನಾರೋಗ್ಯದ ನಾಟಕ ಆಡುತ್ತಿದ್ದಾರೆ ಎಂದು ಅವರ ಮಾಜಿ ಗಂಡ ಆದಿಲ್ ಖಾನ್ ಆರೋಪ ಮಾಡಿದ್ದಾರೆ.
ಯಾವಾಗಲೂ ವಿವಾದದ ಮೂಲಕವೇ ಸುದ್ದಿ ಆಗುವ ನಟಿ ರಾಖಿ ಸಾವಂತ್ (Rakhi Sawant) ಅವರು ಈಗ ಆಸ್ಪತ್ರೆಯಲ್ಲಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಪ್ರಜ್ಞೆಯೇ ಇಲ್ಲದೇ ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿಕೊಂಡಿರುವ ಒಂದು ಫೋಟೋ ವೈರಲ್ ಆಗಿದೆ. ರಾಖಿ ಸಾವಂತ್ ಬೇಗ ಗುಣಮುಖರಾಗಲಿ ಎಂದು ಅವರ ಫ್ಯಾನ್ಸ್ ಪ್ರಾರ್ಥಿಸುತ್ತಿದ್ದಾರೆ. ಆದರೆ ಅವರ ಮಾಜಿ ಪತಿ ಆದಿಲ್ ಖಾನ್ (Adil Khan) ಬೇರೊಂದು ಆರೋಪ ಮಾಡಿದ್ದಾರೆ. ರಾಖಿ ಸಾವಂತ್ ಅನಾರೋಗ್ಯದ ನಾಟಕ ಆಡುತ್ತಿದ್ದಾರೆ ಎಂದು ಆದಿಲ್ ಖಾನ್ ಹೇಳಿದ್ದಾರೆ.
ರಾಖಿ ಸಾವಂತ್ ಮತ್ತು ಆದಿಲ್ ಖಾನ್ ಅವರು ಮದುವೆ ಆಗಿದ್ದರು. ಆದರೆ ಕೆಲವೇ ದಿನಗಳ ಬಳಿಕ ಅವರ ಮದುವೆ ಮುರಿದು ಬಿತ್ತು. ಇಬ್ಬರ ನಡುವಿನ ಜಗಳ ಬೀದಿಗೆ ಬಂತು. ಬಳಿಕ ಆದಿಲ್ ಖಾನ್ ಬೇರೆ ಮದುವೆ ಮಾಡಿಕೊಂಡರು. ಆದರೆ ಈಗ ಅವರು ಕೆಲವು ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಜೊತೆಗಿನ ಖಾಸಗಿ ಫೋಟೋ, ವಿಡಿಯೋಗಳನ್ನು ರಾಖಿ ಸಾವಂತ್ ಲೀಕ್ ಮಾಡಿದ್ದಾರೆ ಎಂದು ಆದಿಲ್ ಖಾನ್ ಆರೋಪಿಸಿದ್ದಾರೆ.
ಐಪಿಸಿ ಸೆಕ್ಷನ್ 500, 504, 34ರ ಅಡಿಯಲ್ಲಿ ರಾಖಿ ಸಾವಂತ್ ವಿರುದ್ಧ ದೂರು ದಾಖಲಾಗಿದೆ ಎನ್ನಲಾಗಿದೆ. ಹಾಗಾಗಿ ಪೊಲೀಸರು ಅವರ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈ ಕೇಸ್ನಲ್ಲಿ ರಾಖಿ ಸಾವಂತ್ ಜೈಲಿಗೆ ಹೋಗಬೇಕಾಗಬಹುದು. ಅದರಿಂದ ತಪ್ಪಿಸಿಕೊಳ್ಳಲು ಅವರೀಗ ಅನಾರೋಗ್ಯದ ನಾಟಕ ಆಡುತ್ತಿದ್ದಾರೆ ಎಂದು ಆದಿಲ್ ಖಾನ್ ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ಇದನ್ನೂ ಓದಿ: ರಾಖಿ ಸಾವಂತ್ಗೆ ಕ್ಯಾನ್ಸರ್? ಮಾಜಿ ಪತಿಯರಿಂದ ಭಿನ್ನ ಭಿನ್ನ ಹೇಳಿಕೆ
ಚಿತ್ರರಂಗದಲ್ಲಿ ರಾಖಿ ಸಾವಂತ್ ಅವರಿಗೆ ಸರಿಯಾದ ಅವಕಾಶಗಳು ಸಿಗಲಿಲ್ಲ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಅವರು ಒಂದಷ್ಟು ಪ್ರಚಾರ ಪಡೆದುಕೊಂಡರು. ಆ ಬಳಿಕ ಅವರು ಹೆಚ್ಚು ಸುದ್ದಿ ಆಗಿದ್ದೇ ವಿವಾದಗಳ ಕಾರಣದಿಂದ. ಆಗಾಗ ಅವರ ವೈಯಕ್ತಿಕ ಜೀವನದ ಕಿರಿಕ್ ಬೀದಿಗೆ ಬರುತ್ತದೆ. ಈಗ ಅವರ ಮಾಜಿ ಗಂಡ ಮಾಡಿದ ಆರೋಪಗಳಿಗೆ ಅವರು ಏನು ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.