ರಾಖಿ ಸಾವಂತ್ಗೆ ಕ್ಯಾನ್ಸರ್? ಮಾಜಿ ಪತಿಯರಿಂದ ಭಿನ್ನ ಭಿನ್ನ ಹೇಳಿಕೆ
ರಾಖಿ ಸಾವಂತ್ಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. ಇನ್ನು ನಾಲ್ಕು ವಾರಗಳ ಒಳಗಾಗಿ ರಾಖಿ ಸಾವಂತ್ ಮುಂಬೈ ಪೊಲೀಸರಿಗೆ ಶರಣಾಗಬೇಕು ಎಂದು ಸೂಚಿಸಿದೆ ಎನ್ನಲಾಗಿದೆ. ಸುಪ್ರೀಂಕೋರ್ಟ್ನ ಆದೇಶ ಬಂದಿದ್ದಕ್ಕೆಂದೇ ರಾಖಿ ಸಾವಂತ್ ಆಸ್ಪತ್ರೆಗೆ ದಾಖಲಾದರೇ ಎಂಬ ಅನುಮಾನವೂ ಮೂಡಿದೆ.
ರಾಖಿ ಸಾವಂತ್ (Rakhi Sawant) ಅವರು ಸದ್ಯ ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆ ಸೇರಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರು ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಈ ಮಧ್ಯೆ ಇದೊಂದು ನಾಟಕ ಎಂದು ರಾಖಿ ಅವರ ಮಾಜಿ ಪತಿ ಆದಿಲ್ ಖಾನ್ ದುರಾನಿ ಅವರು ಹೇಳಿಕೆ ನೀಡಿದ್ದಾರೆ. ‘ಜೈಲಿನಿಂದ ತಪ್ಪಿಸಿಕೊಳ್ಳಲು ರಾಖಿ ಈ ರೀತಿ ಮಾಡುತ್ತಿದ್ದಾರೆ’ ಎಂದು ಆದಿಲ್ ಖಾನ್ ಅವರು ಅವರು ಹೇಳಿದ್ದಾರೆ. ಈ ಹೇಳಿಕೆ ರಾಖಿ ಕಿವಿಗೆ ಬಿದ್ದರೆ ಅವರು ಕೋಪಗೊಳ್ಳೋದು ಪಕ್ಕಾ. ಮತ್ತೋರ್ವ ಮಾಜಿ ಪತಿ ರಾಖಿಗೆ ಕ್ಯಾನ್ಸರ್ ಇದೆ ಎಂದಿದ್ದಾರೆ.
ವಿಡಿಯೋ ಲೀಕ್ ಪ್ರಕರಣಕ್ಕೆ ಸಂಬಂಧಿಸಿ ರಾಖಿ ಸಾವಂತ್ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 500, 504 ಹಾಗೂ 34 ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದಿಲ್ ಖಾನ್ಗೆ ಸಂಬಂಧಿಸಿದ ವಿಡಿಯೋ ಇದಾಗಿದ್ದು, ಅವುಗಳನ್ನು ತಿರುಚಿ ಲೀಕ್ ಮಾಡಿದ್ದಾರೆ ಎನ್ನುವ ಆರೋಪ ಇದೆ. ರಾಖಿ ಸಾವಂತ್ಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. ಇನ್ನು ನಾಲ್ಕು ವಾರಗಳ ಒಳಗಾಗಿ ರಾಖಿ ಸಾವಂತ್ ಮುಂಬೈ ಪೊಲೀಸರಿಗೆ ಶರಣಾಗಬೇಕು ಎಂದು ಸೂಚಿಸಿದೆ ಎನ್ನಲಾಗಿದೆ. ಸುಪ್ರೀಂಕೋರ್ಟ್ನ ಆದೇಶ ಬಂದಿದ್ದಕ್ಕೆಂದೇ ರಾಖಿ ಸಾವಂತ್ ಆಸ್ಪತ್ರೆಗೆ ದಾಖಲಾದರೇ ಎಂಬ ಅನುಮಾನವೂ ಮೂಡಿದೆ.
‘ವೈದ್ಯರು ಏನನ್ನೂ ಹೇಳಿಲ್ಲ. ಅವಳು ಯಾವ ಆಸ್ಪತ್ರೆಯಲ್ಲಿದ್ದಾಳೆಂದು ನಮಗೆ ತಿಳಿದಿಲ್ಲ. ಹೃದಯಾಘಾತವಾಗಿದ್ದರೆ ಅಂಥ ರೋಗಿಗಳಿಗೆ ಸಾಮಾನ್ಯವಾಗಿ ಆಮ್ಲಜನಕದ ಮಾಸ್ಕ್ ಬೇಕಾಗುತ್ತದೆ. ಆದರೆ ಅವಳಿಗೆ (ರಾಖಿ ಸಾವಂತ್) ಅದೂ ಇಲ್ಲ. ಶೀಘ್ರದಲ್ಲೇ ಪೊಲೀಸರಿಗೆ ಶರಣಾಗಬೇಕು ಎಂಬ ಕಾರಣಕ್ಕಾಗಿ ಅವಳು ಈ ರೀತಿ ಮಾಡುತ್ತಿದ್ದಾಳೆ. ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಇದು ನಾಟಕ ಮಾತ್ರ’ ಎಂದು ಆದಿಲ್ ಖಾನ್ ಆರೋಪಿಸಿದ್ದಾರೆ.
ರಾಖಿಯ ಇನ್ನೋರ್ವ ಮಾಜಿ ಪತಿ ರಿತೇಶ್ ರಾಜ್ ಸಿಂಗ್ ಅವರು ದೊಡ್ಡ ಹೇಳಿಕೆ ನೀಡಿದ್ದರು. ಆಕೆಯ ಎದೆ ಮತ್ತು ಹೊಟ್ಟೆಯಲ್ಲಿ ನೋವು ಕಾಣಿಸಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಯಿತು ಎಂದಿದ್ದರು. ಒಂದೆರಡು ಪರೀಕ್ಷೆಗಳನ್ನು ನಡೆಸಿದ ನಂತರ ವೈದ್ಯರು ಆಕೆಯ ಗರ್ಭಾಶಯದಲ್ಲಿ ಗೆಡ್ಡೆಯನ್ನು ಕಂಡುಹಿಡಿದರು ಎಂದು ಅವರು ಹೇಳಿದ್ದಾರೆ. ರಾಖಿಗೆ ಕ್ಯಾನ್ಸರ್ ಇದೆ ಎಂದು ರಿತೇಶ್ ಅವರು ಶಂಕಿಸಿದ್ದಾರೆ. ಹೆಚ್ಚಿನ ಪರೀಕ್ಷಾ ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಆದಿಲ್ಗೆ ಕೇಳಲಾಗಿದೆ. ‘ಆ ರೀತಿ ಏನೂ ಇಲ್ಲ. ನಾನು ಅವಳ ಜೊತೆ ರಿಲೇಶನ್ಶಿಪ್ನಲ್ಲಿ ಇದ್ದಾಗ ಫುಲ್ ಬಾಡಿ ಟೆಸ್ಟ್ ಮಾಡಿಸಿಕೊಂಡಿದ್ದಳು. ಯಾವುದೇ ಪ್ರಾಬ್ಲಮ್ ಇರಲಿಲ್ಲ’ ಎಂದಿದ್ದಾರೆ ಆದಿಲ್ ಖಾನ್.
ಇದನ್ನೂ ಓದಿ: ‘ಇದು ನನ್ನ ಮೊದಲ ಮದುವೆ’; ಎರಡನೇ ವಿವಾಹದ ಬಳಿಕ ಉಲ್ಟಾ ಹೊಡೆದ ರಾಖಿ ಸಾವಂತ್ ಮಾಜಿ ಪತಿ
ಆದಿಲ್ ಖಾನ್ ಹಾಗೂ ರಾಖಿ ಸಾವಂತ್ ಒಟ್ಟಾಗಿದ್ದರು. ಇವರು ಗುಟ್ಟಾಗಿ ಮದುವೆ ಆಗಿದ್ದರು. ಈ ವಿಚಾರವನ್ನು ಮುಚ್ಚಿಡಲಾಗಿತ್ತು. ಇಬ್ಬರೂ ‘ಬಿಗ್ ಬಾಸ್ ಹಿಂದಿ ಸೀಸನ್ 15’ರಲ್ಲಿ ಭಾಗಿ ಆಗಿದ್ದರು. ಆ ಬಳಿಕ ಕೆಲವೇ ತಿಂಗಳಲ್ಲಿ ಇವರು ಬೇರೆ ಆದರು. ಆ ಬಳಿಕ ರಾಖಿ ಸಖತ್ ಡ್ರಾಮಾ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.