ಹಿರಿಯ ನಟನ ಭಯೋತ್ಪಾದಕರ ಬೆಂಬಲಿಗ ಎಂದ ‘ಕಾಶ್ಮೀರ್ ಫೈಲ್ಸ್’ ನಿರ್ದೇಶಕ

|

Updated on: Sep 13, 2023 | 8:08 PM

The Kashmir Files: ತಮ್ಮ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಟೀಕಿಸಿದ ಬಾಲಿವುಡ್​ನ ಹಿರಿಯ ನಟನನ್ನು ಭಯೋತ್ಪಾದಕರ ಬೆಂಬಲಿಗ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕರೆದಿದ್ದಾರೆ.

ಹಿರಿಯ ನಟನ ಭಯೋತ್ಪಾದಕರ ಬೆಂಬಲಿಗ ಎಂದ ಕಾಶ್ಮೀರ್ ಫೈಲ್ಸ್ ನಿರ್ದೇಶಕ
ದಿ ಕಾಶ್ಮೀರ್ ಫೈಲ್ಸ್
Follow us on

ಸಿನಿಮಾ ರಂಗದಲ್ಲಿ (Sandalwood) ರಾಜಕೀಯ, ಪಂಥಗಳು ನುಸುಳಿ ಬಹಳ ಸಮಯವಾಗಿದೆ. ಆದರೆ ಇತ್ತೀಚೆಗೆ ಅದು ತುಸು ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದೆ. ಒಂದು ಪಕ್ಷವನ್ನು ಬೆಂಬಲಿಸುವ, ಒಂದು ರೀತಿಯ ಆದರ್ಶಗಳನ್ನು ಪಾಲಿಸುವವರಿಗಾಗಿ ಅಂಥಹುದೇ ಸಿನಿಮಾಗಳನ್ನು ಮಾಡುವ ವರ್ಗ ಇದೆ, ಆ ಸಿನಿಮಾಗಳನ್ನು ವಿರೋಧಿಸುವ, ಟೀಕಿಸುವ ಇನ್ನೊಂದು ವರ್ಗವೂ ಚಿತ್ರರಂಗದಲ್ಲಿದೆ. ಈ ವರ್ಗಗಳ ನಡುವೆ ಆಗಾಗ್ಗೆ ವಾಕ್​ಸಂಘರ್ಷವೂ ನಡೆಯುತ್ತಿರುತ್ತದೆ. ಇದರ ಭಾಗವಾಗಿಯೇ ಈಗ ‘ದಿ ಕಾಶ್ಮೀರ್ ಫೈಲ್ಸ್‘ (The Kashmir Files) ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಬಾಲಿವುಡ್​ನ ಹಿರಿಯ ನಟರೊಬ್ಬರನ್ನು ‘ಭಯೋತ್ಪಾದಕರ ಬೆಂಬಲಿಗ’ ಎಂದು ಕರೆದಿದ್ದಾರೆ.

ಬಾಲಿವುಡ್​ ಹಿರಿಯ ನಟ ನಾಸಿರುದ್ಧೀನ್ ಶಾ ಇತ್ತೀಚೆಗಷ್ಟೆ, ‘ದಿ ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’, ‘ಗದರ್ 2’ ಸಿನಿಮಾಗಳ ಬಗ್ಗೆ ಮಾತನಾಡುತ್ತಾ, ಅವೆಲ್ಲ ಸಮಾಜವನ್ನು ಒಡೆಯುವ ನೀತಿಯನ್ನು ಹೊಂದಿವೆ ಎಂಬರ್ಥದ ಮಾತುಗಳನ್ನಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ”ನರಮೇಧವನ್ನು ಬೆಂಬಲಿಸುವ ಸಿನಿಮಾಗಳಲ್ಲಿ ನಟಿಸುವುದನ್ನು ಅವರು (ನಾಸಿರುದ್ದೀನ್ ಶಾ) ಎಂಜಾಯ್ ಮಾಡುತ್ತಾರೆ. ಅದು ಅವರ ಧರ್ಮದ ಕಾರಣಕ್ಕೋ ಅಥವಾ ಅವರ ವೈಯಕ್ತಿಕ ದ್ವೇಷಕ್ಕೋ ಗೊತ್ತಿಲ್ಲ. ಕಾರಣ ಏನಾದರೂ ಇರಲಿ, ಅವರು ಭಯೋತ್ಪಾದಕರನ್ನು ಬೆಂಬಲಿಸುತ್ತಾರೆ, ನಾನು ಬೆಂಬಲಿಸುವುದಿಲ್ಲ. ನಾಸಿರ್ ನನ್ನ ಬಗ್ಗೆ, ನನ್ನ ಸಿನಿಮಾ ಬಗ್ಗೆ ಏನು ಹೇಳಿದ್ದಾರೆ ಎಂಬ ಬಗ್ಗೆ ನಾನು ಯೋಚನೆ ಸಹ ಮಾಡುವುದಿಲ್ಲ. ಏಕೆಂದರೆ ನಾನು ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ” ಎಂದಿದ್ದಾರೆ.

ಮುಂದುವರೆದು, ”ಜನ ಕೆಲವು ಬಾರಿ ಹತಾಶೆಗೊಳಗಾಗುತ್ತಾರೆ, ನಾಸಿರ್ ಅವರು ನನ್ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡಿ ಅದು ಹೇಳುತ್ತಿರುವ ನಿಜ ಕಂಡು ಹತಾಶೆಗೆ ಒಳಗಾಗಿರಬೇಕು. ಅವರು ಮುಚ್ಚಿಟ್ಟಿದ್ದನ್ನು ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಚ್ಚಿಟ್ಟಿದ್ದು ಕಂಡು ಹತಾಶರಾಗಿದ್ದಾರೆ. ಅವರಿಗೆ ಜಗತ್ತಿನ ಎದುರು ಬೆತ್ತಲೆ ಆಗಿದ್ದಕ್ಕೆ ಕೋಪ ಬಂದಿದೆ. ಹಾಗಾಗಿಯೇ ಅವರು ಈ ಬಗ್ಗೆ ಪ್ರತಿ ಬಾರಿ ಋಣಾತ್ಮಕವಾಗಿ ಮಾತನಾಡುತ್ತಿದ್ದಾರೆ” ಎಂದಿದ್ದಾರೆ ವಿವೇಕ್ ಅಗ್ನಿಹೋತ್ರಿ.

ಇದನ್ನೂ ಓದಿ:‘ನಾನು ನಕ್ಸಲ್ ಆಗಿದ್ದೆ’; ಕರಾಳ ಸತ್ಯ ಬಿಚ್ಚಿಟ್ಟ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ

ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟ ನಾಸಿರುದ್ಧೀನ್ ಶಾ, ”ದಿ ಕೇರಳ ಸ್ಟೋರಿ’, ‘ಗದರ್ 2’ ಸಿನಿಮಾಗಳನ್ನು ನಾನು ನೋಡಿಲ್ಲ, ಆದರೆ ಅವು ಏನನ್ನು ಹೇಳುತ್ತಿವೆ ಎಂಬುದನ್ನು ತಿಳಿದುಕೊಂಡಿದ್ದೇನೆ. ‘ದಿ ಕಾಶ್ಮೀರ್ ಫೈಲ್ಸ್’ ಅಂಥಹಾ ಸಿನಿಮಾಗಳು ಹಿಟ್ ಆದಾಗ ಕಸಿವಿಸಿ ಆದಂತಹಾಗುತ್ತದೆ. ಸುಧೀರ್ ಮಿಶ್ರಾ, ಹನ್ಸಲ್ ಮೆಹ್ತಾ, ಅನುಭವ್ ಸಿನ್ಹಾ ಅಂಥಹವರು ತಮ್ಮ ಕಾಲದ ಘಟನೆಗಳನ್ನು ಸಿನಿಮಾ ಮಾಡುತ್ತಿದ್ದಾರೆ ಅಂಥಹವರ ಸಿನಿಮಾಗಳು ಜನಾಧರಕ್ಕೆ ಪಾತ್ರವಾಗುತ್ತಿಲ್ಲ ಎಂಬುದನ್ನು ಕಂಡಾಗ ಬೇಸರವಾಗುತ್ತದೆ” ಎಂದಿದ್ದರು.

ವಿವೇಕ್ ಅಗ್ನಿಹೋತ್ರಿ ಅವರ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ 90ರ ದಶಕದಲ್ಲಿ ನಡೆದಿದೆ ಎನ್ನಲಾದ ಕಾಶ್ಮೀರ ಪಂಡಿತರ ಮೇಲಿನ ದೌರ್ಜನ್ಯದ ಕತೆಯನ್ನು ಒಳಗೊಂಡಿದೆ. ಸಿನಿಮಾ ದೊಡ್ಡ ಯಶಸ್ಸನ್ನು ಗಳಿಸಿತು. ಜೊತೆಗೆ ವಿರೋಧಕ್ಕೂ ಗುರಿಯಾಯಿತು. ಒಂದು ಕೋಮನ್ನು ಕೆಟ್ಟದಾಗಿ ಚಿತ್ರಿಸಲು ಈ ಸಿನಿಮಾ ಮಾಡಲಾಗಿದೆ ಎಂಬ ಆರೋಪಕ್ಕೆ ಗುರಿಯಾಯಿತು. ಈಗ ವಿವೇಕ್ ಅಗ್ನಿಯೋತ್ರಿ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನಿರ್ದೇಶನ ಮಾಡಿದ್ದು, ಇದೇ ತಿಂಗಳು 28ಕ್ಕೆ ಸಿನಿಮಾ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ