ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ (The Kashmir Files). ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಜಾದೂ ಮಾಡಿದೆ. ಯಾರೂ ಊಹಿಸದಷ್ಟು ಗಳಿಕೆ ಮಾಡುತ್ತಿದೆ ಈ ಸಿನಿಮಾ. ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯೆಯನ್ನು ಆಧರಿಸಿ ‘ದಿ ಕಾಶ್ಮೀರ್ ಫೈಲ್ಸ್’ ಸಿದ್ಧಗೊಂಡಿದೆ. ಕೆಲವರು ವಿವೇಕ್ ಅವರನ್ನು ತೆಗಳುತ್ತಿದ್ದಾರೆ. ಈ ಮಧ್ಯೆ ಅವರು ವಿವಾದಕ್ಕೆ ಸಿಲುಕಿದ್ದಾರೆ. ಭೋಪಾಲ್ (Bhopal) ನಗರದ ಬಗ್ಗೆ ಕೀಳಾಗಿ ಮಾತನಾಡಿ ಎಲ್ಲರ ಟೀಕೆಗೆ ಗುರಿಯಾಗಿದ್ದಾರೆ. ಅವರು ಕ್ಷಮೆ ಕೇಳಬೇಕು ಎಂದು ಮಧ್ಯಪ್ರದೇಶ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ಶುಕ್ರವಾರ ಭೋಪಾಲ್‌ಗೆ ಭೇಟಿ ನೀಡಿದ್ದಾರೆ ವಿವೇಕ್ ಅಗ್ನಿಹೋತ್ರಿ. ಅದಕ್ಕೂ ಮೊದಲು ವಿಡಿಯೋ ಒಂದು ವೈರಲ್ ಆಗಿದೆ. ಮೂರು ವಾರಗಳ ಹಿಂದೆ ನೀಡಿದ ಸಂದರ್ಶನದಲ್ಲಿ ಅವರು ನೀಡಿದ ಹೇಳಿಕೆ ಇದಾಗಿದ್ದು, ಈಗ ಆ ಕ್ಲಿಪ್ ವೈರಲ್ ಆಗಿದೆ ಎನ್ನಲಾಗುತ್ತಿದೆ. ಈ ಹೇಳಿಕೆಗೆ ಅನೇಕರಿಂದ ವಿರೋಧ ವ್ಯಕ್ತವಾಗುತ್ತಿದೆ.
‘ನಾನು ಭೋಪಾಲ್‌ನಲ್ಲಿ ಬೆಳೆದಿದ್ದೇನೆ. ಆದರೆ ನಾನು ಭೋಪಾಲಿ ಅಲ್ಲ. ಏಕೆಂದರೆ ಭೋಪಾಲಿ ಎಂಬ ಶಬ್ದ ಭಿನ್ನ ಅರ್ಥವನ್ನು ಹೊಂದಿದೆ. ಯಾರಾದರೂ ಬಂದು ನಾನು ಭೋಪಾಲಿ ಎಂದು ಹೇಳಿದರೆ, ಆ ವ್ಯಕ್ತಿ ಸಲಿಂಗಕಾಮಿ ಎಂದರ್ಥ. ಭೋಪಾಲ್ನಲ್ಲಿರುವ ಯಾವುದೇ ವ್ಯಕ್ತಿಯ ಬಳಿ ಬೇಕಾದರೂ ನೀವು ಇದನ್ನು ಕೇಳಬಹುದು’ ಎಂದಿದ್ದಾರೆ ವಿವೇಕ್ ಅಗ್ನಿಹೋತ್ರಿ. ಸದ್ಯ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
इस दोयम दर्जे की मान्यता के लिए मेरी ओर से..#I_M_Sorry_Bhopal
भोपाली होना होमोसेक्सुअल होना कैसे हो सकता है..?
लखनऊ,हैदराबाद,मैसूर भी तो नवाबी शहर हैं..तो क्या वहां भी..! छि:
अगर हम भी कहते फिरें कि तनु श्री दत्त आपको लेकर ऐसा बोलती है तो क्या आप मान लेंगे.!@vivekagnihotri pic.twitter.com/teh5fmixZ0
— Govind ਗੋਵਿੰਦ گووند गोविंद गुर्जर (@govindtimes) March 25, 2022
ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಇದನ್ನು ಖಂಡಿಸಿದ್ದಾರೆ. ‘ವಿವೇಕ್ ಅಗ್ನಿಹೋತ್ರಿ ಅವರೇ ಇದು ನಿಮ್ಮ ವೈಯಕ್ತಿಕ ಅನುಭವವಾಗಿರಬಹುದು. ಭೋಪಾಲ್ ನಿವಾಸಿಗಳು ಹಾಗಿಲ್ಲ. ನಾನು 1977 ರಿಂದ ಭೋಪಾಲ್ ಮತ್ತು ಭೋಪಾಲಿಗಳೊಂದಿಗೆ ಕನೆಕ್ಟ್ ಆಗಿದ್ದೇನೆ. ಆದರೆ, ನನಗೆ ಆ ರೀತಿಯ ಅನುಭವ ಆಗಿಲ್ಲ. ಈ ರೀತಿ ಅನುಭವ ಆಗಲು ನಿಮ್ಮ ಜತೆ ಯಾರಿದ್ದರು ಎಂಬುದು ಕೂಡ ಮುಖ್ಯವಾಗುತ್ತದೆ’ ಎಂದಿದ್ದಾರೆ ಅವರು.
विवेक अग्निहोत्री जी यह आपका अपना निजी अनुभव हो सकता है।
यह आम भोपाल निवासी का नहीं है।
मैं भी भोपाल और भोपालियों के संपर्क में 77 से हूँ लेकिन मेरा तो यह अनुभव कभी नहीं रहा।
आप कहीं भी रहें “संगत का असर तो होता ही है”।#KashmirFiles@vivekagnihotri https://t.co/L98WIQvgd2— digvijaya singh (@digvijaya_28) March 25, 2022
ಮಾಜಿ ಸಚಿವ ಪಿಸಿ ಶರ್ಮಾ ಕೂಡ ಈ ಹೇಳಿಕೆಯನ್ನು ಖಂಡಿಸಿದ್ದಾರೆ. ‘ಭೋಪಾಲ್ ಜನರ ಮೇಲೆ ಸಲಿಂಗಕಾಮಿ ಎಂಬ ಪದಗಳನ್ನು ಬಳಸಿ ವಿವೇಕ್ ಅಪರಾಧ ಎಸಗಿದ್ದಾರೆ’ ಎಂದು ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ: ತನ್ನದೇ ರಕ್ತ ಸುರಿಸಿ ‘ದಿ ಕಾಶ್ಮೀರ್ ಫೈಲ್ಸ್’ ಪೋಸ್ಟರ್ ರಚಿಸಿದ ಮಹಿಳೆ; ‘ಇಂಥದ್ದೆಲ್ಲ ಮಾಡ್ಬೇಡಿ’ ಎಂದ ನಿರ್ದೇಶಕ
‘ದಿ ಕಾಶ್ಮೀರ್ ಫೈಲ್ಸ್’ ಹೆಸರು ಹೇಳದೇ ಒಂದೇ ಒಂದು ಟ್ವೀಟ್ ಮಾಡಿ ಟ್ರೋಲ್ ಆದ ನಟ ಆದಿಲ್ ಹುಸೇನ್