ಬಾಲಿವುಡ್ನ (Bollywood) ಆರಕ್ಕೇರದ, ಮೂರಕ್ಕಿಳಿಯದ ಕೆಲವು ನಟರಲ್ಲಿ ವಿವೇಕ್ ಒಬೆರಾಯ್ ಸಹ ಒಬ್ಬರು. ಬಾಲಿವುಡ್ಗೆ ಪದಾರ್ಪಣೆ ಮಾಡಿದಾಗ ವಿವೇಕ್ ಒಬೆರಾಯ್ (Vivek oberoi) ಅವರನ್ನು ಮುಂದಿನ ಶಾರುಖ್ ಖಾನ್ ಎನ್ನಲಾಗಿತ್ತು. ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು, ನಿರ್ದೇಶಕರು, ನಟಿಯರು ವಿವೇಕ್ ಜೊತೆ ಕೆಲಸ ಮಾಡಲು ಸಾಲುಗಟ್ಟಿದ್ದರು. ಮಾತ್ರವಲ್ಲ ಐಶ್ವರ್ಯ ರೈ ಅಂಥಹಾ ವಿಶ್ವಸುಂದರಿ ವಿವೇಕ್ರ ಪ್ರೇಯಸಿಯಾಗಿದ್ದರು. ಇನ್ನೇನು ಇಬ್ಬರೂ ಮದುವೆ ಆಗಿಬಿಟ್ಟರು ಎಂದುಕೊಳ್ಳುವಾಗ ಐಶ್ವರ್ಯಾ, ವಿವೇಕ್ ಜೊತೆ ಬ್ರೇಕ್ಅಪ್ ಮಾಡಿಕೊಂಡು ಅಭಿಷೇಕ್ ಬಚ್ಚನ್ ಕೈಹಿಡಿದು ಬಚ್ಚನ್ ಮನೆಯ ಸೊಸೆಯಾದರು.
ಈಗಲೂ ಇದೇ ಕಾರಣಕ್ಕೆ ವಿವೇಕ್ರನ್ನು ಟ್ರೋಲ್ ಸಹ ಮಾಡಲಾಗುತ್ತದೆ. ಅದೇನೇ ಇರಲಿ ಈಗ ವಿವೇಕ್ಗೆ ಮೋಸವಾಗಿದೆ. ಈ ಬಾರಿ ಹಣಕಾಸಿನ ವಿಷಯದಲ್ಲಿ ವಿವೇಕ್ ಮೋಸ ಹೋಗಿದ್ದಾರೆ. ಈ ಬಾರಿಯೂ ತಾವು ನಂಬಿದವರಿಂದಲೇ ವಿವೇಕ್ ಮೋಸ ಅನುಭವಿಸಿದ್ದಾರೆ. ಮುಂಬೈ ಪೊಲೀಸರಿಗೆ ಈ ಬಗ್ಗೆ ದೂರು ನೀಡಿರುವ ವಿವೇಕ್ ಒಬೆರಾಯ್, ತಮ್ಮ ಬ್ಯುಸಿನೆಸ್ ಪಾರ್ಟರ್ಗಳಿಂದಲೇ ತಮಗೆ 1.50 ಕೋಟಿ ರೂಪಾಯಿ ಮೋಸವಾಗಿದೆ ಎಂದು ಆರೋಪಿಸಿದ್ದಾರೆ.
ವಿವೇಕ್ ದೂರಿನಂತೆ, ಮೂವರು ವ್ಯಕ್ತಿಗಳು ವಿವೇಕ್ರನ್ನು ಒಪ್ಪಿಸಿ ಒಂದು ಇವೆಂಟ್ ಹಾಗೂ ಸಿನಿಮಾ ನಿರ್ಮಾಣ ಸಂಸ್ಥೆಯಲ್ಲಿ ಹೂಡಿಕೆ ಮಾಡುವಂತೆ ಒಪ್ಪಿಸಿದ್ದರಂತೆ. ಒಳ್ಳೆಯ ಲಾಭ ಸಹ ನೀಡುವುದಾಗಿ ಹೇಳಿದ್ದರಂತೆ. ಅಂತೆಯೇ ವಿವೇಕ್ ಒಬೆರಾಯ್ 1.50 ಕೋಟಿ ಹಣವನ್ನು ವಿವೇಕ್ ಬಂಡವಾಳ ಹೂಡಿದ್ದಾರೆ. ಆದರೆ ಇವೆಂಟ್ನಿಂದ ಹಾಗೂ ಸಿನಿಮಾ ನಿರ್ಮಾಣದಿಂದ ಬಂದ ಮೊತ್ತವನ್ನು ತಾವೇ ಬಳಸಿಕೊಂಡಿದ್ದು ನನಗೆ ಹಣ ನೀಡಿಲ್ಲ ಎಂದು ವಿವೇಕ್ ಒಬೆರಾಯ್ ಆರೋಪ ಮಾಡಿದ್ದಾರೆ. ವಿವೇಕ್ ಪರವಾಗಿ ಅವರ ಚಾರ್ಟೆಡ್ ಅಕೌಂಟೆಟ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಆದಿತ್ಯ ಆಳ್ವಾ ಬಗ್ಗೆ ನಾವೇನೂ ಹೇಳುವುದಿಲ್ಲ: ವಿವೇಕ್ ಒಬೆರಾಯ್, ಪ್ರಿಯಾಂಕಾ ಅಡ್ಡಗಾಲು
ವಿವೇಕ್ರ ಚಾರ್ಟೆಡ್ ಅಕೌಂಟೆಟ್ ಮಾಧ್ಯಮಗಳಿಗೆ ನೀಡಿರುವ ಮಾಹಿತಿಯಂತೆ, ವಿವೇಕ್ ಒಬೆರಾಯ್ ಹಾಗೂ ಅವರ ಪತ್ನಿ ಪ್ರಿಯಾಂಕಾ ಆಳ್ವಾ (ಬೆಂಗಳೂರಿನವರು) 2017ರಲ್ಲಿ ಕಂಪೆನಿಯೊಂದನ್ನು ಪ್ರಾರಂಭಿಸಿದ್ದರು. ಆದರೆ ಆ ಕಂಪೆನಿ ಅಷ್ಟೋಂದು ಲಾಭದಾಯಕವಾಗಿರಲಿಲ್ಲ. ಹಾಗಾಗಿ ಆ ಕಂಪೆನಿಗೆ ಕೆಲವು ಪಾರ್ಟನರ್ಗಳನ್ನು ಸೇರಿಸಿಕೊಳ್ಳಲು ನಿರ್ಧರಿಸಿ ಒಬ್ಬ ಸಿನಿಮಾ ನಿರ್ಮಾಪಕ ಸೇರಿದಂತೆ ಇನ್ನೊಬ್ಬರನ್ನು ಸೇರಿಸಿಕೊಂಡರು. ಬಳಿಕ ಆ ಸಂಸ್ಥೆಯನ್ನು ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯನ್ನಾಗಿ ಬದಲಾಯಿಸಿದರು.
ಆ ಬಳಿಕ ವಿವೇಕ್ರ ಪಾರ್ಟನರ್ಗಳು ಇವೆಂಟ್ ಒಂದರಲ್ಲಿ ಹಾಗೂ ಸಿನಿಮಾ ನಿರ್ಮಾಣ ಸಂಸ್ಥೆಯೊಂದರಲ್ಲಿ ಹಣ ತೊಡಗಿಸುವಂತೆ ಹೇಳಿದರು ಅಂತೆಯೇ ವಿವೇಕ್ 1.55 ಕೋಟಿ ಹಣವನ್ನು ತೊಡಗಿಸಿದರು. ಆದರೆ ಪಾರ್ಟನರ್ಗಳು ವಿವೇಕ್ ಹೂಡಿಕೆ ಮಾಡಿದ್ದ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಇದು ಸಿಎ ಗಮನಕ್ಕೆ ಬಂದು ಅವರು ವಿವೇಕ್ರನ್ನು ಎಚ್ಚರಿಸಿದ ಬಳಿಕ ಈಗ ಸಿಎ, ವಿವೇಕ್ ಪರವಾಗಿ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ.
ವಿವೇಕ್ ಒಬೆರಾಯ್ ಬಾಲಿವುಡ್ ಮಾತ್ರವೇ ಅಲ್ಲದೆ ದಕ್ಷಿಣ ಭಾರತದ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಶಿವರಾಜ್ ಕುಮಾರ್ ಜೊತೆಗೆ ಕನ್ನಡದ ‘ರುಸ್ತುಂ’ ಸಿನಿಮಾದಲ್ಲಿ ವಿವೇಕ್ ಒಬೆರಾಯ್ ನಟಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿಯೂ ವಿವೇಕ್ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ