
‘ವಾರ್ 2’ ಸಿನಿಮಾದಲ್ಲಿ (War 2 Collection) ಹೃತಿಕ್ ರೋಷನ್, ಜೂನಿಯರ್ ಎನ್ಟಿಆರ್ ಹಾಗೂ ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅಲ್ಲಾಗಿದ್ದೇ ಬೇರೆ. ಚಿತ್ರ ಎಲ್ಲ ಕಡೆಗಳಿಂದ ಹೀನಾಯ ವಿಮರ್ಶೆ ಪಡೆದಿದೆ. ಆದಾಗ್ಯೂ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರದ ಗಳಿಕೆ ಮಾಡುತ್ತಿದೆ. ಇದಕ್ಕೆ ಕಾರಣ ಚಿತ್ರದ ಹೈಪ್ ಹಾಗೂ ಸಿನಿಮಾದಲ್ಲಿರೋ ತಾರಾಗಣ.
ಹೃತಿಕ್ ರೋಷನ್ ಅವರು ‘ವಾರ್’ ಚಿತ್ರದಲ್ಲಿ ನಟಿಸಿದ್ದರು. ಅದರ ಮುಂದುವರಿದ ಭಾಗ ಆಗಿ ‘ವಾರ್ 2’ ಸಿನಿಮಾ ಮೂಡಿ ಬಂದಿದೆ. ಈ ಚಿತ್ರಕ್ಕೆ ದಕ್ಷಿಣದ ಖ್ಯಾತ ಹೀರೋ ಜೂನಿಯರ್ ಎನ್ಟಿಆರ್ ನಟಿಸಿದ್ದಾರೆ. ಇದರಿಂದ ಸಿನಿಮಾಗೆ ಮೈಲೇಜ್ ಸಿಗಬಹುದು ಎಂದು ಊಹಿಸಲಾಗಿತ್ತು. ಆದರೆ, ಚಿತ್ರದಲ್ಲಿ ಕಥೆಯೇ ಇಲ್ಲ. ಇದು ತಂಡದ ಹಿನ್ನಡೆಗೆ ಕಾರಣ ಆಗಿದೆ.
#OneWordReview…#War2: DISAPPOINTING.
Rating: ⭐½
Weakest film in #YRFSpyUniverse… Has star power, scale, style, stunts – but lacks soul… Writing is the biggest culprit here… Not even #HrithikRoshan and #NTR can save this royal mess! #War2Review pic.twitter.com/4cgJEq0Ljp— taran adarsh (@taran_adarsh) August 14, 2025
ಈ ಚಿತ್ರ ಮೊದಲ ದಿನ ಬರೋಬ್ಬರಿ 52 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಒಳ್ಳೆಯ ಓಪನಿಂಗ್. ಆದರೆ, ಇದು ಹಿಂದಿ ಹಾಗೂ ತೆಲುಗು ಭಾಷೆಯಿಂದ ಆದ ಗಳಿಕೆ. ಈ ಸಿನಿಮಾಗೆ ಹಿಂದಿಯಲ್ಲಿ 29 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಬಾಲಿವುಡ್ ದೃಷ್ಟಿಯಿಂದ ಇದು ಕಡಿಮೆಯೇ. ಆದರೆ, ತೆಲುಗು ಮಂದಿ ಚಿತ್ರದ ಕೈ ಹಿಡಿದ್ದಾರೆ. ತೆಲುಗಿನಿಂದ ಈ ಚಿತ್ರಕ್ಕೆ 23 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಜೂನಿಯರ್ ಎನ್ಟಿಆರ್ ಸಿನಿಮಾದಲ್ಲಿರೋದು ಸಹಕಾರಿ ಆಗಿದೆ.
ಇದನ್ನೂ ಓದಿ: ರಜನಿಕಾಂತ್ ಅಬ್ಬರಕ್ಕೆ ಬಾಕ್ಸ್ ಆಫೀಸ್ ಉಡೀಸ್; ‘ಕೂಲಿ’ ಮೊದಲ ದಿನದ ಗಳಿಕೆ ಎಷ್ಟು?
‘ವಾರ್ 2’ ಸಿನಿಮಾ ವಿಮರ್ಶೆಯಲ್ಲಿ ಸೋತಿದೆ. ಚಿತ್ರದಲ್ಲಿ ಗಟ್ಟಿ ಕಥೆ ಇಲ್ಲ ಕೇವಲ ಆ್ಯಕ್ಷನ್ ಅಬ್ಬರ ಎಂದು ಅನೇಕರು ಹೇಳಿದ್ದಾರೆ. ಎರಡು ಸ್ಟಾರ್ ಹೀರೋಗಳು ಇದ್ದ ಹೊರತಾಗಿಯೂ ಸಿನಿಮಾ ವಿಮರ್ಶೆಯಲ್ಲಿ ಸೋತಿದೆ. ನಿರ್ದೇಶಕ ಅಯಾನ್ ಮುಖರ್ಜಿ ಅವರು ನಿರ್ದೇಶನದಲ್ಲಿ ಸೋತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.