
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್, ನಟ ಆಮಿರ್ ಖಾನ್ (Aamir Khan) ತಮ್ಮ ಖಾಸಗಿ ಜೀವನದ ಬಗ್ಗೆ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ತಮ್ಮ 60ನೇ ಹುಟ್ಟುಹಬ್ಬದಂದು, ಅವರು ತಮ್ಮ ಗೆಳತಿ ಗೌರಿ ಸ್ಪ್ರಾಟ್ ಮೇಲಿನ ಪ್ರೀತಿಯನ್ನು ಸಾರ್ವಜನಿಕವಾಗಿ ಒಪ್ಪಿಕೊಂಡರು ಮತ್ತು ಅವರನ್ನು ಮುನ್ನೆಲೆಗೆ ತಂದರು. ಅದಾದ ನಂತರ, ಇಬ್ಬರೂ ವಿವಿಧ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಈಗ, ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ಸಂಬಂಧ ಮತ್ತು ಮದುವೆಯ ಬಗ್ಗೆ ಮಾತನಾಡಿದ್ದಾರೆ.
ಆಮಿರ್ ಮತ್ತು ಅವರ ಗೆಳತಿ ಗೌರಿ ಸ್ಪ್ರಾಟ್ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದಾರೆ. ಎರಡೂ ಕುಟುಂಬಗಳಿಗೂ ಇದು ತಿಳಿದಿದೆ. ಇಬ್ಬರೂ ಕಳೆದ 25 ವರ್ಷಗಳಿಂದ ಪರಸ್ಪರ ಪರಿಚಿತರು ಮತ್ತು ಕಳೆದ ಎರಡೂವರೆ ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಗೌರಿ ಬೆಂಗಳೂರಿನವರು ಮತ್ತು ಅಲ್ಲಿ ತಮ್ಮದೇ ಆದ ಸಲೂನ್ ಹೊಂದಿದ್ದಾರೆ.
‘ಬಾಲಿವುಡ್ ಹಂಗಾಮಾ’ಕ್ಕೆ ನೀಡಿದ ಸಂದರ್ಶನದಲ್ಲಿ ಆಮಿರ್ ಖಾನ್ , ‘ಗೌರಿ ಮತ್ತು ನಾನು ಈ ಸಂಬಂಧದ ಬಗ್ಗೆ ತುಂಬಾ ಗಂಭೀರವಾಗಿದ್ದೇವೆ. ನಾವು ಪರಸ್ಪರ ಬದ್ಧರಾಗಿದ್ದೇವೆ. ಒಳ್ಳೆಯ ಮತ್ತು ಕೆಟ್ಟ ಸಮಯಗಳಲ್ಲಿ ನಾವು ಪರಸ್ಪರ ಒಟ್ಟಿಗೆ ಇದ್ದೇವೆ’ ಎಂದಿದ್ದಾರೆ ಆಮಿರ್.
‘ನಾನು ಗೌರಿಯನ್ನು ನನ್ನ ಹೃದಯದಲ್ಲಿ ಮದುವೆಯಾಗಿದ್ದೇನೆ. ನಾವು ಕಾನೂನುಬದ್ಧವಾಗಿ ಮದುವೆಯಾಗುತ್ತೇವೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಇದು ಸತ್ಯ. ಭವಿಷ್ಯದಲ್ಲಿ ನಾನು ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದಿದ್ದಾರೆ ಆಮಿರ್. ಅವರು ಮತ್ತು ಗೌರಿ ತಮ್ಮ ಸಂಬಂಧದ ಬಗ್ಗೆ ತುಂಬಾ ಗಂಭೀರವಾಗಿದ್ದಾರೆ ಮತ್ತು ಮದುವೆಯ ಬಗ್ಗೆಯೂ ಯೋಚಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.
‘ನಾವು ಅನಿರೀಕ್ಷಿತವಾಗಿ ಭೇಟಿಯಾದೆವು. ಅದರ ನಂತರ, ನಾವು ಪರಸ್ಪರ ಸಂಪರ್ಕದಲ್ಲಿದ್ದೆವು ಮತ್ತು ಈಗ ಅದಾಗಿಯೇ ಎಲ್ಲವೂ ನಡೆಯತ್ತಿದೆ’ ಎಂದಿದ್ದಾರೆ ಆಮಿರ್. ಗೌರಿಗೆ ಈಗ ಆರು ವರ್ಷದ ಮಗನೂ ಇದ್ದಾನೆ.
ಇದನ್ನೂ ಓದಿ: ಸಾಯಿ ಪಲ್ಲವಿ ಮೊದಲ ಹಿಂದಿ ಸಿನಿಮಾಕ್ಕೆ ಆಮಿರ್ ಖಾನ್ ಅಡ್ಡಗಾಲು?
ಆಮಿರ್ ಮೊದಲು ರೀನಾ ದತ್ತಾ ಅವರನ್ನು 1986 ರಲ್ಲಿ ವಿವಾಹವಾದರು. ಈ ದಂಪತಿಗೆ ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ. ರೀನಾ ಮತ್ತು ಆಮಿರ್ 2002 ರಲ್ಲಿ ವಿಚ್ಛೇದನ ಪಡೆದರು. ನಂತರ ಅವರು 2005 ರಲ್ಲಿ ಕಿರಣ್ ರಾವ್ ಅವರನ್ನು ವಿವಾಹವಾದರು. ಕಿರಣ್ ಮತ್ತು ಆಮಿರ್ ಎಂಬ ಮಗ ಆಜಾದ್ ಇದ್ದಾರೆ. 2021ರಲ್ಲಿ, ದಂಪತಿಗಳು ತಮ್ಮ ವಿಚ್ಛೇದನ ಘೋಷಿಸಿದರು. ವಿಚ್ಛೇದನದ ನಂತರವೂ, ಆಮಿರ್ ತಮ್ಮ ಮಾಜಿ ಪತ್ನಿಯರೊಂದಿಗೆ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ. ಆಮಿರ್ ರೀನಾ ಮತ್ತು ಕಿರಣ್ ಇಬ್ಬರೊಂದಿಗೂ ಸ್ನೇಹ ಸಂಬಂಧವನ್ನು ಉಳಿಸಿಕೊಂಡಿದ್ದಾರೆ.
ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿರುವ ಮಾಹಿತಿಯ ಪ್ರಕಾರ, ಗೌರಿ ಬ್ಲೂ ಮೌಂಟೇನ್ ಶಾಲೆಯಲ್ಲಿ ಅಧ್ಯಯನ ಮಾಡಿದರು. ನಂತರ, ಅವರು ಲಂಡನ್‌ನಲ್ಲಿ FDA ಸ್ಟೈಲಿಂಗ್ ಮತ್ತು ಛಾಯಾಗ್ರಹಣ ಫ್ಯಾಷನ್‌ನಲ್ಲಿ ಕೋರ್ಸ್ ಮಾಡಿದರು. ಅವರು ಮುಂಬೈನಲ್ಲಿ ‘ಬಿ ಬ್ಲಂಟ್’ ಎಂಬ ಸಲೂನ್ ಅನ್ನು ಸಹ ಹೊಂದಿದ್ದಾರೆ. ಗೌರಿಗೆ ಆರು ವರ್ಷದ ಮಗನೂ ಇದ್ದಾನೆ. ಆಮಿರ್ ಮತ್ತು ಗೌರಿ ನಡುವೆ ದೊಡ್ಡ ವಯಸ್ಸಿನ ಅಂತರವಿದೆ. ಆಮಿರ್ 60 ವರ್ಷ ಮತ್ತು ಗೌರಿ ಪ್ರಸ್ತುತ 46 ವರ್ಷ. ಅಂದರೆ, ಇಬ್ಬರ ನಡುವೆ ಸುಮಾರು 14 ವರ್ಷಗಳ ಅಂತರ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.