AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಳಿದ್ದೇ ಒಂದು, ಅಲ್ಲಿ ಮಾಡಿದ ಕಥೆಯೇ ಇನ್ನೊಂದು; ಫ್ಲಾಪ್ ಚಿತ್ರದ ಬಗ್ಗೆ ರಶ್ಮಿಕಾ ಮಾತು

ನಟಿ ರಶ್ಮಿಕಾ ಮಂದಣ್ಣ ಫ್ಲಾಪ್ ಆದ 'ಸಿಕಂದರ್' ಚಿತ್ರದ ಬಗ್ಗೆ ಮೌನ ಮುರಿದಿದ್ದಾರೆ. ನಿರ್ದೇಶಕ ಎಆರ್ ಮುರುಗದಾಸ್ ಹೇಳಿದ ಕಥೆಗೂ, ತೆರೆಗೆ ಬಂದ ಚಿತ್ರಕ್ಕೂ ಸಂಪೂರ್ಣ ವ್ಯತ್ಯಾಸವಿತ್ತು ಎಂದು ರಶ್ಮಿಕಾ ಹೇಳಿದ್ದಾರೆ. ಸಲ್ಮಾನ್ ಖಾನ್ ಸೆಟ್‌ಗೆ ತಡವಾಗಿ ಬರುತ್ತಿದ್ದರು ಎಂಬ ಆರೋಪ, ಚಿತ್ರದ ಕಳಪೆ ಪ್ರದರ್ಶನಕ್ಕೆ ಕಾರಣಗಳಾದವು. ರಶ್ಮಿಕಾ ಮತ್ತು ಸಲ್ಮಾನ್ ನಡುವೆ ಕೆಮಿಸ್ಟ್ರಿ ಇರಲಿಲ್ಲ ಎಂಬುದು ಕೂಡ ಚರ್ಚೆಯಾಗಿದೆ.

ಹೇಳಿದ್ದೇ ಒಂದು, ಅಲ್ಲಿ ಮಾಡಿದ ಕಥೆಯೇ ಇನ್ನೊಂದು; ಫ್ಲಾಪ್ ಚಿತ್ರದ ಬಗ್ಗೆ ರಶ್ಮಿಕಾ ಮಾತು
ರಶ್ಮಿಕಾ
ರಾಜೇಶ್ ದುಗ್ಗುಮನೆ
|

Updated on: Jan 21, 2026 | 12:00 PM

Share

ಯಾವುದೇ ಸಿನಿಮಾ ಹಿಟ್ ಆದರೆ ಅದರ ಹುಳುಕುಗಳು ಏನಿವೆ ಎಂಬುದು ಚರ್ಚೆಗೆ ಬರೋದೇ ಇಲ್ಲ. ಎಲ್ಲಾ ಕಲಾವಿದರು ಪ್ರೀತಿಯಿಂದ ಮಾತನಾಡುತ್ತಾರೆ. ಒಬ್ಬರನ್ನೊಬ್ಬರು ಹೊಗಳುತ್ತಾರೆ. ನಿರ್ದೇಶಕರ ಶ್ರಮವನ್ನು ಮೆಚ್ಚುತ್ತಾರೆ. ಅದೇ ಸಿನಿಮಾ ಫ್ಲಾಪ್ ಆಯಿತು ಎಂದುಕೊಳ್ಳಿ, ಆಗ ಶುರುವಾಗುತ್ತೆ ನೋಡಿ ಕಿತ್ತಾಟ. ‘ಸಿಕಂದರ್’ ಸಿನಿಮಾ ವಿಷಯದಲ್ಲಿ ಹೀಗೇ ಆಯಿತು. ಸಲ್ಮಾನ್ ಸೆಟ್​​ಗೆ ತಡವಾಗಿ ಬರುತ್ತಾರೆ ಎಂದು ನಿರ್ದೇಶಕ ಎಆರ್ ಮುರುಗದಾಸ್ ಆರೋಪಿಸಿದ್ದರು. ಇದಕ್ಕೆ ಸಲ್ಲು ಕೌಂಟರ್ ಕೂಡ ಕೊಟ್ಟಿದ್ದರು. ಈಗ ಈ ಫ್ಲಾಪ್ ಚಿತ್ರದ ಮತ್ತೊಂದು ಹುಳುಕನ್ನು ರಶ್ಮಿಕಾ ಮಂದಣ್ಣ (Rashmika Mandanna) ಬಿಚ್ಚಿಟ್ಟಿದ್ದಾರೆ.

‘ಎಆರ್ ಮುರುಗದಾಸ್ ಅವರು ಸ್ಕ್ರಿಪ್ಟ್ ಹೇಳುವಾಗ ಆ ಕಥೆ ಬೇರೆ ರೀತಿಯೇ ಇತ್ತು. ಅದು ಸಿನಿಮಾ ಆದಾಗ ಕಥೆ ಸಂಪೂರ್ಣವಾಗಿ ಬದಲಾಯಿತು. ಸಿನಿಮಾಗಳಲ್ಲಿ ಅದು ಸಾಮಾನ್ಯ. ಸಿನಿಮಾ ಸಾಗಿದಂತೆ ಕಥೆ ಬದಲಾಗುತ್ತದೆ. ಸಿಕಂದರ್ ಚಿತ್ರದಲ್ಲೂ ಹಾಗೆಯೇ ಆಯಿತು’ ಎಂದು ರಶ್ಮಿಕಾ ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ಸಲ್ಮಾನ್ ಖಾನ್ ಮಧ್ಯೆ ಯಾವುದೇ ಕೆಮಿಸ್ಟ್ರಿ ಇರಲಿಲ್ಲ ಎಂದು ಫ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ. ಒಂದೊಮ್ಮೆ ಕಥೆ ಚೆನ್ನಾಗಿ ಇದ್ದರೂ ಇವರ ಪರ್ಫಾರ್ಮೆನ್ಸ್ ಕಾರಣದಿಂದ ಸಿನಿಮಾ ಹಿಟ್ ಆಗುತ್ತಿರಲಿಲ್ಲ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.

ರಶ್ಮಿಕಾ ಮಂದಣ್ಣ ನಟನೆ ಮೊದಲಿಗಿಂತ ಸಾಕಷ್ಟು ಏಳ್ಗೆ ಕಂಡಿದೆ. ಆದರೆ, ಮರಸುತ್ತುವ ಪಾತ್ರಗಳು ಮಾತ್ರ ಅವರಿಗೆ ಹೊಂದಿಕೆ ಆಗುತ್ತವೆ ಎಂಬ ಅಭಿಪ್ರಾಯವೂ ಇದೆ. ‘ಸಿಕಂದರ್’ ಸಿನಿಮಾದ ಬಜೆಟ್​ ದೊಡ್ಟ ಮಟ್ಟದಲ್ಲಿದೆ. ಆದರೆ. ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 200 ಕೋಟಿ ರೂಪಾಯಿ ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ನಿರ್ಮಾಪಕರಿಗೆ ನಷ್ಟವಾಗಿರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಮದುವೆಗೂ ಮುನ್ನ ವಿದೇಶದಲ್ಲಿ ಕಾಲ ಕಳೆದು ಬಂದ ರಶ್ಮಿಕಾ, ವಿಜಯ್ ದೇವರಕೊಂಡ

ರಶ್ಮಿಕಾ ಮಂದಣ್ಣ ಅವರು ಸದ್ಯ ಮದುವೆ ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ.ವಿಜಯ್ ದೇವರಕೊಂಡ ಜೊತೆ ಅವರ ಮದುವೆ ನಡೆಯುತ್ತಿದೆ. ಫೆಬ್ರವರಿ 26ರಂದು ರಶ್ಮಿಕಾ ಅವರು ರಾಜಸ್ಥಾನದಲ್ಲಿ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಾ ಇದೆ. ಈ ವಿಷಯವನ್ನು ಅವರಿನ್ನೂ ಖಚಿತಪಡಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.