ಈ ವರ್ಷ ಸಿನಿಪ್ರಿಯರ ಬಹುನಿರೀಕ್ಷಿತ ಸಿನಿಮಾಗಳು ಯಾವವು? ಯಾವ ಸಿನಿಮಾಗೆ ಮೊದಲ ಸ್ಥಾನ?

| Updated By: ಮಂಜುನಾಥ ಸಿ.

Updated on: Aug 31, 2024 | 11:01 PM

2024 Movie: ಈ ವರ್ಷ ಈವರೆಗೆ ಹಲವು ಉತ್ತಮ ಸಿನಿಮಾಗಳು ಬಂದಿವೆ. ಕೆಲ ಸಿನಿಮಾಗಳು ದೊಡ್ಡ ಯಶಸ್ಸು ಗಳಿಸಿದರೆ, ಕೆಲವು ಬ್ಲಾಕ್ ಬಸ್ಟರ್ ಆಗಿವೆ. ಅಂದಹಾಗೆ ಈ ವರ್ಷದ ಬಹುನಿರೀಕ್ಷಿತ ಹಿಂದಿ ಸಿನಿಮಾ ಯಾವುದು?

ಈ ವರ್ಷ ಸಿನಿಪ್ರಿಯರ ಬಹುನಿರೀಕ್ಷಿತ ಸಿನಿಮಾಗಳು ಯಾವವು? ಯಾವ ಸಿನಿಮಾಗೆ ಮೊದಲ ಸ್ಥಾನ?
Follow us on

ಪ್ರತಿ ವರ್ಷ ಭಾರತಾದ್ಯಂತ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಿಂದಿಗಳ ಜೊತೆಗೆ ಪಂಜಾಬಿ, ಮರಾಠಿ, ತುಳು ಸೇರಿ ಇನ್ನೂ ಹಲವು ಭಾಷೆಗಳಲ್ಲಿ ಸಿನಿಮಾಗಳು ಬಿಡುಗಡೆ ಕಾಣುತ್ತವೆ. ಬುಕ್ ಮೈ ಶೋ ರೇಟಿಂಗ್ ಆಧಾರಾದ ಮೇಲೆ ಯಾವ ಸಿನಿಮಾ ಬಗ್ಗೆ ಜನರಿಗೆ ಹೆಚ್ಚು ಆಸಕ್ತಿ ಇದೆ ಎಂಬುದನ್ನು ತಿಳಿದುಕೊಳ್ಳಬಹುದು. ಈ ವರ್ಷದ ಟಾಪ್ 10 ಹಿಂದಿ ಸಿನಿಮಾಗಳ ಬಗ್ಗೆ ಇಲ್ಲಿದೆ ವಿವರ.

‘ಬುಕ್ ಮೈ ಶೋ’ನದಲ್ಲಿ ಜನರು ತೋರಿಸಿರೋ ‘ಇಂಟರೆಸ್ಟ್’ (ಆಸಕ್ತಿ) ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ. ಮೊದಲ ಸ್ಥಾನದಲ್ಲಿ ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾ ಇದೆ. 38 ಸಾವಿರ ಮಂದಿ ಇದಕ್ಕೆ ಆಸಕ್ತಿ ತೋರಿಸಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 6ರಂದು ರಿಲೀಸ್ ಆಗಬೇಕಿದೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯವರು ತಕರಾರು ತೆಗೆದಿದ್ದಾರೆ. ಇದು ಸಿನಿಮಾಗೆ ತೊಂದರೆ ಮಾಡಬಹುದು.

ಇದನ್ನೂ ಓದಿ:ಬಾಲಿವುಡ್, ಸೌಥ್ ಬಳಿಕ ಹಾಲಿವುಡ್​ಗೆ ಹಾರಲಿದ್ದಾರೆ ಜಾನ್ಹವಿ ಕಪೂರ್

‘ಸಿಂಗಂ ಅಗೇನ್’ ಚಿತ್ರಕ್ಕೆ 28 ಸಾವಿರ ಜನರು ಆಸಕ್ತಿ ತೋರಿಸಿದ್ದಾರೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಅಜಯ್ ದೇವಗನ್, ಟೈಗರ್ ಶ್ರಾಫ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಕೂಡ ಸಾಕಷ್ಟು ಹೈಪ್ ಪಡೆದಿದೆ. ರೋಹಿತ್ ಶೆಟ್ಟಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ‘ಭೂಲ್ ಭುಲಯ್ಯ 3’ ಸಿನಿಮಾ ರಿಲೀಸ್ ಆಗುತ್ತಿದೆ. ಕಾರ್ತಿಕ್ ಆರ್ಯನ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ 22.8 ಸಾವಿರ ಜನರು ಕಾದಿದ್ದಾರೆ.

ನಾಲ್ಕನೇ ಸ್ಥಾನದಲ್ಲಿ ‘ಬದಾಸ್ ರವಿಕುಮಾರ್’ ಚಿತ್ರ ಇದೆ. ಈ ಚಿತ್ರಕ್ಕೆ 19.1 ಸಾವಿರ ಜನರು ಆಸಕ್ತಿ ತೋರಿಸಿದ್ದಾರೆ. ‘ವೆಲ್ಕಮ್ 3’ ಚಿತ್ರಕ್ಕೆ 17.5 ಸಾವಿರ ಜನರು ಕಾದು ಕುಳಿತಿದ್ದಾರೆ. ‘ಬೇಬಿ ಜಾನ್’ ಚಿತ್ರಕ್ಕೆ 11.7 ಸಾವಿರ ಜನರು ಕಾದಿದ್ದಾರೆ. ಈ ಸಿನಿಮಾ ‘ತೇರಿ’ ಚಿತ್ರದ ರಿಮೇಕ್. ಏಳನೇ ಸ್ಥಾನದಲ್ಲಿ ‘ಕಹಾ ಶುರು ಕಹಾ ಕಥಮ್’ ಸಿನಿಮಾ ಇದೆ. ಇದಕ್ಕಾಗಿ 10.1 ಜನರು ಕಾದಿದ್ದಾರೆ. ಆ ಬಳಿಕ ‘ರೈಡ್ 2’ (7.4 ಸಾವಿರ), ‘ದಿ ಸಬ್ರಮತಿ ರಿಪೋರ್ಟ್ಸ್’ (5.7 ಸಾವಿರ), ‘ಸ್ಕೈ ಫೋರ್ಸ್’ (5.3 ಸಾವಿರ) ಜನರು ಆಸಕ್ತಿ ತೋರಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:00 pm, Sat, 31 August 24