ಚಿತ್ರರಂಗದಲ್ಲಿ ಸಂಭಾವನೆ ವಿಚಾರದಲ್ಲೇಕೆ ಇಷ್ಟೊಂದು ತಾರತಮ್ಯ? ಆಮಿರ್ ಖಾನ್ ನೀಡಿದ್ದರು ಸ್ಪಷ್ಟನೆ
ಆಮಿರ್ ಖಾನ್ ಅವರು ಸಂದರ್ಶನ ಒಂದಕ್ಕೆ ತೆರಳಿದ್ದರು. ಇದರಲ್ಲಿ ಆಮಿರ್ ಖಾನ್ಗೆ ನೇರ ಪ್ರಶ್ನೆ ಒಂದು ಎದುರಾಗಿತ್ತು. ‘ಬಾಲಿವುಡ್ ನಟರಿಗೆ ನೀಡಿದಷ್ಟು ಸಂಭಾವನೆ ನಟಿಯರಿಗೆ ಏಕೆ ಕೊಡುವುದಿಲ್ಲ’ ಎಂದು ಕೇಳಲಾಯಿತು. ಇದಕ್ಕೆ ಆಮಿರ್ ಖಾನ್ ಅವರು ಸ್ಪಷ್ಟ ಉತ್ತರ ನೀಡಿದರು.
ಹೀರೋ ಹಾಗೂ ಹೀರೋಯಿನ್ಗಳ ಮಧ್ಯೆ ಸಂಭಾವನೆ ವಿಚಾರಕ್ಕೆ ತಾರತಮ್ಯ ಇದೆ ಎಂಬ ವಿಚಾರದ ಬಗ್ಗೆ ಮೊದಲಿನಿಂದಲೂ ಚರ್ಚೆ ನಡೆಯುತ್ತಲೇ ಇದೆ. ಹೀರೋಗಳಿಗೆ ಕೊಟ್ಟಷ್ಟು ಸಂಭಾವನೆ ಹೀರೋಯಿನ್ಗೆ ಕೊಡುವುದಿಲ್ಲ ಎನ್ನುವ ಮಾತು ಮೊದಲಿನಿಂದಲೂ ಇದೆ. ಇದು ಸತ್ಯ ಕೂಡ ಹೌದು. ಆದರೆ, ಹೀಗೇಕೆ ಎನ್ನುವ ಪ್ರಶ್ನೆಗೆ ಆಮಿರ್ ಖಾನ್ ಅವರು ಈ ಮೊದಲು ಉತ್ತರ ನೀಡಿದ್ದರು. ಅವರ ಮಾತನ್ನು ಅನೇಕರು ಒಪ್ಪಿದ್ದರು. ಈಗ ಆ ವಿಡಿಯೋ ಮತ್ತೆ ವೈರಲ್ ಆಗಿದೆ. ಸ
ಆಮಿರ್ ಖಾನ್ ಅವರು ಸಂದರ್ಶನ ಒಂದಕ್ಕೆ ತೆರಳಿದ್ದರು. ಇದರಲ್ಲಿ ಆಮಿರ್ ಖಾನ್ಗೆ ನೇರ ಪ್ರಶ್ನೆ ಒಂದು ಎದುರಾಗಿತ್ತು. ‘ಬಾಲಿವುಡ್ ನಟರಿಗೆ ನೀಡಿದಷ್ಟು ಸಂಭಾವನೆ ನಟಿಯರಿಗೆ ಏಕೆ ಕೊಡುವುದಿಲ್ಲ’ ಎಂದು ಕೇಳಲಾಯಿತು. ರಾಣಿ ಮುಖರ್ಜಿ ಹಾಗೂ ಕರೀನಾ ಕಪೂರ್ ಕೂಡ ಆಮಿರ್ ಜೊತೆ ಇದ್ದರು. ಅವರು ಈ ವಿಚಾರವನ್ನು ಒಪ್ಪಿ ಬೆಂಬಲ ನೀಡಿದರು. ಇದಕ್ಕೆ ಆಮಿರ್ ಖಾನ್ ಅವರು ಸ್ಪಷ್ಟ ಉತ್ತರ ನೀಡಿದರು.
‘ಹೀರೋಯಿನ್ಗಳು ಹಾರ್ಡ್ವರ್ಕ್ ಮಾಡುತ್ತಾರೆ ನಿಜ. ಅದೇ ರೀತಿ ಕ್ಯಾಮೆರಾಮೆನ್, ಲೈಟ್ಬಾಯ್ ಎಲ್ಲರೂ ಶ್ರಮ ಹಾಕುತ್ತಾರೆ. ಅವರಿಗೆ ಏಕೆ ಕಡಿಮೆ ಸಂಭಾವನೆ ಕೊಡುತ್ತಾರೆ? ಇಲ್ಲಿ ಪುರುಷ-ಮಹಿಳೆ ಅನ್ನೋದು ಬರೋದಿಲ್ಲ. ಹಾಕಿದಷ್ಟು ಹಣವನ್ನು ಯಾರು ತರುತ್ತಾರೆ ಅನ್ನೋದು ಮಾತ್ರ ಮುಖ್ಯವಾಗುತ್ತದೆ. ನನಗೆ 10 ರೂಪಾಯಿ ನೀಡುತ್ತಾರೆ ಎಂದರೆ ನಾನು ಅದನ್ನು ತರುತ್ತೇನೆ ಎಂಬ ನಂಬಿಕೆ. ರಾಣಿ ಅವರು ನನಗಿಂತ ಹೆಚ್ಚಿನ ಜನರನ್ನು ಥಿಯೇಟರ್ಗೆ ಕರೆತರುತ್ತಾರೆ ಎಂದರೆ ನನಗಿಂತ ಅವರಿಗೆ ಹೆಚ್ಚಿನ ಸಂಭಾವನೆ ನೀಡಬೇಕು. ಇಲ್ಲಿ ಪುರುಷ ಮಹಿಳೆ ಅನ್ನೋದು ಬರೋದಿಲ್ಲ’ ಎಂದಿದ್ದರು ಅವರು.
ಆಮಿರ್ ಖಾನ್ ಅವರು ಹೇಳಿದ ಮಾತನ್ನು ಅನೇಕರು ಒಪ್ಪಿಕೊಂಡಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳು ರಿಲೀಸ್ ಆಗಿ ದೊಡ್ಡ ಮಟ್ಟದ ಗಳಿಕೆ ಮಾಡಿದ ಉದಾಹರಣೆ ತುಂಬಾನೇ ಕಡಿಮೆ. ಆದರೆ, ಸ್ಟಾರ್ ಹೀರೋಗಳ ಸಿನಿಮಾಗಳಾದರೆ ಹೆಚ್ಚು ಗಳಿಕೆ ಮಾಡುತ್ತವೆ. ಹೀಗಾಗಿ, ಹೀರೋಗಿಂತ ಹೀರೋಯಿನ್ಗೆ ಹೆಚ್ಚಿನ ಹಣ ನೀಡುತ್ತಾರೆ ಎನ್ನಲಾಗಿದೆ.
ಇದನ್ನೂ ಓದಿ: ‘ನನಗೆ ಪಾರ್ಟ್ನರ್ ಬೇಕು, ಒಂಟಿ ಬದುಕು ನನ್ನಿಂದ ಅಸಾಧ್ಯ’; ಆಮಿರ್ ಖಾನ್
ಆಮಿರ್ ಖಾನ್ ಅವರು ‘ಲಾಲ್ ಸಿಂಗ್ ಛಡ್ಡಾ’ ಬಳಿಕ ಒಂದು ಬ್ರೇಕ್ ಪಡೆದಿದ್ದರು. ಈಗ ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ವರ್ಷ ಡಿಸೆಂಬರ್ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.