ನಟ ಅಕ್ಷಯ್ ಕುಮಾರ್ (Akshay Kumar) ಅವರ ಟೈಮ್ ಸದ್ಯಕ್ಕೆ ಚೆನ್ನಾಗಿಲ್ಲ ಎಂದೇ ಹೇಳಬಹುದು. ಯಾಕೆಂದರೆ, ಅವರು ನಟಿಸಿದ ಯಾವ ಸಿನಿಮಾಗಳು ಈಗ ಉತ್ತಮವಾಗಿ ಕಮಾಯಿ ಮಾಡುತ್ತಿಲ್ಲ. ಅದರ ಜೊತೆಗೆ ಟ್ರೋಲ್ ಕಾಟ ಕೂಡ ಶುರುವಾಗಿದೆ. ಅವರ ಹೊಸ ಸಿನಿಮಾ ‘ಓಹ್ ಮೈ ಗಾಡ್ 2’ (OMG 2 Movie) ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಆಗಸ್ಟ್ 11ರಂದು ರಿಲೀಸ್ ಆಗಲಿದೆ. ಬಿಡುಗಡೆಗೂ ಮುನ್ನವೇ ‘ಒಎಂಜಿ 2’ ಸಿನಿಮಾ ಬಗ್ಗೆ ಒಂದಷ್ಟು ಗಾಸಿಪ್ ಹಬ್ಬಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರು ಶಿವನ ಪಾತ್ರ ಮಾಡಿದ್ದಾರೆ. ಆದರೆ ಈ ಸಿನಿಮಾದ ಕಥೆ ಸಲಿಂಗ ಕಾಮಕ್ಕೆ (Homosexuality) ಸಂಬಂಧಿಸಿದ್ದು ಎಂದು ಕೆಲವರು ಮಾತನಾಡಿಕೊಂಡಿದ್ದಾರೆ. ಹಾಗಾಗಿ ವಿವಾದ ಭುಗಿಲೇಳುವ ಸಾಧ್ಯತೆ ಇದೆ. ಚಿತ್ರತಂಡದಿಂದ ಈ ಬಗ್ಗೆ ಸ್ಪಷ್ಟನೆ ಬರಬೇಕಿದೆ.
ದೇವರ ಕಥೆ ಮತ್ತು ಪಾತ್ರವನ್ನು ಇಟ್ಟುಕೊಂಡು ಸಿನಿಮಾ ಮಾಡವಾಗ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಒಂದು ವೇಳೆ ಸ್ವಲ್ಪ ಯಾಮಾರಿದರೂ ವಿವಾದ ಗ್ಯಾರಂಟಿ. ‘ಒಎಂಜಿ 2’ ಸಿನಿಮಾದ ಟೀಸರ್ ಬಿಡುಗಡೆ ಆದಾಗಿನಿಂದ ಅನೇಕ ಊಹಾಪೋಹಗಳು ಹುಟ್ಟಿಕೊಂಡಿವೆ. ‘ಆದರೆ ಈ ಸಿನಿಮಾದಲ್ಲಿ ಸಲಿಂಗ ಕಾಮಕ್ಕೆ ಸಂಬಂಧಿಸಿದ ಯಾವುದೇ ವಿಷಯ ಇಲ್ಲ. ಜನರು ಗಾಸಿಪ್ ಹಬ್ಬಿಸುವ ಬದಲು ಚಿತ್ರತಂಡದಿಂದ ಹೆಚ್ಚಿನ ಮಾಹಿತಿ ಬಿಡುಗಡೆ ಆಗುವ ತನಕ ಕಾಯುವುದು ಉತ್ತಮ’ ಎಂದು ಮೂಲಗಳು ಹೇಳಿರುವುದಾಗಿ ‘ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಇದನ್ನೂ ಓದಿ: Akshay Kumar: ಜಾಮಾ ಮಸೀದಿ ಬಳಿ ಕಾಣಿಸಿಕೊಂಡ ಅಕ್ಷಯ್ ಕುಮಾರ್; ಸುತ್ತುವರಿದ ಅಭಿಮಾನಿಗಳು
2012ರಲ್ಲಿ ‘ಒಎಂಜಿ’ ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಅದಕ್ಕೆ ಸೀಕ್ವೆಲ್ ಆಗಿ ‘ಒಎಂಜಿ 2’ ಸಿನಿಮಾ ಈಗ ಬಿಡುಗಡೆ ಆಗುತ್ತಿದೆ. ಅಕ್ಷಯ್ ಕುಮಾರ್ ಜೊತೆ ಪಂಕಜ್ ತ್ರಿಪಾಠಿ ಅವರು ಪ್ರಮುಖ ಮಾತ್ರ ಮಾಡಿದ್ದಾರೆ. ನಟಿ ಯಾಮಿ ಗೌತಮಿ ಅವರು ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮಿತ್ ರೈ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: Akshay Kumar: 30 ಸಾವಿರ ರೂಪಾಯಿ ಬೆಲೆಯ ಬ್ಯಾಗ್ ಧರಿಸಿದ್ದೇ ತಪ್ಪಾಯ್ತಾ? ಹಿಗ್ಗಾಮುಗ್ಗಾ ಟ್ರೋಲ್ ಆದ ಅಕ್ಷಯ್ ಕುಮಾರ್
ಬಿಡುಗಡೆ ದಿನಾಂಕ ಹತ್ತಿರವಾಗಿದ್ದರೂ ಕೂಡ ‘ಒಎಂಜಿ 2’ ಸಿನಿಮಾಗೆ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿಲ್ಲ. ಅದರ ಬೆನ್ನಲ್ಲೇ ಒಂದಷ್ಟು ಅಂತೆ-ಕಂತೆಗಳು ಹುಟ್ಟಿಕೊಂಡಿವೆ. ಸಿನಿಮಾದಲ್ಲಿ ಕೆಲವು ವಿವಾದಾತ್ಮಕ ಅಂಶಗಳು ಇರುವುದರಿಂದ ಸೆನ್ಸಾರ್ ಮಂಡಳಿಯವರು ‘ರಿವೈಸಿಂಗ್ ಕಮಿಟಿ’ಗೆ ಚಿತ್ರವನ್ನು ಕಳಿಸಿದ್ದಾರೆ ಎಂದು ವರದಿ ಆಗಿದೆ. ಇತ್ತೀಚೆಗೆ ರಿಲೀಸ್ ಆದ ‘ಆದಿಪುರುಷ್’ ಸಿನಿಮಾದಲ್ಲಿ ರಾಮಾಯಣವನ್ನು ಮನಬಂದಂತೆ ಚಿತ್ರಿಸಿದ್ದು ವಿವಾದಕ್ಕೆ ಕಾರಣ ಆಗಿತ್ತು. ಆ ಹಿನ್ನೆಲೆಯಲ್ಲಿ ಸೆನ್ಸಾರ್ ಸದಸ್ಯರು ‘ಒಎಂಜಿ 2’ ಚಿತ್ರದ ಪ್ರತಿ ಡೈಲಾಗ್ ಮತ್ತು ದೃಶ್ಯವನ್ನು ಆಳವಾಗಿ ಪರಿಶೀಲಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.