The Kerala Story: ಕುಸಿಯಿತು ‘ದಿ ಕೇರಳ ಸ್ಟೋರಿ’ ಕಲೆಕ್ಷನ್​; 250 ಕೋಟಿ ರೂ. ಗಡಿ ಮುಟ್ಟುವುದು ಅನುಮಾನ

|

Updated on: May 24, 2023 | 7:26 PM

Adah Sharma Box Office Collection: 3ನೇ ವಾರದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾದ ಕಲೆಕ್ಷನ್​ ಕ್ಷೀಣಿಸಿದೆ. ಈ ವೀಕೆಂಡ್​ನಲ್ಲಿ ಏನಾದರೂ ಕಮಾಲ್​ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

The Kerala Story: ಕುಸಿಯಿತು ‘ದಿ ಕೇರಳ ಸ್ಟೋರಿ’ ಕಲೆಕ್ಷನ್​; 250 ಕೋಟಿ ರೂ. ಗಡಿ ಮುಟ್ಟುವುದು ಅನುಮಾನ
‘ದಿ ಕೇರಳ ಸ್ಟೋರಿ’ ಸಿನಿಮಾ ಪೋಸ್ಟರ್​
Follow us on

2022ರಲ್ಲಿ ಬಿಡುಗಡೆ ಆಗಿದ್ದ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಭಾರಿ ಚರ್ಚೆಗೆ ಕಾರಣ ಆಗಿತ್ತು. ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಮತ್ತು ವಲಸೆ ಕುರಿತು ಸಿದ್ಧವಾಗಿದ್ದ ಆ ಚಿತ್ರದ ಬಗ್ಗೆ ಸಾಕಷ್ಟು ಪರ-ವಿರೋಧ ವ್ಯಕ್ತವಾಗಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಆ ಸಿನಿಮಾ 252 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಗೆದ್ದು ಬೀಗಿತ್ತು. ಅದೇ ರೀತಿ, ಈ ವರ್ಷ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಕೂಡ ಸದ್ದು ಮಾಡಿದೆ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಅಬ್ಬರಿಸಿದೆ. ಆದರೆ 250 ಕೋಟಿ ರೂಪಾಯಿ ಗಡಿ ಮುಟ್ಟುವುದು ಅನುಮಾನ ಎನ್ನಲಾಗುತ್ತಿದೆ. ಏಕೆಂದರೆ ಮೂರನೇ ವಾರದಲ್ಲಿ ಈ ಸಿನಿಮಾದ ಕಲೆಕ್ಷನ್ (The Kerala Story Collection)​ ಕುಸಿದಿದೆ. 19ನೇ ದಿನಕ್ಕೆ ಈ ಚಿತ್ರ 3.50 ಕೋಟಿ ರೂಪಾಯಿ ಗಳಿಸಿದೆ. ಅಲ್ಲಿಗೆ, ಒಟ್ಟು ಕಲೆಕ್ಷನ್​ 206.97 ಕೋಟಿ ರೂಪಾಯಿ ಆಗಿದೆ. ಅದಾ ಶರ್ಮಾ (Adah Sharma) ನಟನೆಯ ಈ ಚಿತ್ರಕ್ಕೆ ಸುದೀಪ್ತೋ ಸೇನ್​ ನಿರ್ದೇಶನ ಮಾಡಿದ್ದಾರೆ.

‘ದಿ ಕೇರಳ ಸ್ಟೋರಿ’ ಚಿತ್ರದ ಕಲೆಕ್ಷನ್​ ರಿಪೋರ್ಟ್​:

1ನೇ ದಿನ: 8.03 ಕೋಟಿ ರೂ.

2ನೇ ದಿನ: 11.22 ಕೋಟಿ ರೂ.

3ನೇ ದಿನ: 16.40 ಕೋಟಿ ರೂ.

4ನೇ ದಿನ: 10.07 ಕೋಟಿ ರೂ.

5ನೇ ದಿನ: 11.14 ಕೋಟಿ ರೂ.

6ನೇ ದಿನ: 12 ಕೋಟಿ ರೂ.

7ನೇ ದಿನ: 12.50 ಕೋಟಿ ರೂ.

8ನೇ ದಿನ: 12.23 ಕೋಟಿ ರೂ.

9ನೇ ದಿನ: 19.50 ಕೋಟಿ ರೂ.

10ನೇ ದಿನ: 23.75 ಕೋಟಿ ರೂ.

11ನೇ ದಿನ: 10.30 ಕೋಟಿ ರೂ.

12ನೇ ದಿನ: 9.65 ಕೋಟಿ ರೂ.

13ನೇ ದಿನ: 8.03 ಕೋಟಿ ರೂ.

14ನೇ ದಿನ: 7 ಕೋಟಿ ರೂ.

15ನೇ ದಿನ: 6.60 ಕೋಟಿ ರೂ.

16ನೇ ದಿನ: 9.15 ಕೋಟಿ ರೂ.

17ನೇ ದಿನ: 11.50 ಕೋಟಿ ರೂ.

18ನೇ ದಿನ: 4.50 ಕೋಟಿ ರೂ.

19ನೇ ದಿನ: 3.50 ಕೋಟಿ ರೂ.

‘ದಿ ಕೇರಳ ಸ್ಟೋರಿ’ ಸಿನಿಮಾ 250 ಕೋಟಿ ರೂಪಾಯಿ ಕಲೆಕ್ಷನ್​ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗುವ ಲಕ್ಷಣ ಕಾಣಿಸುತ್ತಿಲ್ಲ. ಮೂರನೇ ವಾರದಲ್ಲಿ ಈ ಸಿನಿಮಾದ ಕಲೆಕ್ಷನ್​ ಕ್ಷೀಣಿಸಿದೆ. ಪಶ್ಚಿಮ ಬಂಗಾಳದಲ್ಲಿ ಈ ಚಿತ್ರಕ್ಕೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆಯಲಾಯಿತು. ಅದರ ಪರಿಣಾಮವಾಗಿ ಕಲೆಕ್ಷನ್​ ಹೆಚ್ಚಬಹುದು ಎಂದೇ ಊಹಿಸಲಾಗಿತ್ತು. ಆದರೆ ಅದು ನಿಜವಾಗಿಲ್ಲ.

ಕೇರಳದಲ್ಲಿ ನಡೆದಿದೆ ಎನ್ನಲಾದ ಯುವತಿಯರ ಮತಾಂತರದ ಕುರಿತು ‘ದಿ ಕೇರಳ ಸ್ಟೋರಿ’ ಸಿನಿಮಾ ಸಿದ್ಧವಾಗಿದೆ. ಟೀಸರ್​ ಬಿಡುಗಡೆ ಆದಾಗಿನಿಂದಲೂ ಈ ಚಿತ್ರ ವಿವಾದಕ್ಕೆ ಕಾರಣ ಆಗಿತ್ತು. ಸಿನಿಮಾ ರಿಲೀಸ್​ ಆದ ನಂತರವೂ ವಿವಾದ ಹೆಚ್ಚಾಯಿತು. ಚಿತ್ರಕ್ಕೆ ಉತ್ತಮವಾದ ಬಾಯಿ ಮಾತಿನ ಪ್ರಚಾರ ಸಿಕ್ಕಿತು. ಈ ಎಲ್ಲ ಕಾರಣಗಳಿಂದಾಗಿ ‘ದಿ ಕೇರಳ ಸ್ಟೋರಿ’ ಸಿನಿಮಾ 200 ಕೋಟಿ ರೂಪಾಯಿ ಕಲೆಕ್ಷನ್​ ಮಾಡಲು ಸಾಧ್ಯವಾಯ್ತು. ನಾಲ್ಕನೇ ವೀಕೆಂಡ್​ನಲ್ಲಿ ಏನಾದರೂ ಕಮಾಲ್​ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.