Yogi Adityanath: ಕಂಗನಾ ನಟನೆಯ ‘ತೇಜಸ್​’ ಸಿನಿಮಾ ನೋಡಿ ಕಣ್ಣೀರು ಸುರಿಸಿದ ಯೋಗಿ ಆದಿತ್ಯನಾಥ್​

|

Updated on: Oct 31, 2023 | 6:37 PM

Kangana Ranaut: ಇತ್ತೀಚೆಗೆ ಬಿಡುಗಡೆ ಆದ ಕಂಗನಾ ರಣಾವತ್​ ನಟನೆಯ ‘ತೇಜಸ್​’ ಸಿನಿಮಾ ಒಳ್ಳೆಯ ಓಪನಿಂಗ್​ ಪಡೆದುಕೊಂಡಿಲ್ಲ. ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೆ ಈ ಸಿನಿಮಾ ತೋರಿಸಲಾಗಿದೆ. ಸಿನಿಮಾ ಮುಗಿದ ಬಳಿಕ ಕಂಗನಾಗೆ ಯೋಗಿ ಅವರು ಉಡುಗೊರೆ ನೀಡಿದ್ದಾರೆ. ಆ ಫೋಟೋಗಳು ವೈರಲ್ ಆಗಿವೆ.

Yogi Adityanath: ಕಂಗನಾ ನಟನೆಯ ‘ತೇಜಸ್​’ ಸಿನಿಮಾ ನೋಡಿ ಕಣ್ಣೀರು ಸುರಿಸಿದ ಯೋಗಿ ಆದಿತ್ಯನಾಥ್​
ತೇಜಸ್​ ಸಿನಿಮಾ ನೋಡಿದ ಯೋಗಿ ಆದಿತ್ಯನಾಥ್​
Follow us on

ಬಾಲಿವುಡ್​ ನಟಿ ಕಂಗನಾ ರಣಾವತ್​ (Kangana Ranaut) ಅವರು ತಮ್ಮ ಹೊಸ ಸಿನಿಮಾ ‘ತೇಜಸ್​’ (Tejas Movie) ಪ್ರಚಾರಕ್ಕಾಗಿ ಹಲವು ರೀತಿಯಲ್ಲಿ ಸರ್ಕಸ್​ ಮಾಡುತ್ತಿದ್ದಾರೆ. ನಿರೀಕ್ಷಿತ ಪ್ರಮಾಣದಲ್ಲಿ ಈ ಸಿನಿಮಾ ಕಲೆಕ್ಷನ್​ ಮಾಡಿಲ್ಲ. ಈಗ ಅವರು ರಾಜಕಾರಣಿಗಳಿಗೆ ಸಿನಿಮಾ ತೋರಿಸುತ್ತಿದ್ದಾರೆ. ಮಂಗಳವಾರ (ಅ.31) ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)​ ಅವರಿಗೆ ‘ತೇಜಸ್​’ ಸಿನಿಮಾ ತೋರಿಸಲಾಗಿದೆ. ಈ ಸಂದರ್ಭದ ಫೋಟೋಗಳನ್ನು ಕಂಗನಾ ರಣಾವತ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಸಿನಿಮಾಗೆ ಬೆಂಬಲ ಸೂಚಿಸಿದ ಯೋಗಿಗೆ ಕಂಗನಾ ಧನ್ಯವಾದ ತಿಳಿಸಿದ್ದಾರೆ. ಈ ಸಿನಿಮಾ ನೋಡುವಾಗ ಯೋಗಿ ಭಾವುಕರಾಗಿ ಕಣ್ಣೀರು ಹಾಕಿದರು ಎಂದು ಕೂಡ ಕಂಗನಾ ಬರೆದುಕೊಂಡಿದ್ದಾರೆ.

‘ಇಂದು ಯೋಗಿ ಆದಿತ್ಯನಾಥ್​ ಅವರಿಗೆ ಸೈನಿಕರ ಜೀವನಾಧಾರಿತ ‘ತೇಜಸ್​’ ಸಿನಿಮಾ ತೋರಿಸಲಾಯಿತು. ತೇಜಸ್​ ಸಿನಿಮಾದ ಕೊನೇ ಸಂಭಾಷಣೆಗಳನ್ನು ಕೇಳಿಸಿಕೊಂಡು ಯೋಗಿ ಅವರಿಗೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ’ ಎಂದು ಕಂಗನಾ ಅವರು ಪೋಸ್ಟ್ ಮಾಡಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಈ ಮೊದಲು ಕೂಡ ಕಂಗನಾ ರಣಾವತ್ ಅವರು ಯೋಗಿ ಆದಿತ್ಯನಾಥ್​ ಅವರನ್ನು ಭೇಟಿ ಆಗಿದ್ದರು. ಆದರೆ ಈ ಬಾರಿಯ ಭೇಟಿ ಅವರಿಗೆ ತುಂಬಾ ಸ್ಪೆಷಲ್​ ಎನಿಸಿದೆ.

‘ಒಬ್ಬ ಸೈನಿಕನಿಗೆ ಏನು ಬೇಕು? ಸೈನಿಕರ ಧೈರ್ಯ, ತ್ಯಾಗ, ಬಲಿದಾನದ ಕಥೆ ಇರುವ ಸಿನಿಮಾ ನೋಡಿ ಯೋಗಿ ಅವರು ಎಮೋಷನಲ್​ ಆದರು. ನಿಮ್ಮ ಹೊಗಳಿಕೆ ಮತ್ತು ಆಶೀರ್ವಾದಕ್ಕೆ ಧನ್ಯವಾಗಳು’ ಎಂದು ಕಂಗನಾ ರಣಾವತ್​ ಅವರು ಬರೆದುಕೊಂಡಿದ್ದಾರೆ. ಈ ವೇಳೆ ಉತ್ತರಖಂಡ್​ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಕೂಡ ಇದ್ದರು. ಸಿನಿಮಾ ಮುಗಿದ ಬಳಿಕ ಕಂಗನಾಗೆ ಯೋಗಿ ಅವರು ಉಡುಗೊರೆ ನೀಡಿದ್ದಾರೆ. ಮುಖ್ಯಮಂತ್ರಿಗಳಿಬ್ಬರು ಸಿನಿಮಾ ನೋಡಿ ಹೊಗಳಿದ್ದಾರೆ ಎಂದು ಕಂಗನಾ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸತತ ಸೋಲು ಕಂಡರೂ ಕಂಗನಾ ರಣಾವತ್​ಗೆ ಕಡಿಮೆ ಆಗಿಲ್ಲ ಸಿನಿಮಾ ಆಫರ್​​

ಅಕ್ಟೋಬರ್​ 27ರಂದು ‘ತೇಜಸ್​’ ಸಿನಿಮಾ ರಿಲೀಸ್​ ಆಯಿತು. ಈ ಚಿತ್ರದಲ್ಲಿ ಕಂಗನಾ ರಣಾವತ್​ ಅವರು ವಾಯುಸೇನೆಯ ಪೈಲೆಟ್​ ಪಾತ್ರವನ್ನು ಮಾಡಿದ್ದಾರೆ. ಪ್ರೇಕ್ಷಕರು ಈ ಚಿತ್ರದ ಕಡೆಗೆ ಅಷ್ಟೇನೂ ಆಸಕ್ತಿ ತೋರಿಸಿಲ್ಲ. ಬಹಳ ಕಳಪೆ ಓಪನಿಂಗ್ ಪಡೆದುಕೊಂಡ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ 4 ದಿನಕ್ಕೆ 4 ಕೋಟಿ ರೂಪಾಯಿ ದಾಟಲೂ ಸಾಧ್ಯವಾಗದೇ ಕಷ್ಟಪಡುತ್ತಿದೆ. ಈಗ ಕಂಗನಾ ರಣಾವತ್​ಗೆ ಯೋಗಿ ಆದಿತ್ಯನಾಥ್​ ಅವರಿಂದ ಮೆಚ್ಚುಗೆ ಸಿಕ್ಕಿರುವುದರಿಂದ ಮುಂದಿನ ದಿನಗಳಲ್ಲಿ ಕಲೆಕ್ಷನ್​ ಹೆಚ್ಚಾಗುತ್ತಾ ಎಂಬುದನ್ನು ಕಾದುನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.