Payal Ghosh: ‘ದೊಡ್ಡ ಸಿನಿಮಾ ಚಾನ್ಸ್​ ಸಿಗಬೇಕು ಅಂದ್ರೆ ಅವರ ಜೊತೆ ಮಲಗಬೇಕು’: ನಟಿ ಪಾಯಲ್​ ಘೋಷ್​ ಶಾಕಿಂಗ್​ ಹೇಳಿಕೆ

|

Updated on: Jul 08, 2023 | 8:35 PM

Casting Couch: ಕನ್ನಡದ ‘ವರ್ಷಧಾರೆ’ ಸಿನಿಮಾದಲ್ಲಿ ನಟಿಸಿದ್ದ ಪಾಯಲ್​ ಘೋಷ್​ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಕಾಸ್ಟಿಂಗ್​ ಕೌಚ್​ ಬಗ್ಗೆ ಅವರು ಮತ್ತೆ ಚರ್ಚೆ ಹುಟ್ಟುಹಾಕಿದ್ದಾರೆ.

Payal Ghosh: ‘ದೊಡ್ಡ ಸಿನಿಮಾ ಚಾನ್ಸ್​ ಸಿಗಬೇಕು ಅಂದ್ರೆ ಅವರ ಜೊತೆ ಮಲಗಬೇಕು’: ನಟಿ ಪಾಯಲ್​ ಘೋಷ್​ ಶಾಕಿಂಗ್​ ಹೇಳಿಕೆ
ಪಾಯಲ್​ ಘೋಷ್​
Follow us on

ಸಿನಿಮಾದ ಪರದೆ ಮೇಲೆ ಬಣ್ಣ ಬಣ್ಣದ ದೃಶ್ಯಗಳು ಕಾಣುತ್ತವೆ. ಆದರೆ ತೆರೆಹಿಂದೆ ಕೆಲವು ಕರಾಳ ವಿಷಯಗಳು ಇರುತ್ತವೆ. ಈ ಹಿಂದೆ ಅನೇಕ ನಟಿಯರು ತಮಗೆ ಆದ ಕಹಿ ಅನುಭವಗಳ ಬಗ್ಗೆ ಮೀಟೂ (Me Too) ಅಭಿಯಾನದಲ್ಲಿ ಹೇಳಿಕೊಂಡಿದ್ದರು. ಹಾಗಂತ ಅಂಥ ಪ್ರಕರಣಗಳು ಇಂದಿಗೂ ನಿಂತಿಲ್ಲ. ಚಿತ್ರರಂಗದಲ್ಲಿ ಕಾಸ್ಟಿಂಗ್​ ಕೌಚ್​ (Casting Couch) ಭೂತದ ನೆರಳು ಆಗಾಗ ಸುಳಿಯುತ್ತದೆ. ಈಗ ನಟಿ ಪಾಯಲ್ ಘೋಷ್​ ಅವರು ಒಂದು ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ‘ದೊಡ್ಡ ಸಿನಿಮಾದಲ್ಲಿ ಅವಕಾಶ ಸಿಗಬೇಕು ಎಂದರೆ ಅವರ ಜೊತೆ ಮಲಗಬೇಕು’ ಎಂದು ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಕೂಡಲೇ ಅದನ್ನು ಡಿಲೀಟ್​ ಮಾಡಿದ್ದಾರೆ. ಪಾಯಲ್ ಘೋಷ್ (Payal Ghosh) ಅವರ ಈ ವರ್ತನೆಯಿಂದ ಚರ್ಚೆ ಶುರುವಾಗಿದೆ.

2008ರಿಂದಲೂ ಚಿತ್ರರಂಗದಲ್ಲಿ ಇರುವ ಪಾಯಲ್​ ಘೋಷ್​ ಅವರು ಈತನಕ ಮಾಡಿರುವುದು ಬೆರಣೆಳಿಕೆಯಷ್ಟು ಸಿನಿಮಾ ಮಾತ್ರ. 2010ರಲ್ಲಿ ಬಂದ ಕನ್ನಡದ ‘ವರ್ಷಧಾರೆ’ ಸಿನಿಮಾದಲ್ಲೂ ಅವರು ನಟಿಸಿದ್ದರು. ಈಗ ‘ಫೈರ್​ ಆಫ್​ ಲವ್​: ರೆಡ್​’ ಸಿನಿಮಾದಲ್ಲಿ ಪಾಯಲ್​ ಘೋಷ್​ ಅಭಿನಯಿಸಿದ್ದಾರೆ. ಇದು ಅವರ 11ನೇ ಸಿನಿಮಾ. ಚಿತ್ರರಂಗದಲ್ಲಿ ಕಾಂಪ್ರಮೈಸ್​ ಆದರೆ ಮಾತ್ರ ಹೆಚ್ಚು ಸಿನಿಮಾಗಳನ್ನು ಮಾಡಲು ಸಾಧ್ಯ ಎಂಬುದು ಪಾಯಲ್​ ಘೋಷ್​ ಅಭಿಪ್ರಾಯ. ಅದನ್ನೇ ಅವರು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಕಹಿ ಸತ್ಯ ಅನಾವರಣ; ಮತ್ತೆ ಮೀಟೂ ಬಿರುಗಾಳಿ ಎಬ್ಬಿಸಿದ ನಟಿ ಆಶಿತಾ

‘ನಾನು ಮಲಗಿದ್ದಿದ್ದರೆ ಇಂದು 30 ಸಿನಿಮಾ ಮಾಡಿರುತ್ತಿದ್ದೆ. ದೊಡ್ಡ ಸಿನಿಮಾಗಳ ಆಫರ್​ ಸಿಗಬೇಕು ಎಂದರೆ ಅವರ ಜೊತೆ ಮಲಗಬೇಕು. ಮಲಗದ ಹೊರತು ಅದು ಸಾಧ್ಯವಿಲ್ಲ’ ಎಂದು ಪಾಯಲ್​ ಘೋಷ್​ ಬರೆದುಕೊಂಡಿದ್ದರು. ಇದು ನೆಟ್ಟಿಗರ ಗಮನ ಸೆಳೆಯಿತು. ಯಾರ ಬಗ್ಗೆ ಪಾಯಲ್​ ಘೋಷ್​ ಈ ರೀತಿ ಹೇಳಿರಬಹುದು ಎಂಬ ಚರ್ಚೆ ಶುರುವಾಯಿತು. ಜನರಿಂದ ಹಲವು ಪ್ರಶ್ನೆಗಳು ಬರಲು ಆರಂಭವಾದವು. ಕೂಡಲೇ ಅವರು ಪೋಸ್ಟ್​ ಡಿಲೀಟ್​ ಮಾಡಿದರು. ಆ ಮೂಲಕ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯ ಹೆಸರನ್ನು ಪಾಯಲ್​ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: Payal Ghosh: ಸ್ಯಾಂಡಲ್​ವುಡ್​ನಲ್ಲಿ ಮಿಂಚಿದ್ದ ನಟಿ ಪಾಯಲ್ ಘೋಷ್ ಮೇಲೆ ಹಲ್ಲೆ ಮತ್ತು ಆಸಿಡ್ ದಾಳಿಗೆ ಯತ್ನ

ಪಾಯಲ್​ ಘೋಷ್​ ಅವರು ಈ ರೀತಿ ಆರೋಪ ಮಾಡಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಅವರು ಖ್ಯಾತ ನಿರ್ದೇಶಕ ಅನುರಾಗ್​ ಕಶ್ಯಪ್​ ಮೇಲೆ ಆರೋಪ ಹೊರಿಸಿದ್ದರು. ತಮಗೆ ಮುಂಬೈನಲ್ಲಿ ಅನುರಾಗ್​ ಕಶ್ಯಪ್​ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಆ ಆರೋಪಗಳನ್ನು ಅನುರಾಗ್​ ಕಶ್ಯಪ್​ ತಳ್ಳಿ ಹಾಕಿದ್ದರು. ಲೈಂಗಿಕ ಕಿರುಕುಳ ನಡೆದಿತ್ತು ಎನ್ನಲಾದ ದಿನದಂದು ತಾವು ಮುಂಬೈನಲ್ಲಿ ಇರಲೇ ಇಲ್ಲ ಎಂಬ ದಾಖಲೆಯನ್ನು ಪೊಲೀಸರಿಗೆ ಒದಗಿಸುವ ಮೂಲಕ ಅನುರಾಗ್​ ಕಶ್ಯಪ್​ ಅವರು ಆರೋಪಮುಕ್ತರಾಗಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.