‘ನಿಖಾ ಕಬೂಲ್ ಹೇ’; 24ನೇ ವಯಸ್ಸಿಗೆ ಮದುವೆ ಆದ ‘ದಂಗಲ್’ ನಟಿ ಝೈರಾ ವಾಸಿಮ್
Zaira Wasim Marriage: 'ದಂಗಲ್' ಖ್ಯಾತಿಯ ನಟಿ ಝೈರಾ ವಾಸಿಮ್ 24ನೇ ವಯಸ್ಸಿಗೆ ವಿವಾಹವಾಗಿದ್ದಾರೆ. ಧಾರ್ಮಿಕ ಕಾರಣಗಳಿಂದ ಚಿತ್ರರಂಗದಿಂದ ದೂರ ಸರಿದಿದ್ದ ಅವರು, ತಮ್ಮ ನಿಖಾ ಸಮಾರಂಭದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬಂದಿದೆ. ಪತಿಯ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ.

‘ದಂಗಲ್’, ‘ಸೀಕ್ರೆಟ್ ಸೂಪರ್ ’ ಅಂತಹ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದ ಝೈರಾ ವಾಸಿಮ್ ಚಿತ್ರರಂಗದಿಂದ ದೂರ ಇದ್ದಾರೆ. ಅವರು ಈಗ ಸದ್ದಿಲ್ಲದೆ ವಿವಾಹ ಆಗಿದ್ದಾರೆ. ಅವರು ತಮ್ಮ ನಿಖಾ ಸಮಾರಂಭದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ ಬಂದಿದೆ. ಇನ್ನೂ ಕೆಲವರು ಇಷ್ಟು ಬೇಗ ಅವರು ಮದುವೆ ಆಗಬಾರದಿತ್ತು ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.
ಝೈರಾ ವಾಸಿಮ್ ಅವರು ಜನಿಸಿದ್ದು 2000ನೇ ಇಸ್ವಿಯಲ್ಲಿ. 15ನೇ ವಯಸ್ಸಿಗೆ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಕೇವಲ ನಾಲ್ಕು ವರ್ಷ ಮಾತ್ರ ಸಿನಿಮ ರಂಗದಲ್ಲಿ ಇದ್ದರು. ‘ದಂಗಲ್’ ಚಿತ್ರದ ಮೂಲಕ ಗಮನ ಸೆಳೆದರು. 2017ರ ‘ಸೀಕ್ರೆಟ್ ಸೂಪರ್ಸ್ಟಾರ್’ ಭಾರತದಲ್ಲಿ ಸಾಧಾರಣ ಎನಿಸಿಕೊಂಡರೂ, ಚೀನಾದಲ್ಲಿ ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷ್ 800 ಕೋಟಿ ರೂಪಾಯಿಗೂ ಅಧಿಕವಾಗಿದೆ.
2019ರಲ್ಲಿ ‘ದಿ ಸ್ಕೈ ಈಸ್ ಪಿಂಕ್’ ಹೆಸರಿನ ಸಿನಿಮಾ ಮಾಡಿದರು. ಈ ಚಿತ್ರದ ಬಳಿಕ ಅವರು ಇತ್ರರಂಗ ತೊರೆದೇ ಬಿಟ್ಟರು. ಧಾರ್ಮಿಕ ಕಾರಣದಿಂದ ಝೈರಾ ಚಿತ್ರರಂಗದಿಂದ ದೂರ ಆದರು ಎನ್ನಲಾಗುತ್ತಿದೆ. ಈಗ 24ನೇ ವಯಸ್ಸಿಗೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
View this post on Instagram
ಸೋಶಿಯಲ್ ಮೀಡಿಯಾದಲ್ಲಿ ಮದುವೆ ವಿಚಾರವನ್ನು ಝೈರಾ ಹಂಚಿಕೊಂಡಿದ್ದಾರೆ. ಪತಿ ಜೊತೆ ನಿಂತು ಅವರು ಚಂದ್ರನ ನೋಡುತ್ತಿದ್ದಾರೆ. ‘ಮೂರು ಬಾರಿ ಕುಬೂಲ್ ಹೇ’ ಎಂದು ಅವರು ಬರೆದುಕೊಂಡಿದ್ದಾರೆ. ಅವರಿಗೆ ಶುಭಾಶಯಗಳ ಸುರಿಮಳೆ ಬಂದಿದೆ. ಅವರು ಪತಿಯ ಹೆಸರನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ.
ಇದನ್ನೂ ಓದಿ: ಕೌನ್ ಬನೇಗಾ ಕರೋಡ್ಪತಿಯಲ್ಲಿ ರಿಷಬ್ ಶೆಟ್ಟಿ ಗೆದ್ದ ಹಣ ಎಷ್ಟು? ಸಿಕ್ಕ ಉಡುಗೊರೆಗಳೇನು?
‘ಈ ಕ್ಷೇತ್ರವು ನಿಜಕ್ಕೂ ನನಗೆ ಬಹಳಷ್ಟು ಪ್ರೀತಿ, ಬೆಂಬಲ ಮತ್ತು ಮೆಚ್ಚುಗೆಯನ್ನು ತಂದಿದೆ. ಆದರೆ ಅದು ನನ್ನನ್ನು ಅಜ್ಞಾನದ ಹಾದಿಗೆ ಕರೆದೊಯ್ಯಿತು. ಅರಿವಿಲ್ಲದೆ ನಂಬಿಕೆಯಿಂದ ಹೊರಬಂದೆ. ಧರ್ಮದೊಂದಿಗಿನ ನನ್ನ ಸಂಬಂಧದಲ್ಲಿ ಸಿನಿಮಾ ಕ್ಷೇತ್ರ ಹಸ್ತಕ್ಷೇಪ ಮಾಡಿತು’ ಎಂದು ವಾಸಿಮ್ ಅವರು ಬರೆದುಕೊಂಡು, ನಟನೆಯಿಂದ ದೂರ ಸರಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:49 pm, Sat, 18 October 25








