
ಬ್ಲಾಕ್‌ಬಸ್ಟರ್ ಹಿಟ್ ಹಾಡಿನ ಗಾಯಕ ಜುಬೀನ್ ಗಾರ್ಗ್ ಸೆಪ್ಟೆಂಬರ್ 19ರಂದು ನಿಧನರಾದರು. ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಮಾಡುವಾಗ ಅವರು ಪ್ರಾಣ ಕಳೆದುಕೊಂಡರು. ಅವರು ಕಾರ್ಯಕ್ರಮ ನೀಡಲು ಸಿಂಗಾಪುರಕ್ಕೆ ಹೋಗಿದ್ದರು. ಅವರ ಶೋ ಸೆಪ್ಟೆಂಬರ್ 20ರಂದು ಇತ್ತು. ಡೈವಿಂಗ್ ಮಾಡುವಾಗ ಜುಬೀನ್ ಲೈಫ್ ಜಾಕೆಟ್ ಧರಿಸಿರಲಿಲ್ಲ ಎಂದು ಅನೇಕ ವರದಿಗಳು ಹೇಳಿವೆ. ಅವರು ಸಾವನ್ನಪ್ಪಲು ಬೇರೆಯದೇ ಕಾರಣ ಇದೆ ಎಂದು ಹೇಳಲಾಗಿತ್ತು. ಜುಬೀನ್ ಅವರ ಪತ್ನಿ ಗರಿಮಾ ಸೈಕಿಯಾ ಜುಬೀನ್ ಸಾವಿಗೆ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಜುಬಿನ್ ಅವರ ಪತ್ನಿ ಗರಿಮಾ, ‘ಜುಬೀನ್ ಸಿಂಗಾಪುರದ ಒಂದು ದ್ವೀಪಕ್ಕೆ ಏಳು ಅಥವಾ ಎಂಟು ಜನರೊಂದಿಗೆ ದೋಣಿಯಲ್ಲಿ ಹೋಗಿದ್ದರು. ಡ್ರಮ್ಮರ್‌ಗಳಾದ ಶೇಖರ್ ಮತ್ತು ಸಿದ್ಧಾರ್ಥ್ ಕೂಡ ಅವರೊಂದಿಗೆ ಇದ್ದರು. ಗುಂಪಿನ ಎಲ್ಲಾ ಸದಸ್ಯರು ಲೈಫ್ ಜಾಕೆಟ್‌ಗಳನ್ನು ಧರಿಸಿದ್ದರು. ಆದರೆ ಜುಬಿನ್ ಮತ್ತೆ ಈಜಲು ಹೋದಾಗ, ಮೂರ್ಚೆ ಹೋದರು’ ಎಂದು ಗರಿಮಾ ಹೇಳಿದರು.
ಜುಬಿನ್ ಈ ರೀತಿ ಪ್ರಜ್ಞೆ ತಪ್ಪುತ್ತಿರುವುದು ಇದೇ ಮೊದಲಲ್ಲ ಎಂದು ಗರಿಮಾ ಹೇಳಿದರು. ಅವರು ಈ ಹಿಂದೆಯೂ ಈ ರೀತಿಯ ತೊಂದರೆ ಅನುಭವಿಸಿದ್ದರು. ಆದರೆ ನಂತರ ಚೇತರಿಸಿಕೊಳ್ಳುತ್ತಿದ್ದರಂತೆ. ಜುಬಿನ್ ಅವರನ್ನು ಸಿಂಗಾಪುರ ಜನರಲ್ ಆಸ್ಪತ್ರೆಯಲ್ಲಿ ಎರಡು ಗಂಟೆಗಳ ಕಾಲ ಐಸಿಯುನಲ್ಲಿ ಇರಿಸಲಾಗಿತ್ತು. ಜುಬಿನ್ ಅಸ್ಸಾಂನಲ್ಲಿ ಅತ್ಯಂತ ಜನಪ್ರಿಯ ಮತ್ತು ಅತಿ ಹೆಚ್ಚು ಗಳಿಕೆಯ ಗಾಯಕರಲ್ಲಿ ಒಬ್ಬರು. ಅವರು ಅಸ್ಸಾಮಿ, ಬಂಗಾಳಿ, ಹಿಂದಿ ಮತ್ತು ನೇಪಾಳಿ ಭಾಷೆಗಳಲ್ಲಿ 40 ಕ್ಕೂ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ. ‘ಯಾಲಿ..’ ಮೊದಲಾದ ಹಾಡುಗಳನ್ನು ಅವರು ಹಾಡಿದ್ದಾರೆ.
ಇದನ್ನೂ ಓದಿ: ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಭಾರತದ ಖ್ಯಾತ ಗಾಯಕ ನಿಧನ
ಜುಬೀನ್ ಸಾವಿನ ಸುದ್ದಿ ಚಿತ್ರರಂಗವನ್ನು ಶೋಕದಲ್ಲಿ ಮುಳುಗಿಸಿದೆ. ಜುಬೀನ್ ಅಭಿಮಾನಿಗಳು ಗುವಾಹಟಿ ವಿಮಾನ ನಿಲ್ದಾಣದ ಹೊರಗೆ ಜಮಾಯಿಸಿದ್ದರು. ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಅವರ ದೇಹವನ್ನು ಗುವಾಹಟಿಗೆ ತರಲಾಗುವುದು ಎಂಬ ಸುದ್ದಿ ಹರಡಿದಾಗ, ಜನಸಮೂಹ ಎರಡು ಬ್ಯಾರಿಕೇಡ್‌ಗಳನ್ನು ಮುರಿದು ವಿಮಾನ ನಿಲ್ದಾಣದ ಟರ್ಮಿನಲ್ ಕಡೆಗೆ ಓಡಲು ಪ್ರಾರಂಭಿಸಿದರು. ಕೊನೆಗೆ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಜನಸಮೂಹದ ಮೇಲೆ ಲಾಠಿ ಚಾರ್ಜ್ ಮಾಡಬೇಕಾಯಿತು. ಕೆಲವರು ಭದ್ರತಾ ಸಿಬ್ಬಂದಿಯ ಮೇಲೆ ನೀರಿನ ಬಾಟಲಿಗಳನ್ನು ಎಸೆದು ಪೊಲೀಸ್ ವಾಹನಗಳಿಗೆ ಹಾನಿ ಮಾಡಲು ಪ್ರಯತ್ನಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.