‘ಬುಕ್ ಮೈ ಶೋ’ನಲ್ಲಿ ಸಿನಿಮಾ ಟಿಕೆಟ್ ಬುಕ್ ಮಾಡುವಾಗ ಹಣ ಉಳಿಸೋದು ಹೇಗೆ? ಇಲ್ಲಿದೆ ಸುಲಭ ಟ್ರಿಕ್

ಸಿನಿಮಾ ಟಿಕೆಟ್ ಬುಕ್ ಮಾಡೋಕೆ ಇರುವ ಫ್ಲ್ಯಾಟ್​ಫಾರ್ಮ್​ಗಳು ಎಂದರೆ ಬುಕ್ ಮೈ ಶೋ, ಪೆಟಿಎಂ. ಬಹುತೇಕರು ಟಿಕೆಟ್ ಬುಕ್ ಮಾಡೋದು ‘ಬುಕ್ ಮೈ ಶೋ’ ಮೂಲಕ. ಬುಕ್ ಮೈ ಶೋ’ನಲ್ಲಿ ಸಿನಿಮಾ ಟಿಕೆಟ್ ಬುಕ್ ಮಾಡುವಾಗ ನೀವು ಹಣ ಉಳಿಸಬಹುದು. ಅದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

‘ಬುಕ್ ಮೈ ಶೋ’ನಲ್ಲಿ ಸಿನಿಮಾ ಟಿಕೆಟ್ ಬುಕ್ ಮಾಡುವಾಗ ಹಣ ಉಳಿಸೋದು ಹೇಗೆ? ಇಲ್ಲಿದೆ ಸುಲಭ ಟ್ರಿಕ್
ಬುಕ್ ಮೈ ಶೋ

Updated on: Aug 27, 2024 | 2:19 PM

ಸದ್ಯ ಸಾಲು ಸಾಲು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಇತ್ತೀಚೆಗೆ ಕನ್ನಡದಲ್ಲಿ ರಿಲೀಸ್ ಆದ ‘ಭೀಮ’, ‘ಕೃಷ್ಣಂ ಪ್ರಣಯ ಸಖಿ’ ಮೆಚ್ಚುಗೆ ಪಡೆದಿದೆ. ಹಿಂದಿಯಲ್ಲಿ ‘ಸ್ತ್ರೀ 2’ ಚಿತ್ರ ಹವಾ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ‘ಮಾರ್ಟಿನ್’, ‘ಮ್ಯಾಕ್ಸ್’, ‘ಭೈರತಿ ರಣಗಲ್’ ರೀತಿಯ ಸಿನಿಮಾಗಳು ರಿಲೀಸ್​ಗೆ ರೆಡಿ ಇವೆ. ‘ಬುಕ್ ಮೈ ಶೋ’ನಲ್ಲಿ ಸಿನಿಮಾ ಟಿಕೆಟ್ ಬುಕ್ ಮಾಡುವಾಗ ನೀವು ಹಣ ಉಳಿಸಬಹುದು. ಅದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

‘ಬುಕ್ ಮೈ ಶೋ’ ಬ್ರೋಕರ್ ರೀತಿ ವರ್ತಿಸುತ್ತದೆ. ಗ್ರಾಹಕ ಹಾಗೂ ಪಿವಿಆರ್​-ಐನಾಕ್ಸ್, ಥಿಯೇಟರ್​ಗಳ ಮಧ್ಯೆ ಮಧ್ಯವರ್ಥಿ ರೀತಿ ಇದು ಕೆಲಸ ಮಾಡುತ್ತದೆ. ಟಿಕೆಟ್ ಬುಕ್ ಮಾಡಿದ್ದಕ್ಕೆ ಒಂದಷ್ಟು ಚಾರ್ಜ್ ಕೂಡ ಮಾಡುತ್ತಾರೆ. ಕೇವಲ ಬುಕ್ ಮೈ ಶೋ ಮಾತ್ರವಲ್ಲ ಪೇಟಿಎಂ ಮೂಲಕ ಟಿಕೆಟ್ ಬುಕ್ ಮಾಡಿದರೂ ಒಂದಷ್ಟು ಹಣವನ್ನು ಚಾರ್ಜ್ ಮಾಡಿಯೇ ಮಾಡಲಾಗುತ್ತದೆ. ನೀವು ಟಿಕೆಟ್ ಬುಕ್ ಮಾಡುವಾಗ ಒಂದಷ್ಟು ಹಣವನ್ನು ಉಳಿಸಬಹುದು.

ಸಾಮಾನ್ಯವಾಗಿ ಪಿವಿಆರ್​-ಐನಾಕ್ಸ್ ಸೇರಿದಂತೆ ಬಹುತೇಕ ಮಲ್ಟಿಪ್ಲೆಕ್ಸ್​ಗಳಲ್ಲಿ​ ಶುಕ್ರವಾರ ಸೇರಿದಂತೆ ವೀಕೆಂಡ್​ನ ಟಿಕೆಟ್​ಗಳು ಬುಕ್ ಮೈ ಶೋನಲ್ಲಿ ಸಿಗೋದು ಗುರುವಾರದಿಂದ ಮಾತ್ರ. ಬುಧವಾರ ನೀವು ಟಿಕೆಟ್ ಬುಕ್ ಮಾಡಲು ಪ್ರಯತ್ನಿಸಿದರೆ ಶುಕ್ರವಾರ, ಶನಿವಾರ ಹಾಗೂ ಭಾನುವಾರದ ಟಿಕೆಟ್​ಗಳು ಲಭ್ಯವಾಗುವುದಿಲ್ಲ. ಪಿವಿಆರ್​-ಐನಾಕ್ಸ್​ ಟಿಕೆಟ್​ಗಳನ್ನು ಗುರುವಾರವೇ ಬುಕ್ ಮಾಡಿದರೆ ಹೆಚ್ಚಿನ ಹಣ ಉಳಿಸಬಹುದು.

ಪಿವಿಆರ್​ ಅವರು ಡೈನಮಿಕ್​ ಪ್ರೈಸ್​ನ ಜಾರಿಗೆ ತಂದಿದ್ದಾರೆ. ಅಂದರೆ, ಈ ಟಿಕೆಟ್​ನ ಬೆಲೆ ವಿಮಾನದ ಟಿಕೆಟ್ ಬೆಲೆಯ ರೀತಿಯಲ್ಲೇ ವ್ಯತ್ಯಾಸ ಆಗುತ್ತದೆ. ವಿಮಾನದಲ್ಲಿ ನೀವು ಪ್ರಯಾಣ ಮಾಡುವ ದಿನಾಂಕಕ್ಕಿಂತ ಎರಡು ಮೂರು ತಿಂಗಳು ಮೊದಲು ಬುಕ್ ಮಾಡುತ್ತೀರಿ ಎಂದರೆ ಬೆಲೆ ಕಡಿಮೆ ಇರುತ್ತದೆ. ಟ್ರಾವೆಲ್ ಮಾಡುವ ದಿನವ ಟಿಕೆಟ್ ಬುಕ್ ಮಾಡೋದಾದರೆ ಬೆಲೆ ಅಧಿಕವಾಗಿರುತ್ತದೆ.

ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಶೋ ವೇಳೆ ಪಿವಿಆರ್ ಒಳಗೆ ಸುರಿಯಿತು ಮಳೆ ನೀರು; ವಿಡಿಯೋ ವೈರಲ್​

ಪಿವಿಆರ್ ಕೂಡ ಇದೇ ತಂತ್ರ ಉಪಯೋಗಿಸುತ್ತಿದೆ. ಗುರುವಾರ ಟಿಕೆಟ್ ಬುಕ್ ಮಾಡಿದರೆ ಹೆಚ್ಚಿನ ಬೇಡಿಕೆ ಇರುವುದಿಲ್ಲ ಎನ್ನುವ ಕಾರಣಕ್ಕೆ ಕಡಿಮೆ ಬೆಲೆಗೆ ಟಿಕೆಟ್ ಲಭ್ಯವಾಗುತ್ತದೆ. ಆದರೆ, ಶೋ ಹತ್ತಿರವದಾಂತೆ ಅಥವಾ ಶೋ ಹೌಸ್​ಫುಲ್ ಆಗುತ್ತಿದೆ ಎಂದಾಗ ಟಿಕೆಟ್ ಬುಕ್ ಮಾಡಿದರೆ ಅದರ ಬೆಲೆ ಹೆಚ್ಚಿರುತ್ತದೆ. ಭಾನುವಾರದ ಶೋನ ಬೆಲೆ ಗುರುವಾರ ಬುಕ್ ಮಾಡುವುದಕ್ಕೂ ಭಾನುವಾರ ಬುಕ್ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:18 pm, Tue, 27 August 24