Pathaan vs Gandhi Godse – Ek Yudh: ಚಿತ್ರಗಳ ಮಧ್ಯೆ ನಡೆಯುತ್ತಾ ಬಾಕ್ಸ್​ ಆಫೀಸ್ ವಾರ್?

| Updated By: ಗಂಗಾಧರ​ ಬ. ಸಾಬೋಜಿ

Updated on: Dec 16, 2022 | 10:01 PM

ರಾಜ್‍ಕುಮಾರ್ ಸಂತೋಷಿ ನಿರ್ದೇಶನದ 'ಗಾಂಧಿ ಗೋಡ್ಸೆ ಏಕ್ ಯುದ್ಧ್' ಮತ್ತು ಶಾರುಖ್​ ಖಾನ್ ನಟನೆಯ ಪಠಾಣ್ ಚಿತ್ರ ಒಂದೇ ದಿನದ ಅಂತರದಲ್ಲಿ ತೆರೆಗೆ ಬರುತ್ತಿವೆ. ಹಾಗಾಗಿ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.

Pathaan vs Gandhi Godse - Ek Yudh: ಚಿತ್ರಗಳ ಮಧ್ಯೆ ನಡೆಯುತ್ತಾ ಬಾಕ್ಸ್​ ಆಫೀಸ್ ವಾರ್?
ರಾಜ್‍ಕುಮಾರ್ ಸಂತೋಷಿ, ಶಾರುಖ್​ ಖಾನ್
Follow us on

‘ಅಂದಾಜ್ ಅಪ್ನಾ ಅಪ್ನಾ’, ‘ಘಾಯಲ್, ‘ಖಾಕಿ’, ‘ಚೈನಾ ಗೇಟ್’, ‘ಅಜಬ್ ಪ್ರೇಮ್ ಕಿ ಗಜಬ್ ಕಹಾನಿ’, ‘ದಿ ಲೆಜೆಂಡ್ ಆಫ್ ಭಗತ್ ಸಿಂಗ್’ ಹೀಗೆ ಅನೇಕ ಚಿತ್ರಗಳನ್ನು ನೀಡಿದ ಬಾಲಿವುಡ್​ ಖ್ಯಾತ ನಿರ್ದೇಶಕ ರಾಜ್‍ಕುಮಾರ್ ಸಂತೋಷಿ (Rajkumar Santoshi) ಅವರು ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ನಟ ಶಾಹಿದ್ ಕಪೂರ್ ಮತ್ತು ಇಲಿಯಾನಾ ಡಿಕ್ರೂಜ್​ ನಟನೆಯ ‘ಫಟಾ ಪೋಸ್ಟರ್ ನಿಕ್ಲಾ ಹೀರೋ’ ಅವರ ಕೊನೆಯ ನಿರ್ದೇಶನದ ಚಿತ್ರ. ಸತತ ಒಂಬತ್ತು ವರ್ಷಗಳ ದೀರ್ಘ ವಿರಾಮದ ನಂತರ ಮಹಾತ್ಮ ಗಾಂಧಿ ಮತ್ತು ನಾಥೂರಾಮ್​ ಗೋಡ್ಸೆ ಕುರಿತಾದ ಕಥೆಯನ್ನು ಹೇಳಲು ರಾಜ್‍ಕುಮಾರ್ ಸಂತೋಷಿ ಬರುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ಟೈಟಲ್​​ ರಿವೀಲ್ ಮಾಡಿದ್ದು, ಚಿತ್ರಕ್ಕೆ ‘ಗಾಂಧಿ ಗೋಡ್ಸೆ ಏಕ್ ಯುದ್ಧ್’ (Gandhi Godse Ek Yudh) ಎಂದು ಹೆಸರಿಡಲಾಗಿದ್ದು, 2023ರ ಜನವರಿ 26ರಂದು ತೆರೆಗೆ ಬರುತ್ತಿದೆ. ಇದಕ್ಕೂ ಮುಂಚೆ ಅಂದರೆ 2023ರ ಜನವರಿ 25ರಂದು ಶಾರುಖ್​ ಖಾನ್ ನಟನೆಯ ‘ಪಠಾಣ್’ ಚಿತ್ರ ಕೂಡ ಬಿಡುಗಡೆಯಾಗುತ್ತಿದ್ದು, ಎರಡು ಚಿತ್ರಗಳ ಮಧ್ಯೆ ಬಾಕ್ಸ್​ ಆಫೀಸ್​ನಲ್ಲಿ ವಾರ್ ನಡೆಯಲಿದೆಯಾ ಕಾಯ್ದು ನೋಡಬೇಕಿದೆ.

ಇದನ್ನೂ ಓದಿ: Besharam Rang: ಕೇಸರಿ ಬಿಕಿನಿ ವಿವಾದ: `ಪಠಾಣ್’ ನಟಿ ದೀಪಿಕಾ ಪಡುಕೋಣೆ ಪರ ನಿಂತ ರಮ್ಯಾ

ರಾಜ್‌ಕುಮಾರ್ ಸಂತೋಷಿ ಸೇರಿದಂತೆ ಇಡೀ ಚಿತ್ರತಂಡ ತಮ್ಮ ಚಿತ್ರದ ಟೈಟಲ್​ ಘೋಷಿಸಲು ಇತ್ತೀಚೆಗೆ ವಿಡಿಯೋ ಒಂದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದು ಎಲ್ಲೆಡೆ ವೈರಲ್​ ಕೂಡ ಆಗಿದೆ. ಆಸ್ಕರ್ ಮತ್ತು ಗ್ರ್ಯಾಮಿ ಪ್ರಶಸ್ತಿ ವಿಜೇತ ಎ.ಆರ್ ರೆಹಮಾನ್​ ಸಂಗೀತ ಸಂಯೋಜನೆ ಮಾಡಿದ್ದಾರೆ.

‘ಗಾಂಧಿ ಗೋಡ್ಸೆ ಏಕ್ ಯುದ್ಧ್’ ಚಿತ್ರವನ್ನು ರಾಜ್‌ಕುಮಾರ್ ಸಂತೋಷಿ ನಿರ್ದೇಶಿಸುತ್ತಿದ್ದು, ಸಂತೋಷಿ ಪ್ರೊಡಕ್ಷನ್ಸ್ ಎಲ್‌ಎಲ್‌ಪಿಯ ಮನಿಲಾ ಸಂತೋಷಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಯಾರೆಲ್ಲ ನಟಿಸಿದ್ದಾರೆ ಎಂಬುದು ಮಾತ್ರ ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ‘ಗಾಂಧಿ ಗೋಡ್ಸೆ ಏಕ್ ಯುದ್ಧ್’ ಗಣರಾಜ್ಯೋತ್ಸವ ಅಂದರೆ ಜನವರಿ 26, 2023 ರಂದು ಚಿತ್ರ ತೆರೆಗೆ ಬರಲಿದೆ.

ಇದನ್ನೂ ಓದಿ: ನಟಿ ಶೃತಿ ಹರಿಹರನ್ ಕೇಸ್: ಪ್ರಶಾಂತ್ ಸಂಬರಗಿಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್

‘ಪಠಾಣ್’ ಮತ್ತು ‘ಗಾಂಧಿ ಗೋಡ್ಸೆ ಏಕ್ ಯುದ್ಧ್’ ಒಂದೇ ದಿನ ರಿಲೀಸ್

​​ನಿರ್ದೇಶಕ ರಾಜ್‍ಕುಮಾರ್ ಸಂತೋಷಿ ಅವರು 9 ವರ್ಷಗಳ ಬಳಿಕ ಮತ್ತೆ ನಿರ್ದೇಶಕ್ಕೆ ಇಳಿದರೆ, ಇತ್ತ ಕಡೆ ನಟ ಶಾರುಖ್​ ಖಾನ್​ 4 ವರ್ಷಗಳ ಬಳಿಕ ತೆರೆಗೆ ಬರಲು ಸಿದ್ಧರಾಗಿದ್ದಾರೆ. ‘ಗಾಂಧಿ ಗೋಡ್ಸೆ ಏಕ್ ಯುದ್ಧ್’ 2023ರ ಜನವರಿ 26ರಂದು ತೆರೆಗೆ ಬರಲು ಸಜ್ಜಾಗಿದ್ದರೆ, ‘ಪಠಾಣ್’ ಚಿತ್ರ 2023ರ ಜನವರಿ 25ರಂದು ಬಿಡುಗಡೆ ಆಗಲಿದೆ. ಕೇವಲ ಒಂದೇ ಒಂದು ದಿನದ ಅಂತರದಲ್ಲಿ ಎರಡು ಚಿತ್ರಗಳು ತೆರೆಗೆ ಬರುತ್ತಿದ್ದು, ಬಾಕ್ಸ್​ ಆಫೀಸ್​ನಲ್ಲಿ ವಾರ್​ ಉಂಟಾಗಲಿದೆ ಎಂದು ಬಾಲಿವುಡ್​ ಅಂಗಳದಲ್ಲಿ ಚರ್ಚೆ ನಡೆಯುತ್ತಿದೆ. ಸದ್ಯ ಎರಡು ಚಿತ್ರಗಳು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿವೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:58 pm, Fri, 16 December 22