Besharam Rang: ಕೇಸರಿ ಬಿಕಿನಿ ವಿವಾದ: `ಪಠಾಣ್’ ನಟಿ ದೀಪಿಕಾ ಪಡುಕೋಣೆ ಪರ ನಿಂತ ರಮ್ಯಾ

ರಮ್ಯಾ ಅವರು ಸದ್ಯ ಬಹಳ ಚರ್ಚೆಗೆ ಗ್ರಾಸವಾಗಿರುವ ಶಾರುಖ್ ಖಾನ್​ ನಟನೆಯ 'ಪಠಾಣ್' ಚಿತ್ರದ​ ‘ಬೇಷರಂ ರಂಗ್​..’ ಹಾಡು ಮತ್ತು ನಟಿ ದೀಪಿಕಾ ಪಡುಕೋಣೆ ಧರಿಸಿರುವ ಬಟ್ಟೆ ಕುರಿತಾಗಿ ಅವರು ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.

Besharam Rang: ಕೇಸರಿ ಬಿಕಿನಿ ವಿವಾದ: `ಪಠಾಣ್’ ನಟಿ ದೀಪಿಕಾ ಪಡುಕೋಣೆ ಪರ ನಿಂತ ರಮ್ಯಾ
ರಮ್ಯಾ, ದೀಪಿಕಾ ಪಡುಕೋಣೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 16, 2022 | 8:18 PM

ನಟ ಶಾರುಖ್ ಖಾನ್​ ಸತತ 4 ವರ್ಷಗಳ ಬಳಿಕ ‘ಪಠಾಣ್’ (Pathaan) ಚಿತ್ರದ ಮೂಲಕ ತೆರೆಗೆ ಬರಲು ಸಜ್ಜಾಗಿದ್ದಾರೆ. ಹೀಗಾಗಿ ಬಾಲಿವುಡ್​ ಅಂಗಳದಲ್ಲಿ ಮತ್ತು ಶಾರುಖ್ ಖಾನ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ‘ಪಠಾಣ್’​ ಚಿತ್ರದ ಮೊದಲ ಹಾಡು ‘ಬೇಷರಂ ರಂಗ್​..’ (Besharam Rang) ಡಿ. 12ರಂದು ಬಿಡುಗಡೆಯಾಗಿದೆ. ನಟಿ ದೀಪಿಕಾ ಪಡುಕೋಣೆ ಮೈ ಚಳಿ ಬಿಟ್ಟು ಹೆಜ್ಜೆ ಹಾಕಿದ್ದಾರೆ. ಇಬ್ಬರ ಕೆಮಿಸ್ಟ್ರಿಯನ್ನು ಕೆಲವರು ಮೆಚ್ಚಿಕೊಂಡಿದ್ದಾರೆ. ಆದರೆ ಈ ಹಾಡು ಬಿಡುಗಡೆಯಾಗುತ್ತಿದಂತೆ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ. ಎಲ್ಲದರಲ್ಲಿಯೂ ತಪ್ಪು ಹುಡುಕುವ ಕೆಲ ನೆಟ್ಟಿಗರು ಮಾತ್ರ ‘ಬೇಷರಂ ರಂಗ್​..’ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣದ ಬಿಕಿನಿಯನ್ನು ಧರಿಸಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಟ ಶಾರುಖ್ ಖಾನ್ ಕೂಡ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಸ್ಯಾಂಡಲ್​ವುಡ್​ ಕ್ವೀನ್​ ನಟಿ ರಮ್ಯಾ (Ramya Divya Spandana) ಕೂಡ ಈ ಕುರಿತಾಗಿ ಟ್ವೀಟ್​ ಮಾಡಿದ್ದಾರೆ.

ನಟಿ ರಮ್ಯಾ ಅವರು ಸದ್ಯ ಬಹಳ ಚರ್ಚೆಗೆ ಗ್ರಾಸವಾಗಿರುವ ಶಾರುಖ್ ಖಾನ್​ ನಟನೆಯ ‘ಪಠಾಣ್’ ಚಿತ್ರದ​ ‘ಬೇಷರಂ ರಂಗ್​..’ ಹಾಡು ಮತ್ತು ನಟಿ ದೀಪಿಕಾ ಪಡುಕೋಣೆ ಧರಿಸಿರುವ ಬಟ್ಟೆ ಕುರಿತಾಗಿ ಅವರು ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ. ‘ಹೆಣ್ಣುಮಕ್ಕಳು ಸದಾ ಒಂದಿಲ್ಲೊಂದು ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಸಮಂತಾ ತನ್ನ ವಿಚ್ಛೇದನಕ್ಕಾಗಿ, ಸಾಯಿ ಪಲ್ಲವಿ ಅವರ ಅಭಿಪ್ರಾಯಕ್ಕಾಗಿ, ರಶ್ಮಿಕಾ ಮಂದಣ್ಣ ಅವರ ಬ್ರೇಕಪ್​ನಿಂದ ಮತ್ತು ಈಗ ದೀಪಿಕಾ ಪಡುಕೋಣೆ ಅವರ ಬಟ್ಟೆಯಿಂದ, ಹೀಗೆ ಇತರೆ ಅನೇಕ ಮಹಿಳೆಯರನ್ನು ಎಲ್ಲದಕ್ಕೂ ಟ್ರೋಲ್ ಮಾಡಲಾಗುತ್ತಿದೆ. ಸ್ವಾತಂತ್ರ್ಯ ನಮ್ಮ ಮೂಲಭೂತ ಹಕ್ಕು. ಮಹಿಳೆಯರು ದುರ್ಗೆಯ ಮೂರ್ತರೂಪವಾಗಿದ್ದಾರೆ. ಸ್ತ್ರೀ ದ್ವೇಷವು ನಾವು ಹೋರಾಡಬೇಕಾದ ದುಷ್ಟತನವಾಗಿದೆ’ ಎಂದು ನಟಿ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಎಲ್ಲೆಡೆ ‘ಪಠಾಣ್’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಧರಿಸಿರುವ ಕೇಸರಿ ಬಣ್ಣದ ಬಟ್ಟೆ ಬಗ್ಗೆ ಪ್ರತಿಭಟನೆಗಳು, ವಿರೋಧಗಳು ವ್ಯಕ್ತವಾಗುತ್ತಿದ್ದು ರಮ್ಯಾ ಕೂಡ ರಿಯಾಕ್ಟ್ ಮಾಡಿದ್ದು, ಬಾರಿ ವೈರಲ್​ ಆಗುತ್ತಿದೆ. ರಮ್ಯಾ ಅವರು ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ಸದ್ಯ ತಮ್ಮದೇ ನಿರ್ಮಾಣ ಸಂಸ್ಥೆ ಮೂಲಕ ಮತ್ತೆ ಸ್ಯಾಂಡಲ್​ವುಡ್​ಗೆ ಕಮ್​ ಬ್ಯಾಕ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: Prakash Raj: ‘ಬೇಷರಂ ರಂಗ್​’ ವಿವಾದ; ‘ಇದನ್ನೆಲ್ಲ ಎಲ್ಲಿಯವರೆಗೆ ಸಹಿಸಬೇಕು’ ಅಂತ ಪ್ರಶ್ನೆ ಮಾಡಿದ ಪ್ರಕಾಶ್​ ರಾಜ್​

ಅವರ ನಿರ್ಮಾಣದಲ್ಲಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ಮೂಡಿಬರುತ್ತಿದ್ದು,  ರಾಜ್​ ಬಿ. ಶೆಟ್ಟಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಸಿರಿ ರವಿಕುಮಾರ್​ ಅವರು ನಾಯಕಿ ಆಗಿದ್ದಾರೆ. ಈಗಾಗಲೇ ಈ ಚಿತ್ರದ ಶೂಟಿಂಗ್ ಕೂಡ​ ಮುಗಿದಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಸತತ 33 ಗಂಟೆ 33 ನಿಮಿಷ ಹನುಮಾನ್ ಚಾಲಿಸ್ ಪಾರಾಯಣ: ಗಿನ್ನಿಸ್​ ದಾಖಲೆ
ಸತತ 33 ಗಂಟೆ 33 ನಿಮಿಷ ಹನುಮಾನ್ ಚಾಲಿಸ್ ಪಾರಾಯಣ: ಗಿನ್ನಿಸ್​ ದಾಖಲೆ
ನಟ ದರ್ಶನ್ 45 ದಿನಗಳಿಂದ ಹೊರಗಿದ್ದರೂ ಭೇಟಿಯ ಪ್ರಯತ್ನ ಮಾಡಿಲ್ಲ
ನಟ ದರ್ಶನ್ 45 ದಿನಗಳಿಂದ ಹೊರಗಿದ್ದರೂ ಭೇಟಿಯ ಪ್ರಯತ್ನ ಮಾಡಿಲ್ಲ
ಗದಗ: ಗೃಹಲಕ್ಷ್ಮಿ ಹಣದಿಂದ ಬೋರ್​ವೆಲ್ ಕೊರೆಸಿದ ಅತ್ತೆ, ಸೊಸೆ!
ಗದಗ: ಗೃಹಲಕ್ಷ್ಮಿ ಹಣದಿಂದ ಬೋರ್​ವೆಲ್ ಕೊರೆಸಿದ ಅತ್ತೆ, ಸೊಸೆ!
ಇಂಥ ಎಫ್​ಐಆರ್​ಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಲ್ಲ: ಶೆಟ್ಟರ್
ಇಂಥ ಎಫ್​ಐಆರ್​ಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಲ್ಲ: ಶೆಟ್ಟರ್
ಪತ್ನಿ ಮತ್ತು ಮಕ್ಕಳು ಓಡಿ ಬಂದು ಅರ್ಜುನ್​ರನ್ನು ತಬ್ಬಿಕೊಂಡರು!
ಪತ್ನಿ ಮತ್ತು ಮಕ್ಕಳು ಓಡಿ ಬಂದು ಅರ್ಜುನ್​ರನ್ನು ತಬ್ಬಿಕೊಂಡರು!
ಚಂಚಲಗೂಡ ಜೈಲಿನಿಂದ ಬಿಡುಗಡೆ ಆಗಿ ಮನೆಯತ್ತ ಹೊರಟ ಅಲ್ಲು ಅರ್ಜುನ್
ಚಂಚಲಗೂಡ ಜೈಲಿನಿಂದ ಬಿಡುಗಡೆ ಆಗಿ ಮನೆಯತ್ತ ಹೊರಟ ಅಲ್ಲು ಅರ್ಜುನ್
ಮೈಸೂರು ಜಿಲ್ಲೆಯಲ್ಲಿ 13 ವರ್ಷಗಳ ನಂತರ ತೆರೆದ ದೇಗುಲದ ಬಾಗಿಲು
ಮೈಸೂರು ಜಿಲ್ಲೆಯಲ್ಲಿ 13 ವರ್ಷಗಳ ನಂತರ ತೆರೆದ ದೇಗುಲದ ಬಾಗಿಲು