ಪವನ್ ಕಲ್ಯಾಣ್ ವಿರುದ್ಧ ದೂರು: ಬಂಧನ ಸಾಧ್ಯತೆ

|

Updated on: Jul 13, 2023 | 4:23 PM

Pawan Kalyan: ಆಂಧ್ರ ಪ್ರದೇಶದ ಗ್ರಾಮ ಸ್ವಯಂ ಸೇವಕರ ಬಗ್ಗೆ ನೀಡಿದ ಹೇಳಿಕೆಯ ವಿರುದ್ಧ ನಟ ಪವನ್ ಕಲ್ಯಾಣ್ ವಿರುದ್ಧ ದೂರು ದಾಖಲಾಗಿದ್ದು, ಬಂಧನ ಭೀತಿ ಎದುರಾಗಿದೆ.

ಪವನ್ ಕಲ್ಯಾಣ್ ವಿರುದ್ಧ ದೂರು: ಬಂಧನ ಸಾಧ್ಯತೆ
ಪವನ್ ಕಲ್ಯಾಣ್
Follow us on

ನಟ ಪವನ್ ಕಲ್ಯಾಣ್​ರ (Pawan Kalyan) ವಾರಾಹಿ ಯಾತ್ರೆ (Varahi) ಆಂಧ್ರ ಪ್ರದೇಶ ರಾಜಕೀಯದಲ್ಲಿ ಸಣ್ಣ ಮಟ್ಟಿಗಿನ ಸಂಚಲನ ಸೃಷ್ಟಿಸಿದೆ. ವಾರಾಹಿ ಯಾತ್ರೆಯ ಎರಡನೇ ಹಂತವನ್ನು ಇತ್ತೀಚೆಗಷ್ಟೆ ಪ್ರಾರಂಭ ಮಾಡಿರುವ ಪವನ್ ಕಲ್ಯಾಣ್, ಆಂಧ್ರದ ಆಡಳಿತ ಪಕ್ಷದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸುತ್ತಿದ್ದಾರೆ. ವಾರಾಹಿ ಯಾತ್ರೆಯನ್ನು ಮೊದಲಿಗೆ ಅಷ್ಟೇನೂ ಗಂಭೀರವಾಗಿ ಪರಿಗಣಿಸದಿದ್ದ ಜಗನ್ ಸರ್ಕಾರ, ಪವನ್​ ಬಗ್ಗೆ ಜನಾಭಿಪ್ರಾಯ ಬಲಗೊಳ್ಳುತ್ತಿರುವುದನ್ನು ಗಮನಿಸಿ ಧಮನಿಸಲು ಮುಂದಾದಂತಿದೆ. ಇದರ ಭಾಗವಾಗಿಯೇ ಪವನ್ ಕಲ್ಯಾಣ್ ಅನ್ನು ಬಂಧಿಸಲು ಆಂಧ್ರ ಪೊಲೀಸರು ಸಿದ್ಧವಾಗಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.

ವಾರಾಹಿ ಯಾತ್ರೆಯ ಎರಡನೇ ಹಂತದಲ್ಲಿ ಜಗನ್ ಸರ್ಕಾರದಿಂದ ನೇಮಿಸಲಾಗಿರುವ ಗ್ರಾಮ ಸ್ವಯಂ ಸೇವಕ ವ್ಯವಸ್ಥೆ ಬಗ್ಗೆ ತೀವ್ರ ಟೀಕಾಪ್ರವಾಹರವನ್ನು ಪವನ್ ಕಲ್ಯಾಣ್ ಮಾಡುತ್ತಿದ್ದು, ಗ್ರಾಮ ಸ್ವಯಂ ಸೇವಕರನ್ನು ಬಳಸಿಕೊಂಡು ಜಗನ್ ಸರ್ಕಾರವು ಆಂಧ್ರದ ಜನರ ಮಾಹಿತಿ ಕದ್ದು ಖಾಸಗಿ ಸಂಸ್ಥೆಗೆ ಮಾರುತ್ತಿದೆ ಎಂದಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾನವ ಕಳ್ಳಸಾಗಣೆಗೆ ಗ್ರಾಮ ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ. ಆಂಧ್ರಪ್ರದೇಶದಲ್ಲಿ ಕಳೆದ ಕೆಲ ವರ್ಷಗಳಲ್ಲಿ 15 ಸಾವಿರ ಮಹಿಳೆಯರು ಕಾಣೆಯಾಗಿದ್ದಾರೆ ಎಂದಿದ್ದರು.

ಇದನ್ನೂ ಓದಿ:ಪವನ್ ಕಲ್ಯಾಣ್ ವಿರುದ್ಧ ಪ್ರತಿಭಟನೆ, ಮಹಿಳಾ ಆಯೋಗದಿಂದ ನೊಟೀಸ್: ಆ ಹೇಳಿಕೆಯಿಂದಲೇ ಸಮಸ್ಯೆ

ಪವನ್​ರ ಹೇಳಿಕೆ ವಿರೋಧಿಸಿ ಗ್ರಾಮ ಸ್ವಯಂ ಸೇವಕರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದ್ದರು. ಅದರ ಬೆನ್ನಲ್ಲೆ ಗ್ರಾಮ ಸ್ವಯಂಸೇವಕ ದಿಗಮಂಟಿ ಸುರೇಶ್ ಎಂಬುವರು ವಿಜಯವಾಡದ ಕೃಷ್ಣಲಂಕ ಪೊಲೀಸ್ ಠಾಣೆಯಲ್ಲಿ ಪವನ್ ಕಲ್ಯಾಣ್ ವಿರುದ್ಧ ಕೇಸು ದಾಖಲಿಸಿದ್ದು, ಪೊಲೀಸರು ಐಪಿಸಿ ಸೆಕ್ಷನ್ 153, 153ಎ, 505 (2) ಅಡಿ ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಪವನ್ ಕಲ್ಯಾಣ್ ಅನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ತಮ್ಮ ವಿರುದ್ಧ ಗ್ರಾಮ ಸ್ವಯಂ ಸೇವಕರು ಪ್ರತಿಭಟನೆ ನಡೆಸಿದ ಬಳಿಕ ಮತ್ತೊಂದು ಬಹಿರಂಗ ಸಭೆಯಲ್ಲಿ ಈ ಬಗ್ಗೆ ಇನ್ನಷ್ಟು ವಿಸ್ತಾರವಾಗಿ ಮಾತನಾಡಿರುವ ಪವನ್ ಕಲ್ಯಾಣ್, ”ಜಗನ್ ತಿಂಗಳಿಗೆ ಕೇವಲ ಐದು ಸಾವಿರ ನೀಡಿ ರಾಜ್ಯದ ಎಲ್ಲ ಜನರ ಖಾಸಗಿ ಮಾಹಿತಿ ಕದಿಯುತ್ತಿದ್ದಾನೆ. ತಿಂಗಳಿಗೆ ಐದು ಸಾವಿರ ಪಡೆಯುತ್ತಿರುವವರನ್ನು ಸ್ವಯಂ ಸೇವಕರು ಎಂದು ಹೇಗೆ ಕರೆಯುವುದು? ಎಂದು ಸಹ ಪವನ್ ಪ್ರಶ್ನಿಸಿದ್ದು, ಅದರ ಜೊತೆಗೆ ಗ್ರಾಮ ಸ್ವಯಂ ಸೇವಕರ ಕುರಿತಾಗಿ ಹೈಕೋರ್ಟ್ ನ್ಯಾಯಮೂರ್ತಿಗಳು ಎತ್ತಿರುವ ಪ್ರಶ್ನೆಗಳನ್ನು ಬಹಿರಂಗ ಸಭೆಯನ್ನು ಓದಿ ಹೇಳಿದ್ದಾರೆ.

ಜಗನ್, ಗ್ರಾಮ ಸ್ವಯಂ ಸೇವಕರನ್ನು ಬಳಸಿಕೊಂಡು ರಾಜ್ಯದ ಜನರ ಖಾಸಗಿ ಮಾಹಿತಿಯನ್ನು ಕದ್ದು ಎಫ್​ಸಿಒ ಹೆಸರಿನ ಪ್ರೈವೇಟ್ ಸಂಸ್ಥೆಗೆ ಮಾರಿದ್ದಾರೆ. ಆ ಸಂಸ್ಥೆಯು ಹೈದರಾಬಾದ್​ನಲ್ಲಿ ಕಚೇರಿ ತೆರೆದು ಆಂಧ್ರದ ಎಲ್ಲ ಜನರ ಮಾಹಿತಿಯನ್ನು ಅಲ್ಲಿ ಕ್ರೂಢೀಕರಿಸಿಕೊಂಡಿದೆ ಎಂದಿದ್ದಾರೆ. ಒಂದೊಮ್ಮೆ ಯಾರಿಗಾದರೂ ಗ್ರಾಮ ಸ್ವಯಂ ಸೇವಕರಿಂದ ಸಮಸ್ಯೆ ಆಗಿದ್ದರೆ ಅಂಥಹವರಿಗೆ ಜನಸೇನಾ ಪಕ್ಷವು ಸಹಾಯ ಮಾಡಲಿದೆ” ಎಂದಿದ್ದಾರೆ ಪವನ್ ಕಲ್ಯಾಣ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ