AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವನ್ ಕಲ್ಯಾಣ್​ಗಾಗಿ ಮಾಡಿದ ಕತೆ ರಾಮ್ ಚರಣ್ ಪಾಲಾಗಿದ್ದು ಹೇಗೆ? ನಿರ್ಮಾಪಕನ ವಿರುದ್ಧ ಪವನ್ ಅಭಿಮಾನಿಗಳು ಕಿಡಿ

Pawan Kalyan: ಪವನ್ ಕಲ್ಯಾಣ್ ಪಾಲಾಗಬೇಕಿದ್ದ ಸಿನಿಮಾವನ್ನು ರಾಮ್ ಚರಣ್​ಗೆ ಕೊಡಿಸಿದ್ದಾಗಿ ನಿರ್ಮಾಪಕ ಹೇಳಿಕೊಂಡಿದ್ದಾನೆ.

ಪವನ್ ಕಲ್ಯಾಣ್​ಗಾಗಿ ಮಾಡಿದ ಕತೆ ರಾಮ್ ಚರಣ್ ಪಾಲಾಗಿದ್ದು ಹೇಗೆ? ನಿರ್ಮಾಪಕನ ವಿರುದ್ಧ ಪವನ್ ಅಭಿಮಾನಿಗಳು ಕಿಡಿ
ಪವನ್-ರಾಮ್
Follow us
ಮಂಜುನಾಥ ಸಿ.
|

Updated on: Jul 05, 2023 | 8:12 PM

ರಾಜಮೌಳಿ (Rajamouli) , ಶಂಕರ್ (Shankar), ಮಣಿರತ್ನಂ, ತ್ರಿವಿಕ್ರಂ ಹೀಗೆ ಕೆಲವು ಟಾಪ್ ನಿರ್ದೇಶಕರು ತೆಲುಗು, ತಮಿಳು ಚಿತ್ರರಂಗದಲ್ಲಿದ್ದಾರೆ. ಬಹುತೇಕ ಸ್ಟಾರ್ ನಟರು ಈ ನಿರ್ದೇಶಕರೊಟ್ಟಿಗೆ ಕೆಲಸ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಎಲ್ಲ ಸ್ಟಾರ್ ನಟರಿಗೂ ಇವರೊಟ್ಟಿಗೆ ಕೆಲಸ ಮಾಡುವ ಅವಕಾಶ ಪ್ರಾಪ್ತವಾಗುತ್ತಿಲ್ಲ. ಆದರೆ ಟಾಪ್ ನಿರ್ದೇಶಕ ಒಬ್ಬ ನಟನಿಗಾಗಿ ಬರೆದ ಕತೆಯನ್ನು ಯಾರೋ ಒಬ್ಬ ಬಂದು ತಪ್ಪಿಸಿ ಇನ್ನೊಬ್ಬ ನಟನಿಗೆ ಕೊಡಿಸಿದರೆ? ನಟನಿಗೆ ಹಾಗೂ ಅವನ ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರವಾಗುತ್ತದೆ. ತೆಲುಗು ಚಿತ್ರರಂಗದಲ್ಲಿ ಈಗ ಹೀಗೆಯೇ ಆಗಿದೆ.

ತಮಿಳಿನ ತಾರಾ ನಿರ್ದೇಶಕ ಶಂಕರ್ ರಾಮ್ ಚರಣ್ ಗಾಗಿ ಗೇಮ್ ಚೇಂಜರ್ (Game Changer) ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ ನಾಯಕಿ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು ಈ ವರ್ಷಾಂತ್ಯಕ್ಕೆ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ಆದರೆ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಬೇಕಿದ್ದಿದ್ದು ರಾಮ್ ಚರಣ್ ಅಲ್ಲ ಬದಲಿಗೆ ಅವರ ಚಿಕ್ಕಪ್ಪ ಪವನ್ ಕಲ್ಯಾಣ್.

ಶಂಕರ್ ಮೊದಲಿಗೆ ಕತೆ ಮಾಡಿದ್ದಿದ್ದು ಪವನ್ ಕಲ್ಯಾಣ್ ಅವರನ್ನು ಗಮನದಲ್ಲಿಟ್ಟುಕೊಂಡೆ. ಆದರೆ ಈ ಕತೆಗೆ ಪವನ್ ಬೇಡ ರಾಮ್ ಚರಣ್ ಅನ್ನು ತೆಗೆದುಕೊಳ್ಳಿ ಶಂಕರ್​ಗೆ ಸಲಹೆ ನೀಡಿದ್ದು ತೆಲುಗಿನ ನಿರ್ಮಾಪಕ ದಿಲ್ ರಾಜು. ವಾಚಾಳಿ ದಿಲ್ ರಾಜು ಈ ಬಗ್ಗೆ ಯೂಟ್ಯೂಬ್ ಚಾನೆಲ್​ ಸಂದರ್ಶನವೊಂದರಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಗೇಮ್ ಚೇಂಜರ್ ಕತೆಯನ್ನು ಶಂಕರ್ ಪವನ್​ ಕಲ್ಯಾಣ್​ಗಾಗಿ ಮಾಡಿದ್ದರು. ಕತೆ ನನ್ನ ಬಳಿ ಹೇಳಿದರು. ಈ ಸಿನಿಮಾಕ್ಕೆ ಪವನ್​ಗಿಂತಲೂ ರಾಮ್ ಚರಣ್​ಗೆ ಹೆಚ್ಚು ಸೂಕ್ತವಾಗುತ್ತದೆ ಎಂದೆ ನನ್ನ ಸಲಹೆ ಒಪ್ಪಿ ರಾಮ್ ಚರಣ್ ಅನ್ನೇ ಶಂಕರ್ ತೆಗೆದುಕೊಂಡರು ಎಂದಿದ್ದಾರೆ.

ಇದನ್ನೂ ಓದಿ:ಮದ್ಯದ ಬೆಲೆ ಇಳಿಸುವ ಭರವಸೆ ನೀಡಿದ ಪವನ್ ಕಲ್ಯಾಣ್: ಯುವಕರು ಫುಲ್ ಖುಷ್

ಆದರೆ ದಿಲ್ ರಾಜುಗೆ ಈಗ ಪವನ್ ಕಲ್ಯಾಣ್ ಅಭಿಮಾನಿಗಳು ತಪರಾಕಿ ಹಾಕುತ್ತಿದ್ದಾರೆ. ಗೇಮ್ ಚೇಂಜರ್ ಸಿನಿಮಾ ರಾಜಕೀಯದ ಕತೆಯನ್ನು ಹೊಂದಿದೆ ಎನ್ನಲಾಗುತ್ತಿದ್ದು, ಪವನ್ ಕಲ್ಯಾಣ್ ಆ ಪಾತ್ರ ಮಾಡಿದ್ದಿದ್ದರೆ ಅದ್ಭುತವಾಗಿರುತ್ತಿತ್ತು. ಒಬ್ಬರ ಪಾತ್ರವನ್ನು ತಪ್ಪಿಸಿ ತಮಗೆ ಬೇಕಾದವರಿಗೆ ದಿಲ್ ರಾಜು ಕೊಡಿಸಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ದಿಲ್ ರಾಜು ವಿರುದ್ಧ ನಿಂದನೆಯನ್ನೂ ಪವನ್ ಅಭಿಮಾನಿಗಳು ಮಾಡಿದ್ದಾರೆ.

ಅಸಲಿಗೆ ಪವನ್ ಕಲ್ಯಾಣ್ ಹಾಗೂ ದಿಲ್ ರಾಜು ಪರಸ್ಪರ ಆತ್ಮೀಯರಾಗಿಯೇ ಇದ್ದಾರೆ. ಸಿನಿಮಾಗಳಿಂದ ದೊಡ್ಡ ಬ್ರೇಕ್ ಪಡೆದಿದ್ದ ಪವನ್ ಕಲ್ಯಾಣ್ ಅನ್ನು ಮತ್ತೆ ಎಳೆತಂದಿದ್ದು ಇದೇ ದಿಲ್ ರಾಜು. ಪವನ್ ನಟನೆಯ ವಕೀಲ್ ಸಾಬ್ ಸಿನಿಮಾ ನಿರ್ಮಾಣ ಮಾಡಿದ್ದ ದಿಲ್ ರಾಜು ಭಾರಿ ಕಲೆಕ್ಷನ್ ಅನ್ನೇ ಜೇಬಿಗೆ ಇಳಿಸಿಕೊಂಡರು. ಹಲವು ಸ್ಟಾರ್​ ನಟರೊಟ್ಟಿಗೆ ದಿಲ್ ರಾಜು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇನ್ನು ಪವನ್ ಕಲ್ಯಾಣ್ ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅವರ ನಟನೆಯ ನಾಲ್ಕು ಸಿನಿಮಾಗಳು ಚಾಲ್ತಿಯಲ್ಲಿವೆ. ಹರಿಹರ ವೀರ ಮಲ್ಲು ಸಿನಿಮಾ ಬಿಡುಗಡೆಗೆ ಅಣಿಯಾಗುತ್ತಿದೆ. ಅದರ ಬಳಿಕ ಉಸ್ತಾದ್ ಭಗತ್ ಸಿಂಗ್ ಸಿನಿಮಾ ತೆರೆಗೆ ಬರಲಿದೆ. ಅದಾದ ಬಳಿಕ ಬ್ರೋ ಸಿನಿಮಾ ಬಿಡುಗಡೆ ಆಗಲಿದೆ. ಅದರ ಬಳಿಕ ಓಜಿ ಹೆಸರಿನ ಸಿನಿಮಾ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ