CCL 2024: ಸಿಸಿಎಲ್​ನಲ್ಲಿ ಕಿಚ್ಚ ಸುದೀಪ್ ತಂಡಕ್ಕೆ ಸೋಲು; ಗೆದ್ದು ಬೀಗಿದ ಬೆಂಗಾಲ್ ಟೈಗರ್ಸ್

|

Updated on: Mar 18, 2024 | 7:04 AM

ಫೆಬ್ರವರಿ 23ರಿಂದ ​ ಸಿಸಿಎಲ್​ ಪಂದ್ಯಗಳು ನಡೆದವು. ಕರ್ನಾಟಕ ಬುಲ್ಡೋಜರ್ಸ್ ತಂಡ ಉತ್ತಮವಾಗಿ ಪ್ರದರ್ಶನ ನೀಡಿತು. ಕ್ವಾಟರ್​ ಫೈನಲ್​ನಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಗೆದ್ದಿದ್ದ ಕರ್ನಾಟಕದ ತಂಡ ಫಿನಾಲೆಯಲ್ಲಿ ಅದೇ ತಂಡದ ವಿರುದ್ಧ ಸೋಲು ಕಂಡಿದೆ. ಬೆಂಗಾಲ್ ಟೈಗರ್ಸ್ ಚಾಂಪಿಯನ್ ಆಗಿದೆ.

CCL 2024: ಸಿಸಿಎಲ್​ನಲ್ಲಿ ಕಿಚ್ಚ ಸುದೀಪ್ ತಂಡಕ್ಕೆ ಸೋಲು; ಗೆದ್ದು ಬೀಗಿದ ಬೆಂಗಾಲ್ ಟೈಗರ್ಸ್
ಜಿಶ್ಶು-ಸುದೀಪ್
Follow us on

ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನ (CCL) ಫೈನಲ್ ಪಂದ್ಯ ಮಾರ್ಚ್ 18ರಂದು ನಡೆದಿದೆ. ಕರ್ನಾಟಕ ಬುಲ್ಡೋಜರ್ಸ್ ಹಾಗೂ ಬೆಂಗಾಲ್ ಟೈಗರ್ಸ್ ನಡುವಿನ ಪಂದ್ಯದಲ್ಲಿ ಕಿಚ್ಚ ಸುದೀಪ್ ತಂಡಕ್ಕೆ ಸೋಲಾಗಿದೆ. ಈ ಮೂಲಕ ಕಪ್ ಮಿಸ್ ಆಗಿದೆ. ಈ ನೋವಿನಲ್ಲೂ ಕಿಚ್ಚ ಸುದೀಪ್ ಅವರು ಮೊದಲ ಬಾರಿ ಕಪ್ ಗೆದ್ದ ಆರ್​ಸಿಬಿ ಮಹಿಳಾ ತಂಡಕ್ಕೆ ಶುಭಾಶಯ ಹೇಳಿದ್ದಾರೆ. ಬೆಂಗಾಲ್ ಟೈಗರ್ಸ್ ತಂಡದ ಕ್ಯಾಪ್ಟನ್ ಜಿಶ್ಶು ಸೇನ್​ಗುಪ್ತಾಗೆ ಎಲ್ಲ ಕಡೆಗಳಿಂದ ವಿಶ್​ಗಳು ಬರುತ್ತಿವೆ.

ಫೆಬ್ರವರಿ 23ರಿಂದ ಪ್ರತಿ ವೀಕೆಂಡ್​​ ಸಿಸಿಎಲ್​ ಪಂದ್ಯಗಳು ನಡೆದವು. ಕರ್ನಾಟಕ ಬುಲ್ಡೋಜರ್ಸ್ ತಂಡ ಉತ್ತಮವಾಗಿ ಪ್ರದರ್ಶನ ನೀಡಿತು. ಕ್ವಾಟರ್​ ಫೈನಲ್​ನಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಗೆದ್ದಿದ್ದ ಕರ್ನಾಟಕದ ತಂಡ ಫಿನಾಲೆಯಲ್ಲಿ ಅದೇ ತಂಡದ ವಿರುದ್ಧ ಸೋಲು ಕಂಡಿದೆ. ಈ ಮೂಲಕ ಬೆಂಗಾಲ್ ಟೈಗರ್ಸ್ ಸಿಸಿಎಲ್​ ಕಪ್​ನ ಮನೆಗೆ ಕೊಂಡೊಯ್ದಿದೆ.

ಸಿಸಿಎಲ್​ನಲ್ಲಿ ಹೊಸ ಫಾರ್ಮ್ಯಾಟ್ ಬಳಕೆ ಮಾಡಲಾಗಿದೆ. 10 ಓವರ್​ಗಳ ನಾಲ್ಕು ಇನ್ನಿಂಗ್ಸ್ ಇರುತ್ತದೆ. ಈ ಪೈಕಿ ಮೊದಲು ಬ್ಯಾಟ್ ಮಾಡಿದವರು 10 ಓವರ್ ಆಡಬೇಕು. ನಂತರ ಎದುರಾಳಿ ತಂಡದವರು 10 ಓವರ್ ಆಡಬೇಕು. ಆ ಬಳಿಕ ಎರಡನೇ ಇನ್ನಿಂಗ್ಸ್ ಕೂಡ ಹೀಗೆಯೇ ಇರುತ್ತದೆ. ಮೊದಲು ಬ್ಯಾಟ್ ಮಾಡಿದ ಬೆಂಗಾಲ್​ ಟೈಗರ್ಸ್ 118 ರನ್​ಗಳನ್ನು ಪೇರಿಸಿತ್ತು. ಏಳು ವಿಕೆಟ್ ನಷ್ಟಕ್ಕೆ ಕರ್ನಾಟಕ ಬುಲ್ಡೋಜರ್ಸ್ 86 ರನ್​ಗಳನ್ನು ಕಲೆ ಹಾಕಿತು.

ಇದನ್ನೂ ಓದಿ: CCL 2023: ಕರ್ನಾಟಕ ಬುಲ್ಡೋಝರ್ಸ್ ಮುಂದೆ ಮಂಡಿಯೂರಿದ ಬೆಂಗಾಲ್ ಟೈಗರ್ಸ್

32 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಬೆಂಗಾಲ್​ ಟೈಗರ್ಸ್ 4 ವಿಕೆಟ್ ನಷ್ಟಕ್ಕೆ 105 ರನ್​ ಕಲೆ ಹಾಕಿತು. ಈ ಮೂಲಕ 138 ರನ್​ಗಳ ಬೃಹತ್ ಟಾರ್ಗೆಟ್ ನೀಡಿತು. ಕರ್ನಾಟಕ ತಂಡ 10 ಒವರ್​ನಲ್ಲಿ 125 ರನ್​ ಕಲೆ ಹಾಕಿತು. ಈ ಮೂಲಕ ಬೆಂಗಾಲ್ ಟೈಗರ್ಸ್ ತಂಡ 12 ರನ್​ಗಳ ಗೆಲುವು ಕಂಡಿತು. ಒಳ್ಳೆಯ ಫೈಟ್​ ಕೊಟ್ಟು ಸೋತೆವು ಎನ್ನುವ ಖುಷಿ ಸುದೀಪ್ ಅವರಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ