ರೋಚಕತೆ ಪಡೆದುಕೊಂಡ ಸಿಸಿಎಲ್ ಫೈನಲ್; ಗೆದ್ದವರು ಯಾರು?

ಪಂಜಾಬ್ ದೇ ಶೇರ್ ತಂಡವು ಭಾನುವಾರ ನಡೆದ ಸಿಸಿಎಲ್ 2024ರ ಫೈನಲ್ ಪಂದ್ಯದಲ್ಲಿ ಚೆನ್ನೈ ರೈನೋಸ್ ತಂಡವನ್ನು ಸೋಲಿಸಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು. ಚೆನ್ನೈ ತಂಡ ರನ್ನರ್ ಅಪ್ ಆಯಿತು. ಕರ್ನಾಟಕ ಬುಲ್ಡೋಜರ್ ತಂಡ ಸೆಮಿಫೈನಲ್‌ನಲ್ಲಿ ಸೋತಿತು. ಈ ಟೂರ್ನಮೆಂಟ್‌ನಲ್ಲಿ ಕರ್ನಾಟಕದ ಡಾರ್ಲಿಂಗ್ ಕೃಷ್ಣ ಅವರು ಅತ್ಯುತ್ತಮ ಬ್ಯಾಟರ್ ಪ್ರಶಸ್ತಿಯನ್ನು ಪಡೆದರು.

ರೋಚಕತೆ ಪಡೆದುಕೊಂಡ ಸಿಸಿಎಲ್ ಫೈನಲ್; ಗೆದ್ದವರು ಯಾರು?
ಸಿಸಿಎಲ್

Updated on: Mar 03, 2025 | 7:32 AM

ಕಳೆದ ಕೆಲ ವಾರಗಳಿಂದ ಹಲವು ಹಂತಗಳಲ್ಲಿ ಸಾಗುತ್ತಿದ್ದ ಸಿಸಿಎಲ್​ನ ಫಿನಾಲೆ ಭಾನುವಾರ (ಮಾರ್ಚ್ 3) ನಡೆದಿದೆ. ಈ ಪಂದ್ಯದಲ್ಲಿ ಚೆನ್ನೈ ರೈನೋಸ್ ಹಾಗೂ ಪಂಜಾಬ್ ದೆ ಶೇರ್ ಮುಖಾಮುಖಿ ಆದವು. ಈ ವೇಳೆ ಚೆನ್ನೈ ತಂಡ ಸೋತಿದ್ದು, ಪಂಜಾಬ್ ತಂಡ ಗೆಲುವಿನ ನಗೆ ಬೀರಿದೆ. ಈ ಮೂಲಕ ಮೊದಲ ಬಾರಿಗೆ ಕಪ್​ಗೆ ಮುತ್ತಿಟ್ಟಿದೆ. ಕರ್ನಾಟಕ ಬುಲ್ಡೋಜರ್ ತಂಡ ಸೆಮಿ ಫೈನಲ್ ಹಂತದಲ್ಲೇ ಸೋಲನ್ನು ಕಂಡಿತ್ತು.

ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟ್ ಮಾಡಿದ ಚೆನ್ನೈ 89 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡಿತು. ನಂತರ ಬ್ಯಾಟ್ ಮಾಡಿದ ಪಂಜಾಬ್ 1 ವಿಕೆಟ್ ಕಳೆದುಕೊಂಡು 103 ರನ್ ಕಲೆ ಹಾಕಿತು. ಈ ಮೂಲಕ ಪಂಜಾಬ್ 14 ರನ್​ಗಳ ಮುನ್ನಡೆ ಸಾಧಿಸಿತು. ನಂತರ ಬ್ಯಾಟ್ ಬೀಸಿದ ಚೆನ್ನೈ 85 ರನ್ ಗಳಿಸಲಷ್ಟೇ ಶಕ್ಯವಾಯಿತು.


ಪಂಜಾಬ್ ತಂಡ 14 ರನ್​ಗಳ ಮುನ್ನಡೆ ಸಾಧಿಸಿದ್ದರಿಂದ 72 ರನ್​ಗಳನ್ನು  ಬಾರಿಸಿದರೆ ಪಂಜಾಬ್​ಗೆ ಗೆಲುವು ಸಿಗುತ್ತಿತ್ತು. ಇದನ್ನು ಕೇವಲ 8 ಓವರ್​​ಗಳಲ್ಲಿ ಚಚ್ಚಿ ಪಂಜಾಬ್ ಗೆಲುವಿನ ನಗೆ ಬೀರಿತು. ಈ ಮೂಲಕ 8 ವಿಕೆಟ್​ಗಳ ಗೆಲುವು ಕಂಡಿತು. ಮೊದಲ ಬಾರಿಗೆ ಕಪ್​ ಗೆದ್ದ ಖುಷಿಯನ್ನು ಪಂಜಾಬ್ ತಂಡ ಆಚರಿಸಿಕೊಂಡಿತು. ಚೆನ್ನೈ ರನ್ನರ್ ಅಪ್ ಸ್ಥಾನಕ್ಕೆ ಖುಷಿಪಟ್ಟುಕೊಂಡಿತು.

ಇದನ್ನೂ ಓದಿ: CCL 2025: 38 ಎಸೆತಗಳಲ್ಲಿ 80 ರನ್; ಮೊದಲ ಪಂದ್ಯದಲ್ಲೇ ಸುನಾಮಿ ಎಬ್ಬಿಸಿದ ಡಾರ್ಲಿಂಗ್ ಕೃಷ್ಣ

ಡಾರ್ಲಿಂಗ್ ಕೃಷ್ಣ ಅವರು ಈ ಬಾರಿ ಸಿಸಿಲ್​ನಲ್ಲಿ ಕರ್ನಾಟಕ ಪರ ಅದ್ಭುತ ಪ್ರದರ್ಶನ ನೀಡಿದರು. ಅವರಿಗೆ ‘ಬ್ಯಾಟರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಸಿಕ್ಕಿದೆ. ಈ ಅವಾರ್ಡ್ ಪಡೆದು ಅವರು ಖುಷಿಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.