‘ನೀವು ನನಗೆಷ್ಟು ದಿನದ ಫ್ರೆಂಡ್​?‘; ಶಮಂತ್​ ಬಗ್ಗೆ ಹಗುರವಾಗಿ ಮಾತನಾಡಿದ ಚಕ್ರವರ್ತಿಗೆ ಕ್ಲಾಸ್​

| Updated By: Vinay Bhat

Updated on: Jul 17, 2021 | 6:42 AM

ಈ ವಾರದ ಟಾಸ್ಕ್​ ನಡೆಯುವಾಗ ದಿವ್ಯಾ ಉರುಡುಗ ತೀವ್ರವಾಗಿ ಗಾಯಗೊಂಡಿದ್ದರು. ಓಡಿ ಬರುತ್ತಿದ್ದ ಅವರನ್ನು ಬೇರೆಡೆ ಕಳುಹಿಸುವ ಪ್ರಯತ್ನದಲ್ಲಿ ಚಕ್ರವರ್ತಿ ಚಂದ್ರಚೂಡ್​ ತಪ್ಪೊಂದನ್ನು ಮಾಡಿದ್ದರು. ದಿವ್ಯಾ ಅವರನ್ನು ತಡೆಯೋಕೆ ಹೋಗಿದ್ದು ತಪ್ಪಾಗಿತ್ತು.

‘ನೀವು ನನಗೆಷ್ಟು ದಿನದ ಫ್ರೆಂಡ್​?‘; ಶಮಂತ್​ ಬಗ್ಗೆ ಹಗುರವಾಗಿ ಮಾತನಾಡಿದ ಚಕ್ರವರ್ತಿಗೆ ಕ್ಲಾಸ್​
ಶಮಂತ್​ ಬ್ರೋ ಗೌಡ
Follow us on

ಕಳೆದ ವಾರ ರಣರಂಗವಾಗಿದ್ದ ಬಿಗ್​ ಬಾಸ್​ ಮನೆ ಈ ವಾರ ತಣ್ಣಗಾಗಿದೆ. ಎಲ್ಲರೂ ಎಲಿಮಿನೇಷ್​ನಿಂದ ತಪ್ಪಿಸಿಕೊಳ್ಳೋಕೆ ನೀಡಿದ ಟಾಸ್ಕ್​​ನಲ್ಲಿ ಬ್ಯುಸಿ ಆಗಿದ್ದರು. ಈ ಮಧ್ಯೆ, ಬಿಗ್​ ಬಾಸ್​ ಮನೆಯಲ್ಲಿ ಮತ್ತೆ ಜಗಳ ಉಂಟಾಗುವ ಲಕ್ಷಣ ಗೋಚರವಾಗಿದೆ. ಇದಕ್ಕೆ ಕಾರಣ ಚಕ್ರವರ್ತಿ ಚಂದ್ರಚೂಡ್​.

ಈ ವಾರದ ಟಾಸ್ಕ್​ ನಡೆಯುವಾಗ ದಿವ್ಯಾ ಉರುಡುಗ ತೀವ್ರವಾಗಿ ಗಾಯಗೊಂಡಿದ್ದರು. ಓಡಿ ಬರುತ್ತಿದ್ದ ಅವರನ್ನು ಬೇರೆಡೆ ಕಳುಹಿಸುವ ಪ್ರಯತ್ನದಲ್ಲಿ ಚಕ್ರವರ್ತಿ ಚಂದ್ರಚೂಡ್​ ತಪ್ಪೊಂದನ್ನು ಮಾಡಿದ್ದರು. ದಿವ್ಯಾ ಅವರನ್ನು ತಡೆಯೋಕೆ ಹೋಗಿದ್ದು ತಪ್ಪಾಗಿತ್ತು. ದಿವ್ಯಾ ಉರುಡುಗ ಕೈ ಗಾಜಿಗೆ ತಾಕಿ ರಕ್ತ ಬಂದಿತ್ತು. ಈ ವಿಚಾರದ ಬಗ್ಗೆ ಮನೆಯ ಸದಸ್ಯರಿಗೆ ಬೇಸರ ಇದೆ. ಇದನ್ನು, ಕಳಪೆ ಪಟ್ಟ ನೀಡುವ ಸಂದರ್ಭದಲ್ಲಿ ಸ್ಪರ್ಧಿಗಳು ಹೊರ ಹಾಕಿದ್ದಾರೆ.

ಚಕ್ರವರ್ತಿ ಚಂದ್ರಚೂಡ್​ ಆ ರೀತಿ ಮಾಡಬಾರದಿತ್ತು ಎನ್ನುವ ಮಾತು ಎಲ್ಲಾ ಸದಸ್ಯರಿಂದ ಕೇಳಿ ಬಂತು. ಹೀಗಾಗಿ, ಚಕ್ರವರ್ತಿಗೆ ಈ ವಾರದ ಕಳಪೆ ಪಟ್ಟ ನೀಡಲಾಯಿತು. ಕಳಪೆ ಪಟ್ಟ ಪಡೆದ ಸ್ಪರ್ಧಿ ಜೈಲಿಗೆ ಹೋಗಬೇಕು. ಮನೆ ಸದಸ್ಯರಿಗೆ ತರಕಾರಿ ಕತ್ತರಿಸಿಕೊಡಬೇಕು. ಗಂಜಿ ಊಟ ಮಾಡಿಕೊಂಡು ದಿನ ಕಳೆಯಬೇಕು.

ಚಕ್ರವರ್ತಿ ಚಂದ್ರಚೂಡ್​ ಜೈಲಿಗೆ ಹೋಗಿದ್ದಾರೆ. ಅವರು ಮನೆ ಒಳಗೆ ಹೋಗುತ್ತಿದ್ದಂತೆ ಶಮಂತ್​ ಮೇಲೆ ಕೂಗಾಟ ನಡೆಸಿದ್ದಾರೆ.  ಶಮಂತ್​ ಕೂಡ ಇದೇ ಕಾರಣ ನೀಡಿ ಚಕ್ರವರ್ತಿಯನ್ನು ಕಳಪೆ ಎಂದು ಘೋಷಣೆ ಮಾಡಿದ್ದರು. ಹೀಗಾಗಿ, ನೀನು ಯಾವ ಸ್ನೇಹಿತನ ಕತ್ತನ್ನು ಬೇಕಿದ್ರೂ ಕುಯ್ದು ಬಿಡ್ತೀಯಾ ಎಂದರು ಚಕ್ರವರ್ತಿ. ‘ನಾನು ನಿಮ್ಮ ಕತ್ತು ಕುಯ್ದ್ನಾ? ಇಲ್ಲದ್ದನ್ನೆಲ್ಲ ಹೇಳಿ ನನ್ನ ಬಗ್ಗೆ ಬೇರೆ ರೀತಿಯ ಅಭಿಪ್ರಾಯ ರೂಪಿಸಬೇಡಿ. ನೀವು ನನಗೆಷ್ಟು ದಿನದ ಫ್ರೆಂಡ್​?’ ಎಂದು ಶಮಂತ್ ಕಿರುಚಾಡಿದರು.

ಬಿಗ್​ ಬಾಸ್​ ಮನೆಯಲ್ಲಿ ಯಾರ ಜತೆಗೂ ಜಗಳ ಮಾಡಿಕೊಳ್ಳುವುದಿಲ್ಲ ಎಂದು ಚಕ್ರವರ್ತಿ ಚಂದ್ರಚೂಡ್​ ಹೇಳಿಕೊಂಡಿದ್ದರು. ಆದರೆ, ಈಗ ಅವರು ಮತ್ತೆ ಟೆಂಪರ್​ ಕಳೆದುಕೊಂಡಂತೆ ಕಾಣುತ್ತಿದೆ. ಶಮಂತ್​ ಹಾಗೂ ಚಕ್ರವರ್ತಿ ನಡುವೆ ಇಂದಿನ ಎಪಿಸೋಡ್​ನಲ್ಲಿ ಏನೆಲ್ಲ ಆಗುತ್ತದೆ ಎಂಬುದನ್ನು ನೋಡೋಕೆ ರಾತ್ರಿ 9:30ವರೆಗೆ ಕಾಯಲೇಬೇಕು.

ಇದನ್ನೂ ಓದಿ: ಬಿಗ್​ ಬಾಸ್​ನಿಂದ ರಘು ಎಲಿಮಿನೇಟ್​ ಆಗೋಕೆ ಕಾರಣವಾಯ್ತು ಈ ಒಂದು ವಿಚಾರ 

ಬಿಗ್ ಬಾಸ್ ಮನೆಯಲ್ಲಿ ಅವಘಡ; ದಿವ್ಯಾ ಉರುಡುಗ ಹೊಡೆದ ಫೋರ್ಸ್​ಗೆ ಗಾಜು ನುಚ್ಚುನೂರು, ಕೈಯಲ್ಲಿ ರಕ್ತ