ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಪ್ರಿಯಾಂಕಾ ತಿಮ್ಮೇಶ್ ಅವರು ಶಮಂತ್ ಬ್ರೋ ಗೌಡಗೆ ಊಟ ಮಾಡಿಸಿದ್ದರು. ಈ ಬೆಳವಣಿಗೆ ನಡೆದ ನಂತರ ಚಕ್ರವರ್ತಿ ಚಂದ್ರಚೂಡ್ ತುಂಬಾನೇ ಹೊಟ್ಟೆಕಿಚ್ಚು ಪಟ್ಟುಕೊಂಡಂತೆ ಕಂಡುಬಂತು. ಚಕ್ರವರ್ತಿ ನಡೆದುಕೊಂಡ ರೀತಿಗೆ ಪ್ರಿಯಾಂಕಾ ತಿಮ್ಮೇಶ್ ತುಂಬಾನೇ ಬೇಸರಗೊಂಡಿದ್ದಾರೆ. ಇನ್ನು, ಇವರಿಬ್ಬರ ಜಗಳದಲ್ಲಿ ಶಮಂತ್ ಬ್ರೋ ಗೌಡ ಅತ್ತಿದ್ದಾರೆ!
ಶಮಂತ್ಗೆ ಪ್ರಿಯಾಂಕಾ ಊಟ ಮಾಡಿಸಿದ್ದನ್ನು ಚಕ್ರವರ್ತಿ ವಿರೋಧಿಸಿದ್ದರು. ಅಲ್ಲದೆ ಎಲ್ಲರ ಎದುರಲ್ಲಿ ಈ ವಿಚಾರ ಇಟ್ಟುಕೊಂಡು ಹಂಗಿಸಿದ್ದರು. ಇದು ಪ್ರಿಯಾಂಕಾಗೆ ತೀವ್ರ ಬೇಸರ ಉಂಟು ಮಾಡಿದೆ. ಈ ವಿಚಾರವನ್ನು ಸುದೀಪ್ ಎದುರು ಹೇಳಿಕೊಂಡಿದ್ದರು. ನಂತರ ಮನೆಯಲ್ಲಿ ಈ ವಿಚಾರದ ಬಗ್ಗೆ ಪ್ರಿಯಾಂಕಾ ಹಾಗೂ ಚಕ್ರವರ್ತಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಸಿದ್ದಾರೆ.
‘ನಾನು ಏನಾದರೂ ಮಾಡುತ್ತೇನೆ. ನನ್ನ ಇಷ್ಟದಂತೆ ನಡೆದುಕೊಳ್ಳುತ್ತೇನೆ. ನನಗೆ ಹೇಗೆ ನಡೆದುಕೊಳ್ಳಬೇಕು ಎಂದು ಅವರು ಹೇಳೋದು ಬೇಡ. ಮನೆಯ ಹೊರಗೆ ನನಗೆ ಆ್ಯಟಿಟ್ಯೂಡ್ ಎಂದು ಚಕ್ರವರ್ತಿ ಬಿಂಬಿಸಿದ್ದಾರೆ. ಮನೆಯಲ್ಲಿ ಬಂದು ಈಗ ಈ ರೀತಿ ಮಾತನಾಡುತ್ತಿದ್ದಾರೆ’ ಎಂದು ಪ್ರಿಯಾಂಕಾ ಕಣ್ಣೀರು ಹಾಕಿದ್ದಾರೆ.
‘ನನ್ನ ಬಗ್ಗೆ ನಿಮಗೆ ಮಾತನಾಡೋಕೆ ಹಕ್ಕು ಕೊಟ್ಟವರು ಯಾರು? ಈ ರೀತಿ ಮಾತನಾಡಿದರೆ ಜನರು ನನ್ನ ಬಗ್ಗೆ ಏನಂದುಕೊಳ್ಳುತ್ತಾರೆ ಅನ್ನೋದನ್ನು ಯೋಚಿಸಿದ್ದೀರಾ ಎಂದು ಚಕ್ರವರ್ತಿ ಪ್ರಶ್ನಿಸಿದರು. ‘ನಾನು ಶಮಂತ್ಗೆ ಊಟವನ್ನಾದರೂ ಮಾಡಿಸ್ತೀನಿ ಮತ್ತಿನ್ನೇನಾದರೂ ಮಾಡಿಸ್ತೀನಿ. ಅದನ್ನು ಕೇಳೋಕೆ ನೀವ್ಯಾರು? ಸುಮ್ಮನೆ ನನ್ನ ತಂಟೆಗೆ ಬರಬೇಡಿ’ ಎಂದು ಪ್ರಿಯಾಂಕಾ ಸಿಟ್ಟಾದರು.
ನಂತರ ಹೊರಗೆ ಬಂದು ಪ್ರಶಾಂತ್, ಶಮಂತ್ ಕೂತು ಮಾತನಾಡುತ್ತಿದ್ದರು. ಆಗ ಚಕ್ರವರ್ತಿ ಅಲ್ಲಿಗೆ ಬಂದು, ‘ಆ ಯಮ್ಮ ಯಾಕಷ್ಟು ಡ್ರಾಮಾ ಮಾಡ್ತಾರೋ ಗೊತ್ತಿಲ್ಲ’ ಎನ್ನುವ ಮಾತನ್ನು ಹೇಳಿದರು. ಈ ಜಗಳದ ನಡುವೆ ಸಿಲುಕಿದ್ದ ಶಮಂತ್ ಅಳೋಕೆ ಆರಂಭಿಸದರು. ಈ ವೇಳೆ ಚಕ್ರವರ್ತಿಯನ್ನು ಪ್ರಶಾಂತ್ ಸಮಾಧಾನ ಪಡಿಸೋಕೆ ಪ್ರಯತ್ನಿಸಿದರು.
ಇದನ್ನೂ ಓದಿ: ಸುದೀಪ್ ಹೇಳಿದ ಬುದ್ಧಿವಾದ ಮರೆತ ಬಿಗ್ ಬಾಸ್ ಸ್ಪರ್ಧಿಗಳು; ಈ ವಾರವೂ ಇದೆ ಕಿಚ್ಚನ ಕ್ಲಾಸ್?
ಬಿಗ್ ಬಾಸ್ ಮನೆಯಿಂದ ನಿಧಿ ಸುಬ್ಬಯ್ಯ ಎಲಿಮಿನೇಟ್ ಆಗೋಕೆ ಆ ಒಂದು ಮಾತು ಕಾರಣವಾಯ್ತು