ಕಿರಣ್ ರಾಜ್ ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರು ನಟಿಸುತ್ತಿರುವ ‘ಕನ್ನಡತಿ’ ಧಾರಾವಾಹಿಯಲ್ಲಿ ಅವರ ಪಾತ್ರ ವೀಕ್ಷಕರಿಗೆ ಇಷ್ಟವಾಗಿದೆ. ಈಗ ‘ಬಹದ್ದೂರ್ ಗಂಡು’ ಚಿತ್ರದಲ್ಲಿ ಅವರು ಸ್ಟೈಲ್, ಲುಕ್ ಸಂಪೂರ್ಣ ಭಿನ್ನವಾಗಿದೆ. ಅವರ ಮೈಕಟ್ಟು ನೋಡಿ ಅನೇಕರು ಫಿದಾ ಆಗಿದ್ದಾರೆ. ಇನ್ನು, ಅವರ ಆ್ಯಕ್ಷನ್ ದೃಶ್ಯಗಳನ್ನು ಕಣ್ತುಂಬಿಕೊಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ನಲ್ಲಿ ಬರೋ ಫೈಟ್ಗೋಸ್ಕರ್ ಕಿರಣ್ ರಾಜ್ ನಾಲ್ಕು ತಿಂಗಳಕಾಲ ಸತತವಾಗಿ ವರ್ಕೌಟ್ ಮಾಡಿದ್ದಾರೆ. ‘ರಾತ್ರಿ 12ರಿಂದ ಮುಂಜಾನೆ 4:30ವರೆಗೆ ನಾನು ನಿರಂತರವಾಗಿ 4 ತಿಂಗಳು ವರ್ಕೌಟ್ ಮಾಡಿದ್ದೇನೆ. ಅದು ಸಿನಿಮಾದಲ್ಲಿ ಬರುವ ಕ್ಲೈಮ್ಯಾಕ್ಸ್ ದೃಶ್ಯಕ್ಕೋಸ್ಕರ. ಬೆಳಗ್ಗೆ ಧಾರಾವಾಹಿ ಶೂಟಿಂಗ್, ಚ್ಯಾರಿಟಿ ಕೆಲಸಗಳು ಇರುತ್ತಿದ್ದವು. ಹೀಗಾಗಿ, ರಾತ್ರಿ ವರ್ಕೌಟ್ ಮಾಡುತ್ತಿದ್ದೆ’ ಎಂದು ತಮ್ಮ ಶ್ರಮದ ಬಗ್ಗೆ ಕಿರಣ್ ರಾಜ್ ಹೇಳಿಕೊಂಡಿದ್ದಾರೆ.
‘ಈ ಚಿತ್ರದಲ್ಲಿ ನನಗೆ ಎರಡು ಶೇಡ್ ಇದೆ. ‘ಬಹದ್ದೂರ್ ಗಂಡು’ ಎಂದು ಸಿನಿಮಾ ಟೈಟಲ್ ಇಟ್ಟಿರೋದ್ರಿಂದ ಒಂದು ದೊಡ್ಡ ಜವಾಬ್ದಾರಿ ನಮಗಿದೆ. ಸಿನಿಮಾದಲ್ಲಿ ಒಂದು ಸಂಸ್ಕೃತಿ ಬಗ್ಗೆ ನಾವು ಹೇಳುತ್ತಿದ್ದೇವೆ’ ಎನ್ನುತ್ತಾರೆ ಕಿರಣ್ ರಾಜ್.
ಪ್ರಸಿದ್ಧ್ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಯಶಾ ಶಿವಕುಮಾರ್ ಚಿತ್ರದ ನಾಯಕಿ. ಕಿಟ್ಟಿ ಕೌಶಿಕ್ ಛಾಯಾಗ್ರಹಣ ಈ ಸಿನಿಮಾಗಿದೆ. ಪ್ರಸಿದ್ಧ್ ಸಿನಿಮಾಸ್ ಹಾಗೂ ರಮೇಶ್ ರೆಡ್ಡಿ ಬಹದ್ದೂರ್ ಗಂಡು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ಇನ್ನು, ಕಿರಣ್ ರಾಜ್ ಜನ್ಮದಿನದ ಅಂಗವಾಗಿ ಅವರಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಾಯ ಮಳೆ ಸುರಿಸಿದ್ದಾರೆ. ಕನ್ನಡತಿ ಚಿತ್ರದ ಮುಖ್ಯಪಾತ್ರಧಾರಿ ರಂಜನಿ ರಾಘವನ್ ಅವರು ಕಿರಣ್ ರಾಜ್ ಅವರಿಗೆ ಬರ್ತ್ಡೇ ವಿಷ್ ಮಾಡಿದ್ದಾರೆ. ಕಿರಣ್ ಕುಟುಂಬದವರ ಜತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಕಿರಣ್ ರಾಜ್ ಕೂಡ ಕೊವಿಡ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ತೊಂದರೆ ಅನುಭವಿಸುತ್ತಿರುವವರಿಗೆ ಅವರು ಸಹಾಯ ಮಾಡುತ್ತಿದ್ದಾರೆ. ‘ಕಿರಣ್ ರಾಜ್ ಫೌಂಡೇಷನ್’ಮೂಲಕ ಸಾಕಷ್ಟು ಜನರ ನೋವಿಗೆ ಸ್ಪಂದಿಸಿದ್ದಾರೆ. ಕಿರಣ್ ರಾಜ್ ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದಕ್ಕಾಗಿ ಅವರು ಮುಂಬೈಗೆ ತೆರಳಿದ್ದರು. ಕಿರಣ್ ರಾಜ್ ಫೌಂಡೇಷನ್ ಕನಸು ಆರಂಭವಾಗಿದ್ದು ಅಲ್ಲಿಯೇ. ಕಿರಣ್ ರಾಜ್ ತಮ್ಮ ಒಟ್ಟೂ ಆದಾಯದಲ್ಲಿ ಶೇ.40ರಷ್ಟು ಗಳಿಕೆಯನ್ನು ಕಷ್ಟದಲ್ಲಿರುವವರ ಸಹಾಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಅಮ್ಮನ ಮಾತು ಕೇಳಿ ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ‘ಕನ್ನಡತಿ’ ಹೀರೋ ಕಿರಣ್ ರಾಜ್!
ಶಾಲಾ-ಕಾಲೇಜು ಪ್ರವೇಶ ಶುಲ್ಕ ಇಳಿಸಿ ಎಂಬ ಕೂಗಿಗೆ ಧ್ವನಿಯಾದ ಕಿರಣ್ ರಾಜ್; ಸಿಎಂ ಯಡಿಯೂರಪ್ಪಗೆ ಪತ್ರ