ಬಿಗ್ ಬಾಸ್ ಮನೆಯ ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಚಕ್ರವರ್ತಿ ಚಂದ್ರಚೂಡ್ ಅವರು ದೊಡ್ಮನೆ ಪ್ರವೇಶಿಸಿದ್ದರು. ಅವರು ಮನೆಗೆ ಬಂದ ನಂತರ ಮನೆಯಲ್ಲಿ ಸಾಕಷ್ಟು ಬದಲಾವಣೆ ಆಗಿವೆ. ಪ್ರಶಾಂತ್ ಸಂಬರ್ಗಿ ಜತೆ ಸೇರಿಕೊಂಡು ಅವರು ಮನೆಯನ್ನು ಇಬ್ಭಾಗ ಮಾಡೋಕೆ ಪ್ರಯತ್ನಪಟ್ಟಿದ್ದಾರೆ. ಆದರೆ, ಮನೆ ಸದಸ್ಯರು ಇದಕ್ಕೆ ಅವಕಾಶವನ್ನೇ ನೀಡಿಲ್ಲ. ಅಷ್ಟೇ ಅಲ್ಲ, ಅವರು ಮರೆಯದಂಥ ಪಾಠ ಒಂದನ್ನು ಕಲಿಸಿದ್ದಾರೆ.
ಬಿಗ್ ಬಾಸ್ ಮನೆಗೆ ಕಾಲಿಟ್ಟ ದಿನದಿಂದಲೂ ಚಕ್ರವರ್ತಿ ಸದಾ ಪ್ರಶಾಂತ್ ಜತೆಯಲ್ಲೇ ಇರುತ್ತಿದ್ದಾರೆ. ಅಷ್ಟೇ ಅಲ್ಲ, ಒಂದಲ್ಲಾ ಒಂದು ತಂತ್ರ ಹೆಣೆಯುತ್ತಿದ್ದಾರೆ. ಪ್ರತಿ ಸ್ಪರ್ಧಿಗಳ ಎದುರು ಒಂದು ರೀತಿ ಮಾತನಾಡಿದರೆ, ಹಿಂಬದಿಯಿಂದ ಒಂದು ರೀತಿ ಮಾತನಾಡುತ್ತಿದ್ದಾರೆ. ಇದು ಮನೆಯ ಎಲ್ಲಾ ಸದಸ್ಯರ ಗಮನಕ್ಕೆ ಬಂದಿದೆ. ಹೀಗಾಗಿ, ಈ ತಪ್ಪು ಮತ್ತೆ ಮಾಡದಂತೆ ನೋಡಿಕೊಳ್ಳಲು ಹೊಸ ಪಾಠ ಒಂದನ್ನು ಕಲಿಸಿದ್ದಾರೆ.
ಪ್ರತಿವಾರ ಬಿಗ್ ಬಾಸ್ ಮನೆಯಲ್ಲಿ ಕಳಪೆ ಪ್ರದರ್ಶನ ಯಾರದ್ದು ಎನ್ನುವುದು ಘೋಷಣೆ ಮಾಡಬೇಕು. ಇದು ಮನೆಯ ಸದಸ್ಯರಿಗೆ ಸಿಗುವ ಅತಿ ಕಡಿಮೆ ಗೌರವ. ಈ ಕಳಪೆ ಎನ್ನುವ ಪಟ್ಟ ಚಕ್ರವರ್ತಿ ಚಂದ್ರಚೂಡ್ ಅವರ ಪಾಲಾಗಿದೆ.
ಮನೆಯಲ್ಲಿ ಬಹುತೇಕ ಮಂದಿ ಚಕ್ರವರ್ತಿ ಹೆಸರನ್ನು ತೆಗೆದುಕೊಂಡರು. ಚಕ್ರವರ್ತಿ ಅವರು ಹೇಳುವ ಕಮೆಂಟ್ ಇಷ್ಟವಾಗಿಲ್ಲ, ಚಕ್ರವರ್ತಿ ನಡೆ ಇಷ್ಟವಾಗಿಲ್ಲ, ಅವರು ಬಂದ ಮೇಲೆ ಮನೆ ಒಡೆದು ಆಳುತ್ತಿದ್ದಾರೆ ಎನ್ನುವ ಆರೋಪವನ್ನು ಕೆಲವರು ಮಾಡಿದರು. ಮೊದಲು ಎಲ್ಲರೂ ಒಟ್ಟಿಗೆ ಕೂರುತ್ತಿದ್ದೆವು. ಈಗ ಎರಡು ಮೂರು ಗುಂಪುಗಳಾಗಿ ಕೂರುತ್ತಿದ್ದೇವೆ. ಇದಕ್ಕೆ ಚಕ್ರವರ್ತಿ ಕಾರಣ ಎಂದು ನಿಧಿ ಹೇಳಿದ್ದಾರೆ. ನನ್ನ ಟೀಂ ಸೋಲಿಗೆ, ಜಗಳಕ್ಕೆ ಚಕ್ರವರ್ತಿ ನೇರ ಕಾರಣ ಎಂದು ಆರೋಪಿಸಿದರು.
ಇದನ್ನೂ ಓದಿ: 96 ದಿನ ಜೈಲಿಗೆ ಹೋಗಿ ಬಂದಿದ್ದರಂತೆ ವೈಲ್ಡ್ ಕಾರ್ಡ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ! ಕಾರಣ?
‘ಮಂಜುನ ನಾನು ಸುಮ್ನೆ ಬಿಡಲ್ಲ’: ಸವಾಲು ಹಾಕಿ ಯುದ್ಧ ಶುರು ಮಾಡಿದ ಚಕ್ರವರ್ತಿ ಚಂದ್ರಚೂಡ್!