‘ಮೈಸೂರಿನ ಚಾಮುಂಡಿ ತಾಯಿ ಕರೆಯುತ್ತಿದ್ದಾಳೆ’; ಕನ್ನಡದಲ್ಲೇ ಮಾತನಾಡಿದ ಇಳಯರಾಜ

ಅ. 10 ರಂದು ಹಿರಿಯ ಸಂಗೀತ ನಿರ್ದೇಶಕ ಇಳಯರಾಜ ಮತ್ತು ತಂಡದವರಿಂದ ಸಂಗೀತ ಮನರಂಜನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಇಳಯರಾಜ ಮಾತನಾಡಿದ್ದಾರೆ.

‘ಮೈಸೂರಿನ ಚಾಮುಂಡಿ ತಾಯಿ ಕರೆಯುತ್ತಿದ್ದಾಳೆ’; ಕನ್ನಡದಲ್ಲೇ ಮಾತನಾಡಿದ ಇಳಯರಾಜ
ಇಳಯರಾಜ
Follow us
ರಾಜೇಶ್ ದುಗ್ಗುಮನೆ
|

Updated on: Oct 07, 2024 | 3:02 PM

ಮೈಸೂರಿನಲ್ಲಿ ಯುವ ದಸರಾ ಅದ್ದೂರಿಯಾಗಿ ನೆರವೇರುತ್ತಿದೆ. ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಅಕ್ಟೋಬರ್ 9ರಂದು ಎಆರ್ ರೆಹಮಾನ್ ಅವರು ಈ ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ. ಅದೇ ರೀತಿ ಅಕ್ಟೋಬರ್ 10ರಂದು ಇಳಯರಾಜ ತಂಡ ಪರ್ಫಾರ್ಮೆನ್ಸ್ ನೀಡಲಿದೆ. ಈ ಬಗ್ಗೆ ಇಳಯರಾಜ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲೇ ಮಾತನಾಡಿ ಖುಷಿ ಹೊರಹಾಕಿದ್ದಾರೆ

‘ಎಲ್ಲರಿಗೂ ನಮಸ್ಕಾರ. ಮೈಸೂರು ದಸಾರದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಚಾಮುಂಡಿ ದೇವಿ ಅನುಗ್ರಹ ಇದೆ ಎಂದು ಭಾವಿಸುತ್ತೇನೆ. ಅವಳೇ ನನ್ನ ಮೈಸೂರು ದರಸರಾಗೆ ಕರೆಯುತ್ತಿದ್ದಾಳೆ. ನನ್ನನ್ನು ಮಾತ್ರವಲ್ಲ, ನನ್ನ ತಂಡವನ್ನು ಕರೆಯುತ್ತಿದ್ದಾಳೆ. ಅವಳ ಆಶೀರ್ವಾದಿಂದ ಕಾರ್ಯಕ್ರಮ ಚೆನ್ನಾಗಿ ನಡೆಯಲಿದೆ ಎಂದು ನಾನು ಭಾವಿಸುತ್ತೇನೆ. ನಿಮ್ಮನ್ನು ನಾನು ನೋಡಬೇಕು, ನನ್ನನ್ನು ನೀವು ನೋಡಬೇಕು’ ಎಂದಿದ್ದಾರೆ ಇಳಯರಾಜ.

ಇಳಯರಾಜ ಅವರು ಸಾಕಷ್ಟು ಕಷ್ಟಪಟ್ಟು ಚಿತ್ರರಂಗದಲ್ಲಿ ನೆಲೆ ಕಂಡುಕೊಡರು. ಅವರು ಕಂಪೋಸ್ ಮಾಡಿದ ಹಾಡುಗಳಿಗೆ ಲೆಕ್ಕವೇ ಇಲ್ಲ. ಅವರ ಜೀವನ ಅನೇಕರಿಗೆ ಮಾದರಿ. ಅವರ ಮ್ಯೂಸಿಕ್ ಪ್ರೋಗ್ರಾಂ ಎಂದಾಗ ಸಹಜವಾಗಿಯೇ ಎಲ್ಲರಿಗೂ ನಿರೀಕ್ಷೆ ಮೂಡುತ್ತದೆ. ಸದ್ಯ ತಮಿಳಿನಲ್ಲಿ ಇಳಯರಾಜ ಅವರ ಬಯೋಪಿಕ್ ಕೂಡ ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ತಮಿಳಿನ ಖ್ಯಾತ ಹೀರೋ ಧನುಷ್ ಹೀರೋ. ಇಳಯರಾಜ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ.

ಇಳಯರಾಜ ಅವರು 1975ರ ಸಂದರ್ಭದಿಂದ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಅವರು ತಮಿಳಿನಲ್ಲಿ ಅನೇಕ ಸಿನಿಮಾಗಳನ್ನು ಕಂಪೋಸ್ ಮಾಡಿದ್ದಾರೆ. ‘ಮಾತು ತಪ್ಪದ ಮಗ’ ಚಿತ್ರದ ಮೂಲಕ ಅವರು ಕನ್ನಡಕ್ಕೂ ಕಾಲಿಟ್ಟರು. ಈ ಸಿನಿಮಾ ರಿಲೀಸ್ ಆಗಿದ್ದು 1978ರಲ್ಲಿ.

ಇದನ್ನೂ ಓದಿ: ಅಕ್ಟೋಬರ್​ 6 ರಂದು ಮೈಸೂರು ಯುವ ದಸರಾ ಆರಂಭ, ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ

‘ಜನ್ಮ ಜನ್ಮದ ಅನುಬಂಧ’, ‘ಗೀತಾ’, ‘ನೀ ನನ್ನ ಗೆಲ್ಲಲಾರೆ’ ‘ಪಲ್ಲವಿ ಅನುಪಲ್ಲವಿ’ ಸೇರಿ ಕನ್ನಡದ ಅನೇಕ ಹಾಡುಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರು ಕನ್ನಡದಲ್ಲೂ ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.