ತೆರಿಗೆ ತಪ್ಪಿಸಿದ ನಟಿಗೆ ಬಿತ್ತು ಬರೋಬ್ಬರಿ 338 ಕೋಟಿ ದಂಡ; ಮಾಜಿ ಪ್ರಿಯಕರನಿಂದಲೇ ಬಯಲಾಯ್ತು ಅಕ್ರಮ

| Updated By: ರಾಜೇಶ್ ದುಗ್ಗುಮನೆ

Updated on: Aug 30, 2021 | 2:59 PM

ನಟಿ ಜೆಂಗ್ ಶುವಾಂಗ್ ಚೀನಾದಲ್ಲಿ ತುಂಬಾನೇ ಫೇಮಸ್​. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ, ಚೀನಾ ಸರ್ಕಾರದ ಕಣ್ಣಿಗೆ ಮಣ್ಣೆರೆಚಲು ಹೋಗಿ ದೊಡ್ಡ ಮೊತ್ತದ ದಂಡ ವಿಧಿಸಿಕೊಂಡಿದ್ದಾರೆ.

ತೆರಿಗೆ ತಪ್ಪಿಸಿದ ನಟಿಗೆ ಬಿತ್ತು ಬರೋಬ್ಬರಿ 338 ಕೋಟಿ ದಂಡ; ಮಾಜಿ ಪ್ರಿಯಕರನಿಂದಲೇ ಬಯಲಾಯ್ತು ಅಕ್ರಮ
ತೆರಿಗೆ ತಪ್ಪಿಸಿದ ನಟಿಗೆ ಬಿತ್ತು ಬರೋಬ್ಬರಿ 338 ಕೋಟಿ ದಂಡ; ಮಾಜಿ ಪ್ರಿಯಕರನಿಂದಲೇ ಬಯಲಾಯ್ತು ಅಕ್ರಮ
Follow us on

ದೊಡ್ಡ ಸಂಭಾವನೆ ಪಡೆಯುವ ಬಹುತೇಕರು ತೆರಿಗೆಯಿಂದ ತಪ್ಪಿಸಿಕೊಳ್ಳಲು ನಾನಾ ಮಾರ್ಗಗಳ ಮೊರೆ ಹೋಗುತ್ತಾರೆ. ಕೆಲವರು ಕಡಿಮೆ ಆದಾಯ ತೋರಿಸಿ ತೆರಿಗೆಯಿಂದ ತಪ್ಪಿಸಿಕೊಂಡರೆ, ಇನ್ನೂ ಕೆಲವರು ಯಾರೂ ಊಹಿಸದ ಮಟ್ಟಕ್ಕೆ ಇಳಿದು ಸರ್ಕಾರದ ಕಣ್ಣಿಗೆ ಮಣ್ಣೆರೆಚುತ್ತಾರೆ. ಈ ರೀತಿ ಮಾಡೋದು ಅಪರಾಧ. ಇದಕ್ಕೆ ಎಲ್ಲಾ ರಾಷ್ಟ್ರಗಳಲ್ಲೂ ಕಠಿಣ ಶಿಕ್ಷೆ ಇದೆ. ಈಗ ಚೀನಾದಲ್ಲಿ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ.  ತೆರಿಗೆ ತಪ್ಪಿಸಿದ ನಟಿಗೆ ಬರೋಬ್ಬರಿ 338 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಈ ಪ್ರಕರಣ ಬೆಳಕಿಗೆ ಬಂದಿದ್ದು ಅವರ ಮಾಜಿ ಪ್ರಿಯಕರನಿಂದ ಅನ್ನೋದು ವಿಚಿತ್ರ.

ನಟಿ ಜೆಂಗ್ ಶುವಾಂಗ್ ಚೀನಾದಲ್ಲಿ ತುಂಬಾನೇ ಫೇಮಸ್​. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ, ಚೀನಾ ಸರ್ಕಾರದ ಕಣ್ಣಿಗೆ ಮಣ್ಣೆರೆಚಲು ಹೋಗಿ ದೊಡ್ಡ ಮೊತ್ತದ ದಂಡ ವಿಧಿಸಿಕೊಂಡಿದ್ದಾರೆ. ಚೀನಾದಲ್ಲಿ ಇತ್ತೀಚೆಗೆ ತೆರಿಗೆ ನಿಯಮಗಳನ್ನು ಕಠಿಣ ಗೊಳಿಸಲಾಗಿದೆ. ಜೆಂಗ್​ ತಪ್ಪು ಮಾಡಿದ್ದು ಸಾಬೀತಾಗಿದ್ದು, ಬರೋಬ್ಬರಿ 4.61 ಕೋಟಿ ಡಾಲರ್​ ಅಂದರೆ ಸುಮಾರು 338 ಕೋಟಿ ರೂಪಾಯಿ ದಂಡ ಬಿದ್ದಿದೆ.

ಜೆಂಗ್​ ಎರಡು ಪ್ರಾಜೆಕ್ಟ್​​ಗಳಿಗೆ ಸಹಿ ಹಾಕಿದ್ದರು. ನಿರ್ಮಾಪಕರಿಂದ ದೊಡ್ಡ ಮೊತ್ತದ ಸಂಭಾವನೆಯನ್ನೂ ಪಡೆದುಕೊಂಡಿದ್ದರು. ಆದರೆ, ತೆರಿಗೆಯಿಂದ ತಪ್ಪಿಸಿಕೊಳ್ಳಲು ಕಡಿಮೆ ಹಣ ಪಡೆದಿದ್ದೇನೆ ಎಂಬುದಾಗಿ ಬಿಂಬಿಸಿದ್ದರು. ಈ ಮೂಲಕ ಕಡಿಮೆ ತೆರಿಗೆ ಪಾವತಿ ಮಾಡಿದ್ದರು.

ಈ ಟ್ಯಾಕ್ಸ್​ ವಿಚಾರ ಬೆಳಕಿಗೆ ಬಂದಿದ್ದು ತುಂಬಾನೇ ಅಚ್ಚರಿಯ ರೀತಿಯಲ್ಲಿ. ನಿರ್ಮಾಪಕ ಜಾಂಗ್​ ಹೆಂಗ್​ ಜತೆ ಜೆಂಗ್​ ರಿಲೇಶನ್​ಶಿಪ್​ನಲ್ಲಿದ್ದರು. ಆದರೆ, ಇಬ್ಬರದ್ದೂ ಬ್ರೇಕಪ್​ ಆಗಿತ್ತು. ಜೆಂಗ್​ ಮಾಡಿದ ಅಕ್ರಮದ ಇಂಚಿಂಚು ಮಾಹಿತಿ ಜಾಂಗ್​ಗೆ ಇತ್ತು. ಅವರು ಆದಾಯ ತೆರಿಗೆ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಈ ಮೂಲಕ ನಟಿಯ ಅಕ್ರಮ ಬಯಲಿಗೆ ಬಂದಿತ್ತು.

ಈ ಮೊದಲು ಬಾಡಿಗೆ ತಾಯ್ತನದ ವಿಚಾರದಲ್ಲಿ ಜೆಂಗ್​ ಸುದ್ದಿಯಾಗಿದ್ದರು. ಅಮೆರಿಕದ ಮಹಿಳೆಯೊಬ್ಬಳನ್ನು ಬಾಡಿಗೆ ತಾಯಿ ಆಗಲು ನೇಮಿಸಿಕೊಂಡಿದ್ದರು. ಆದರೆ, ಬಾಯ್​ಫ್ರೆಂಡ್​ ಜತೆ ಜೆಂಗ್​ಗೆ ಬ್ರೇಕಪ್​ ಆಗಿತ್ತು. ಈ ವೇಳೆ ಅಬಾರ್ಷನ್​ ಮಾಡಿಕೊಳ್ಳುವಂತೆ ಮಹಿಳೆಗೆ ಒತ್ತಾಯ ಹೇರಿದ್ದರು ಜೆಂಗ್​.

ಇದನ್ನೂ ಓದಿ: ರಾಜ್​ಕುಮಾರ್​ ಸಿನಿಮಾ ಟೈಟಲ್​ ಮರುಬಳಕೆ ಮಾಡದಂತೆ ಅಭಿಮಾನಿಗಳ ಆಗ್ರಹ; ಸ್ಪಂದಿಸಿದ ಫಿಲ್ಮ್​ ಚೇಂಬರ್