ರಾಜ್ಕುಮಾರ್ ಸಿನಿಮಾ ಟೈಟಲ್ ಮರುಬಳಕೆ ಮಾಡದಂತೆ ಅಭಿಮಾನಿಗಳ ಆಗ್ರಹ; ಸ್ಪಂದಿಸಿದ ಫಿಲ್ಮ್ ಚೇಂಬರ್
ರಾಜ್ಕುಮಾರ್ ನಟನೆಯ ಬಹುತೇಕ ಚಿತ್ರಗಳು ಹಿಟ್ ಲಿಸ್ಟ್ನಲ್ಲಿವೆ. ಈ ಸಿನಿಮಾದ ಟೈಟಲ್ ಮರುಬಳಕೆಯಾದರೆ ಹೊಸ ಚಿತ್ರಕ್ಕೆ ಇದು ಪ್ಲಸ್ ಪಾಯಿಂಟ್ ಆಗುವುದರಲ್ಲಿ ಅನುಮಾನವಿಲ್ಲ.
ಡಾ. ರಾಜ್ಕುಮಾರ್ ಸಿನಿಮಾಗಳಿಗೆ ಈಗಲೂ ಬೇಡಿಕೆ ಇದೆ. ಅವರ ಸಿನಿಮಾ ಸಾಕಷ್ಟು ಜನರಿಗೆ ಸ್ಫೂರ್ತಿ. ಈ ಕಾರಣಕ್ಕೆ ಅನೇಕ ನಿರ್ಮಾಪಕರು ರಾಜ್ಕುಮಾರ್ ಸಿನಿಮಾ ಹೆಸರನ್ನು ಮರುಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇನ್ನುಮುಂದೆ ಇದು ಸಾಧ್ಯವಿಲ್ಲ. ಏಕೆಂದರೆ, ಅಭಿಮಾನಿಗಳು ಈ ಬಗ್ಗೆ ನೀಡಿದ ಮನವಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಪಂದಿಸಿದೆ.
ರಾಜ್ಕುಮಾರ್ ನಟನೆಯ ಬಹುತೇಕ ಚಿತ್ರಗಳು ಹಿಟ್ ಲಿಸ್ಟ್ನಲ್ಲಿವೆ. ಈ ಸಿನಿಮಾದ ಟೈಟಲ್ ಮರುಬಳಕೆಯಾದರೆ ಹೊಸ ಚಿತ್ರಕ್ಕೆ ಇದು ಪ್ಲಸ್ ಪಾಯಿಂಟ್ ಆಗುವುದರಲ್ಲಿ ಅನುಮಾನವಿಲ್ಲ. ಆದರೆ, ರಾಜ್ಕುಮಾರ್ ಅವರ ಚಿತ್ರದ ಟೈಟಲ್‌ಗಳಿಗೆ ತಕ್ಕಂತೆ ಸಿನಿಮಾಗಳು ಸಿದ್ಧವಾಗುತ್ತಿಲ್ಲ ಎಂಬುದು ರಾಜ್ ಕುಮಾರ್ ಅಭಿಮಾನಿ ಸಂಘಗಳ ಅಭಿಪ್ರಾಯ. ರಾಜ್ಕುಮಾರ್ ಸಿನಿಮಾ ಬಗ್ಗೆ ಯೂಟ್ಯೂಬ್ ಮೊದಲಾದ ಕಡೆ ಹುಡುಕಾಟ ನಡೆಸಿದರೆ ಮರುಬಳಕೆಯಾದ ಸಿನಿಮಾಗಳ ಟೈಟಲ್ ರಾರಾಜಿಸುತ್ತದೆ. ಇದಕ್ಕೆ ಕಡಿವಾಣ ಹಾಕಬೇಕು ಅನ್ನೋ ಉದ್ದೇಶವೂ ಇದರಲ್ಲಿ ಸೇರಿದೆ.
ಈ ಕಾರಣಕ್ಕೆ ರಾಜ್ಕುಮಾರ್ ಅವರ ಹಳೆಯ ಸಿನಿಮಾದ ಟೈಟಲ್ಗಳ ಮರು ಬಳಕೆಗೆ ಬ್ರೇಕ್ ಬೀಳಬೇಕು ಎಂದು ಅಣ್ಣಾವ್ರ ಅಭಿಮಾನಿ ಸಂಘದವರು ಒತ್ತಾಯಿಸಿದ್ದಾರೆ. ಇಂದು (ಆಗಸ್ಟ್ 30) ಕರ್ನಾಕಟ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದಾರೆ. ಈ ಮನವಿಗೆ ವಾಣಿಜ್ಯ ಮಂಡಳಿ ಸ್ಪಂದಿಸಿದೆ. ರಾಜ್ಕುಮಾರ್ ಟೈಟಲ್ ಮರುಬಳಕೆಗೆ ಅವಕಾಶ ನೀಡುವುದಿಲ್ಲ ಎನ್ನುವ ಭರವಸೆ ನೀಡಿದೆ.
ಚಲನಚಿತ್ರ ವಾಣಿಜ್ಯ ಮಂಡಳಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ಇದ್ದರೆ ಉಗ್ರ ಹೋರಾಟ ಮಾಡುವುದಾಗಿ ರಾಜ್ಕುಮಾರ್ ಅಭಿಮಾನಿ ಸಂಘದವರು ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: ಶಿವಣ್ಣ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿರುವ ‘ನೀ ಸಿಗೋವರೆಗೂ’ ಚಿತ್ರಕ್ಕೆ ಕಿಚ್ಚ ಸುದೀಪ್ ಶುಭಕೋರಿದ್ದು ಹೀಗೆ!
ಕ್ಯಾಬ್ ಡ್ರೈವರ್ಗಳ ಕಥೆ ಹೇಳುವ ‘ಯೆಲ್ಲೋ ಬೋರ್ಡ್’; ಕಿಚ್ಚ ಶುಭಕೋರಿದ ಈ ಸಿನಿಮಾದಲ್ಲಿ ಏನಿದೆ ವಿಶೇಷ?