ಖ್ಯಾತ ನಾಮನ ಕಿರುಕುಳದ ಬಗ್ಗೆ ಹೇಳಿದ್ದೇ ತಪ್ಪಾಯ್ತು; ಗಾಯಕಿಯ ಬೆತ್ತಲೆ ಫೋಟೋ ಹರಿಬಿಟ್ಟ ಕಿಡಿಗೇಡಿಗಳು

ಗಾಯಕಿ ಚಿನ್ಮಯಿ ಶ್ರೀಪಾದಾ ಆನ್‌ಲೈನ್‌ನಲ್ಲಿ ತೀವ್ರ ಕಿರುಕುಳಕ್ಕೆ ಒಳಗಾಗಿದ್ದಾರೆ. ಅವರ ಮಾರ್ಫ್ ಮಾಡಿದ ನಗ್ನ ಫೋಟೋ ಹಂಚಿಕೊಂಡ ನಂತರ, ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ಪತಿಯ ಮಂಗಳಸೂತ್ರದ ಬಗ್ಗೆ ಮಾಡಿದ ಕಾಮೆಂಟ್‌ಗಳಿಂದ ಈ ಕಿರುಕುಳ ಹೆಚ್ಚಾಗಿದೆ. ಮಹಿಳೆಯರನ್ನು ಗುರಿಯಾಗಿಸಲು ತಂತ್ರಜ್ಞಾನವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಚಿನ್ಮಯಿ ವಿವರಿಸಿದ್ದಾರೆ.

ಖ್ಯಾತ ನಾಮನ ಕಿರುಕುಳದ ಬಗ್ಗೆ ಹೇಳಿದ್ದೇ ತಪ್ಪಾಯ್ತು; ಗಾಯಕಿಯ ಬೆತ್ತಲೆ ಫೋಟೋ ಹರಿಬಿಟ್ಟ ಕಿಡಿಗೇಡಿಗಳು
Chinmayi
Updated By: ರಾಜೇಶ್ ದುಗ್ಗುಮನೆ

Updated on: Dec 11, 2025 | 1:15 PM

ಗಾಯಕಿ ಹಾಗೂ ಡಬ್ಬಿಂಗ್ ಆರ್ಟಿಸ್ಟ್ ಚಿನ್ಮಿಯಿ ಶ್ರೀಪಾದ್ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ದಿನಚರಿಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಡಿಸೆಂಬರ್ 10ರಂದು ಅವರು ತಮ್ಮದೇ ಫೋಟೋ ಹಂಚಿಕೊಂಡಿದ್ದರು. ಅದುಕೂಡ ಬೆತ್ತಲೆ ಫೋಟೋ. ಇದು ಫೇಜ್ ಫೋಟೋ. ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ. ಈ ವಿಷಯವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತಾವು ಆನ್​​ಲೈನ್​ನಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿದರು.

ಇತ್ತೀಚೆಗೆ ಸೆಲೆಬ್ರಿಟಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ತೊಂದರೆ ಎದುರಾಗುತ್ತಿದೆ. ಎಲ್ಲರೂ ಪೊಲೀಸರಿಗೆ ದೂರು ನೀಡುತ್ತಿದ್ದಾರೆ. ತಮಗೆ ಬಂದ ಕೆಟ್ಟ ಸಂದೇಶ​ಗಳ ಪ್ರಕರಣದಲ್ಲಿ ರಮ್ಯಾ ಪೊಲೀಸರಿಗೆ ದೂರ ನೀಡಿದ್ದರು. ಈ ದೂರನ್ನು ಆಧರಿಸಿ ಕೆಲವರನ್ನು ಬಂಧಿಸಲಾಗಿತ್ತು. ಚಿನ್ಮಯಿ ಕೂಡ ಹಾಗೆಯೇ ಮಾಡಿದ್ದಾರೆ. ಹೈದರಾಬಾದ್ ನಗರ ಪೊಲೀಸ್ ಕಮಿಷನರ್​ಗೆ ದೂರು ನೀಡಿದ್ದಾರೆ.

ಕೆಲವು ವಾರಗಳ ಹಿಂದೆ ಅವರ ಪತಿ, ನಿರ್ಮಾಪಕ-ನಟ ರಾಹುಲ್ ರವೀಂದ್ರನ್ ಮಂಗಳಸೂತ್ರದ ಬಗ್ಗೆ ಕಾಮೆಂಟ್ ಮಾಡಿದ ನಂತರ ದ್ವೇಷ ತೀವ್ರಗೊಂಡಿದೆ ಎಂದು ಚಿನ್ಮಯಿ ವಿವರಿಸಿದರು. ಅಂದಿನಿಂದ, ತಮ್ಮ ಮತ್ತು ಅವರ ಕುಟುಂಬದ ವಿರುದ್ಧದ ಟ್ರೋಲ್ ಹೆಚ್ಚಾಗಿದೆ ಎಂದಿದ್ದಾರೆ. ‘ಮಂಗಳಸೂತ್ರ ಧರಿಸೋದು ಬಿಡೋದು ಪತ್ನಿಗೆ ಬಿಟ್ಟ ಸ್ವಾತಂತ್ರ್ಯ’ ಎಂದಿದ್ದರು ರಾಹುಲ್.

‘ನಾನು ಫೇಕ್ ಫೋಟೋ ವಿಷಯಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಕಾನೂನು ಕ್ರಮ ಕೈಗೊಳ್ಳುತ್ತದೆಯೇ ಅಥವಾ ಇಲ್ಲವೋ ಎಂಬುದು ಗೊತ್ತಿಲ್ಲ. ಕಳೆದ 8-10 ವಾರಗಳಿಂದ ನಮ್ಮ ಕುಟುಂಬಕ್ಕೆ ಕಿರುಕುಳ ನೀಡಲು ಕೆಲವರಿಗೆ ಹಣ ನೀಡಲಾಗಿದೆ ’ ಎಂದು ಅವರು ಆರೋಪಿಸಿದರು.

‘ನನ್ನ ಮೇಲೆ ದೌರ್ಜನ್ಯ ಎಸಗಲಾಗಿದೆ. ನನ್ನ ಮಕ್ಕಳಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ತಮಗೆ ಇಷ್ಟವಿಲ್ಲದ ಮಹಿಳೆಯರು ಎಂದಿಗೂ ಮಕ್ಕಳನ್ನು ಹೊಂದಬಾರದು. ಒಂದೊಮ್ಮೆ ಈಗಾಗಲೇ ಅವರಿಗೆ ಮಕ್ಕಳು ಹುಟ್ಟಿದ್ದರೆ ಅವರು ಸಾಯಬೇಕು ಎಂದು ಕೆಲವರು ಹೇಳಿದ್ದಾರೆ. ಇದು ಕೆಲವರಿಗೆ ನಗು ತರಿಸಿದೆ’ ಎಂದು ಬೇಸರ ಮಾಡಿಕೊಂಡಿದ್ದಾರೆ ಅವರು.

ಗೀತರಚನೆಕಾರರೊಬ್ಬರ ಕಿರುಕುಳದ ಬಗ್ಗೆ ಮಾತನಾಡಿದಾಗಿನಿಂದ ತನ್ನನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ ಎಂದು ಚಿನ್ಮಯಿ ಹೇಳಿದರು. ‘ಬಹಳಷ್ಟು ಜನರು ನನ್ನನ್ನು ನಿಂದಿಸಿದ್ದಾರೆ. ಅವರಿಗೆ ರಾಜಕೀಯ ಗುಂಪುಗಳು ಹಣ ನೀಡಿವೆ. ಇಂದು ಒಂದು ನಿರ್ದಿಷ್ಟ ಟ್ವೀಟ್‌ನಲ್ಲಿ ನನ್ನ ನಗ್ನ ಮಾರ್ಫ್ ಮಾಡಿದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ರೀತಿಯ ವಿಷಯಗಳು ನಡೆಯುತ್ತವೆ ಎಂದು ಮಹಿಳೆಯರಿಗೆ ತಿಳಿದಿರಲಿ ಎಂದು ನಾನು ಈ ವಿಷಯ ಹೇಳುತ್ತಿದ್ದೇನೆ. ಪುರುಷರು ನಮ್ಮನ್ನು ಸಾರ್ವಜನಿಕ ಸ್ಥಳಗಳಿಂದ ಹೊರಗೆ ತಳ್ಳಲು ಇದನ್ನು ಮಾಡುತ್ತಾರೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ವಿಮಾನ ನಿಲ್ದಾಣದ ಪರಿಸ್ಥಿತಿ ನೆನೆದು ಗಾಯಕಿ ಅನನ್ಯಾ ಪ್ರಕಾಶ್ ಕಣ್ಣೀರು

‘ಭವಿಷ್ಯದಲ್ಲಿ ಈ ರೀತಿಯ ತೊಂದರೆಗಳು ತುಂಬಾ ಸಾಮಾನ್ಯವಾಗಲಿದೆ, ಅಲ್ಲಿ ಪುರುಷರು ಯಾವಾಗಲೂ ತಂತ್ರಜ್ಞಾನ, ಶಕ್ತಿಯನ್ನು ಬಳಸಿಕೊಂಡು ತಮಗೆ ಇಷ್ಟವಿಲ್ಲದ ಮಹಿಳೆಯರನ್ನು ಕೆಣಕುತ್ತಾರೆ. ಈ ಮೊದಲು ಪುರಷರು, ಮಹಿಳೆಯರನ್ನು ಮಾಟಗಾತಿಯರು, ಮತ್ತು ವೇಶ್ಯೆಯರು ಎಂದು ಕರೆಯುತ್ತಿದ್ದರು. ಮಹಿಳೆಯನ್ನು ಬಯಸಿ ಅವಳು ಸಿಗದಿದ್ದರೆ, ಅವರು ಅವಳ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಾರೆ. ಇದರಿಂದ ಅವಳ ಜೀವನವು ದುಃಖಕರವಾಗಿರುತ್ತದೆ. ಇದು ಯಾವಾಗಲೂ ಸಮಾಜದಲ್ಲಿ ನಡೆದೇ ಇದೆ’ ಎಂದರು ಚಿನ್ಮಯಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:00 pm, Thu, 11 December 25