AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡೆವಿಲ್’ಗೆ ರೇಟಿಂಗ್ ಕೊಡಂಗಿಲ್ಲ; ಕೋರ್ಟ್​ನಿಂದ ಆರ್ಡರ್ ತಂದಿದ್ದಕ್ಕೆ ಕಾರಣ ತಿಳಿಸಿದ ದಿನಕರ್

‘ಡೆವಿಲ್’ ಸಿನಿಮಾ ಬಿಡುಗಡೆಯಾಗಿದ್ದು ಅಭಿಮಾನಿಗಳ ವಲಯದಲ್ಲಿ ಒಳ್ಳೆಯ ಟಾಕ್ ಇದೆ. ಉದ್ದೇಶಪೂರ್ವಕ ನೆಗೆಟಿವ್ ವಿಮರ್ಶೆಗಳ ಭೀತಿಯಿಂದಾಗಿ ಚಿತ್ರತಂಡ ಬುಕ್ ಮೈ ಶೋನಲ್ಲಿ ರೇಟಿಂಗ್ ನಿಷ್ಕ್ರಿಯಗೊಳಿಸಿದೆ. ಕೋರ್ಟ್ ಆದೇಶದಂತೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹಣಕ್ಕಾಗಿ ನಡೆಯುವ ಸುಳ್ಳು ವಿಮರ್ಶೆಗಳಿಂದ ಚಿತ್ರರಂಗವನ್ನು ರಕ್ಷಿಸುವ ಉದ್ದೇಶ ಇದರ ಹಿಂದಿದೆ ಎಂದು ದಿನಕರ್ ಸ್ಪಷ್ಟಪಡಿಸಿದ್ದಾರೆ.

‘ಡೆವಿಲ್’ಗೆ ರೇಟಿಂಗ್ ಕೊಡಂಗಿಲ್ಲ; ಕೋರ್ಟ್​ನಿಂದ ಆರ್ಡರ್ ತಂದಿದ್ದಕ್ಕೆ ಕಾರಣ ತಿಳಿಸಿದ ದಿನಕರ್
ಡೆವಿಲ್
ರಾಜೇಶ್ ದುಗ್ಗುಮನೆ
|

Updated on: Dec 11, 2025 | 2:35 PM

Share

‘ಡೆವಿಲ್’ ಸಿನಿಮಾ (Devil Movie) ಅದ್ದೂರಿಯಾಗಿ ಇಂದು (ಡಿಸೆಂಬರ್ 11) ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಕೆಲವರು ಸಿನಿಮಾ ಬಗ್ಗೆ ನೆಗೆಟಿವ್ ವಿಮರ್ಶೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.‘ಡೆವಿಲ್’ ಸಿನಿಮಾಗೆ ಕೆಲವರು ಉದ್ದೇಶಪೂರ್ವಕವಾಗಿ ನೆಗೆಟಿವ್ ವಿಮರ್ಶೆ ನೀಡುವ ಭಯ ಇದೆ. ಈ ಕಾರಣದಿಂದಲೇ ‘ಡೆವಿಲ್’ ತಂಡ ಒಂದು ನಿರ್ಧಾರ ಮಾಡಿದೆ. ಕೋರ್ಟ್​ನಿಂದ ಈ ಬಗ್ಗೆ ಆದೇಶ ತಂದಿದ್ದು, ಟಿಕೆಟ್ ಬುಕಿಂಗ್ ಆ್ಯಪ್ ಬುಕ್ ಮೈ ಶೋನಲ್ಲಿ ರೇಟಿಂಗ್ ನೀಡಲು ಸಾಧ್ಯವಿಲ್ಲ. ಈ ನಿರ್ಧಾರಕ್ಕೆ ಕಾರಣ ಏನು ಎಂಬುದು ರಿವೀಲ್ ಆಗಿದೆ.

ಸಿನಿಮಾನ ನೋಡಿದ ಬಳಿಕ ಬುಕ್ ಮೈ ಶೋ ಮೂಲಕ ರೇಟಿಂಗ್ ನೀಡಬಹುದು. ಸಿನಿಮಾ ವೀಕ್ಷಣೆ ಮಾಡಿದ್ದರೆ ಮಾತ್ರ ರೇಟಿಂಗ್ ನೀಡಲು ಅವಕಾಶ ಇರುತ್ತದೆ. ಈ ರೇಟಿಂಗ್ ನೂರಕ್ಕೆ ನೂರರಷ್ಟು ನಿಖರವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ಸಿನಿಮಾ ಚೆನ್ನಾಗಿದ್ದರೂ ದ್ವೇಷದ ಕಾರಣಕ್ಕೆ ಹೊಟ್ಟೆ ಉರಿದುಕೊಂಡು ನೆಗೆಟಿವ್ ವಿಮರ್ಶೆ ಕೊಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಬಾರದು ಎಂಬ ಕಾರಣದಿಂದಲೇ ಬುಕ್ ಮೈ ಶೋನಲ್ಲಿ ರೇಟಿಂಗ್ ಕೊಡುವ ಅವಕಾಶಕ್ಕೆ ಬ್ರೇಕ್ ಹಾಕಲಾಗಿದೆ.

ಸಿನಿಮಾ ವೀಕ್ಷಿಸಿದ ಬಳಿಕ ಅನೇಕರು ಬುಕ್ ಮೈ ಶೋನಲ್ಲಿ ರೇಟಿಂಗ್ ಕೊಡಲು ಹೋಗಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ‘ಕೋರ್ಟ್ ಆದೇಶದಂತೆ ರೇಟಿಂಗ್ ಹಾಗೂ ವಿಮರ್ಶೆಯನ್ನು ನಿಷ್ಕ್ರಿಯಗೊಳಿಸಲಾಗಿದೆ’ ಎಂದು ಹೇಳುವ ಸಂದೇಶ ಕಾಣುತ್ತದೆ. ಈ ಬಗ್ಗೆ ದಿನಕರ್ ಮಾತನಾಡಿದ್ದಾರೆ.

ಇದನ್ನೂ ಓದಿ: ಎಲ್ಲ ಹೀರೋಯಿನ್​ಗಳಂತಲ್ಲ ‘ಡೆವಿಲ್’ ನಾಯಕಿ; ರಚನಾ ರೈ ಬಗೆಗಿನ ಅಪರೂಪದ ಮಾಹಿತಿ ‘ಬುಕ್ ಮೈ ಶೋ ನೆಗೆಟಿವ್ ವಿಮರ್ಶೆ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಅದನ್ನು ಆಫ್ ಮಾಡಿಸಿದ್ದೇವೆ. ದುಡ್ಡು ಕೊಟ್ಟು ರೇಟಿಂಗ್ ಮಾಡಿಸೋ ಕೆಲಸ ಆಗುತ್ತಿದೆ. ಈ ಮೂಲಕ ಸಿನಿಮಾ ಸಂಸ್ಕೃತಿಯನ್ನು ಹಾಳು ಮಾಡುವ ಕೆಲಸ ಆಗುತ್ತಾ ಇದೆ. ನನ್ನ ರಾಯಲ್ ಸಿನಿಮಾಗೂ ಇದೇ ಅನುಭವ ಆಗಿದೆ.ಆಗ ಬೇಕೆಂದು ಸಿನಿಮಾಗೆ ನೆಗೆಟಿವ್ ವಿಮರ್ಶೆ ಕೊಡಿಸಿದ್ದರು. ಅದಕ್ಕೆ ಈ ನಿರ್ಧಾರ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಎಲ್ಲ ವಿಷಯಕ್ಕೂ ಸ್ಪಷ್ಟನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.